ಹಾಸನ: ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ವತಿಯಿಂದ ಸಂಕ್ರಾಂತಿ ಹಬ್ಬದ ಪ್ರಯುಕ್ತ ದಿನಾಂಕ 13.01.2026 ಮಂಗಳವಾರ ಸಂಜೆ 5 ಗಂಟೆಗೆ ಹಾಸನ ತಾಲ್ಲೂಕಿನ ನಾಗತವಳ್ಳಿ ಗ್ರಾಮದಲ್ಲಿ “ಸನ್ ರೈಸ್ ಸಂಕ್ರಾಂತಿ ಸುಗ್ಗಿ” (S.S.S) ಎಂಬ ವಿಶಿಷ್ಟ ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಗ್ರಾಮದ ರೈತ ನಾಗೇಶ್ ಅವರ ರಾಗಿ ಕಣವನ್ನು ಸುಗ್ಗಿಯ ಸಂಕೇತವಾಗಿ ಸಾಂಪ್ರದಾಯಿಕವಾಗಿ ಶೃಂಗರಿಸಲಾಗಿತ್ತು. ರಾಗಿಯ ರಾಶಿಯನ್ನು ಅಲಂಕಾರಗೊಳಿಸಿ, ಕುಂಭಗಳನ್ನು ಸುಂದರವಾಗಿ ಜೋಡಿಸುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಾಯಿತು. ಸಂಪ್ರದಾಯದಂತೆ ರಾಶಿಗೆ ಪೂಜೆ ಸಲ್ಲಿಸಿ ಸುಗ್ಗಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕ್ಲಬ್ ಅಧ್ಯಕ್ಷ ರೋ. ವಜ್ರಕುಮಾರ್ ಅವರು, ಸಂಕ್ರಾಂತಿ ಹಾಗೂ ಸುಗ್ಗಿ ಸಂಪ್ರದಾಯದ ಮಹತ್ವವನ್ನು ವಿವರಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರೈತ ನಾಗೇಶ್, ಲಕ್ಷ್ಮೇಗೌಡ ಹಾಗೂ ಅವರ ಕುಟುಂಬವನ್ನು ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ವತಿಯಿಂದ ಸನ್ಮಾನಿಸಲಾಯಿತು.
ಸುಮಾರು 50ಕ್ಕೂ ಹೆಚ್ಚು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮದಲ್ಲಿ ಕ್ಲಬ್ ಕಾರ್ಯದರ್ಶಿ ರೋ. ಕೆ.ಎಸ್. ಯೋಗೇಶ್, ಖಜಾಂಚಿ ರೋ. ಗವಿಗೌಡ, ನಿರ್ದೇಶಕರುಗಳಾದ ರೋ. ಸಿದ್ದನಂಜಪ್ಪ, ರೋ. ರಾಜೇಶ್ ಸೇರಿದಂತೆ ಕ್ಲಬ್ನ ಇತರೆ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ನೆರೆದಿದ್ದ ಗ್ರಾಮಸ್ಥರಿಗೆ ಸಿಹಿ ವಿತರಣೆ ಮಾಡಲಾಯಿತು.
