ಕೆ.ಆರ್.ಪೇಟೆ- ಡೈರಿಯ ನೂತನ ನಿರ್ದೇಶಕರಿಗೆ ಸಮಾಜ ಸೇವಕ ಆರ್ ಟಿ ಮಲ್ಲಿಕಾರ್ಜುನ್ ಅಭಿನಂದನೆ ಸಲ್ಲಿಸಿದರು.
ತಾಲ್ಲೂಕಿನ ಬೂಕನಕೆರೆ ಹೋಬಳಿ ಗಂಜಿಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾದ ನಾಗೇಗೌಡ,ವೆಂಕಟರಮೆಗೌಡ,ಕರೀಯಮ್ಮ,ಚಂದ್ರಮ್ಮ,ಜಿ.ಎಂ.ರವಿ,ಚಲುವಯ್ಯ,ಜಲೇಂದ್ರ,ಗಿರೀಶಗೌಡ, ನೂತನ ನಿರ್ದೇಶಕರಿಗೆ ಕೆ.ಆರ್.ಪೇಟೆ ಪಟ್ಟಣದ ಜಯನಗರ ಬಡಾವಣೆಯಲ್ಲಿರುವ ಆರ್.ಟಿ.ಓ ಮಲ್ಲಿಕಾರ್ಜುನ್ ಶ್ರೀ ಮಲ್ಲಿಕಾರ್ಜುನ ಚಾರಿಟಬಲ್ ಟ್ರಸ್ಟ್ ಕಚೇರಿಯಲ್ಲಿ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಿ ಅಭಿನಂದಿಸಿ ಮಾತನಾಡಿದ ಅವರು, ನೂತನ ನಿರ್ದೇಶಕರು ತಮ್ಮ ಆಡಳಿತ ಅವಧಿಯಲ್ಲಿ ಸಂಘದ ಸದಸ್ಯರಿಗೆ ಸರ್ಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು ಸಂಘದ ಚಟುವಟಿಕೆಯಲ್ಲಿ ರಾಜಕೀಯ ಮಾಡದೇ, ಎಲ್ಲರೂ ಒಂದುಗೂಡಿ ಸಂಘದ ಅಭಿವೃದ್ಧಿಗೆ ಮುಂದಾಗುವುದರ ಜೊತೆಗೆ ಉತ್ಪಾದಕರು ಗುಣಮಟ್ಟದ ಹಾಲನ್ನು ಹಾಕಿದರೆ ಮಾತ್ರ ಸಂಘ ಮತ್ತು ಉತ್ಪಾದಕರಿಗೆ ಆದಾಯ ಹೆಚ್ಚುತ್ತದೆ, ಸಂಘಕ್ಕೂ ಒಳ್ಳೆಯ ಹೆಸರು ಬರುತ್ತದೆ, ನಮ್ಮ ತಾಲ್ಲೂಕಿನಲ್ಲಿ ಅತಿ ಹೆಚ್ಚು ರೈತರು ಹೈನುಗಾರಿಕೆಯಲ್ಲಿ ತೊಡಗಿಕೊಂಡಿದ್ದು, ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ, ಹಾಲಿನ ಪೂರೈಕೆಯಲ್ಲಿ ಗುಣಮಟ್ಟ ಕಾಪಾಡಿಕೊಂಡು ಆರ್ಥಿಕವಾಗಿ ಪ್ರಬಲರಾಗಬೇಕೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಬಳಿಕ ನೂತನ ನಿರ್ದೇಶಕರು ಜೊತೆಗೂಡಿ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ರವರನ್ನ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ರಾಕೇಶ್,ಗಂಜಿಗೆರೆ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ರೇವಣ್ಣ, ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ಮಂಜುನಾಥ್,ಗ್ರಾ.ಪಂ ಮಾಜಿ ಉಪಾಧ್ಯಕ್ಷ ಮಹಾದೇವೇಗೌಡ,ಆರ್.ಟಿ. ಓ ಮಲ್ಲಿಕಾರ್ಜುನ್ ಅಭಿಮಾನಿ ಬಳಗ ಅಧ್ಯಕ್ಷ ಗಂಜಿಗೆರೆ ಮಹೇಶ್,ಹಾಲು ಉತ್ಪಾದಕರ ಸಂಘದ ಮಾಜಿ ನಿರ್ದೇಶಕರುಗಳಾದ ದೊಡ್ಡಸ್ವಾಮಿಗೌಡ, ದೇವರಾಜು, ಮಹೇಶ್, ಶಂಕರೇಗೌಡ, ಬೋಜೇಗೌಡ, ಮುಖಂಡರುಗಳಾದ ಕೃಷ್ಣೆಗೌಡ, ಪುಟ್ಟೇಗೌಡ, ಕುಮಾರ್, ಮಂಜುನಾಥ್, ಧರ್ಮರಾಜ್, ಕೃಷ್ಣೆಗೌಡ, ಲೋಕೇಶ್ ಕೂಡಲಕುಪ್ಪೆ,ಅಶೋಕ್,ಸೇರಿದಂತೆಗ್ರಾಮದ ಮುಖಂಡರು ಇದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ

weed delivery usa trusted secure