ರಾಮೇನಹಳ್ಳಿ : ರಾಜ್ಯಮಟ್ಟದ ಕವಿಗೋಷ್ಠಿ ಹಾಗೂ ರಂಗಗೀತೆ ಗಾಯನ ಕಾರ್ಯಕ್ರಮವು ಹೊಳೆನರಸೀಪುರ ತಾಲೂಕಿನ ರಾಮೇನಹಳ್ಳಿಯಲ್ಲಿ ಭವ್ಯವಾಗಿ ನಡೆಯಲು ಸಜ್ಜಾಗಿದೆ.
ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಹಾಗೂ ಕದಂಬ ಸೈನ್ಯ ಹೊಳೆನರಸೀಪುರ ತಾಲೂಕು ಘಟಕಗಳ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ದಿನಾಂಕ 24-05-2026ರಂದು ರಾಮೇನಹಳ್ಳಿಯ ಕಲ್ಕಿ ಪರಂಜೋತಿ ದೇವಸ್ಥಾನದಲ್ಲಿ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಿ ಮಧ್ಯಾಹ್ನ 2 ಗಂಟೆಗೆ ಸಮಾಪ್ತಿಯಾಗಲಿದೆ.
ಈ ಕಾರ್ಯಕ್ರಮವು ಪ್ರಸಿದ್ಧ ನಾಟಕಕಾರ, ಕಾದಂಬರಿಕಾರ ಹಾಗೂ ಪತ್ರಿಕೋದ್ಯಮಿಯಾಗಿದ್ದ ದಿವಂಗತ ಬಿ. ಪುಟ್ಟಸ್ವಾಮಯ್ಯ ಅವರ 129ನೇ ಜನ್ಮದಿನದ ಅಂಗವಾಗಿ ನಡೆಯುತ್ತಿದ್ದು, ಅವರ ಬದುಕು ಮತ್ತು ಸಾಹಿತ್ಯ ಸಾಧನೆಗಳ ಕುರಿತು ಉಪನ್ಯಾಸ, ರಂಗಗೀತೆ ಗಾಯನ ಹಾಗೂ ಕವಿಗೋಷ್ಠಿ ಆಯೋಜಿಸಲಾಗಿದೆ.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಮೇನಹಳ್ಳಿ ಪುಟ್ಟಸ್ವಾಮಿಗೌಡರು ಹಾಗೂ ಆರ್.ಕೆ. ಕದಂಬ ಸೈನ್ಯ ಹೊಳೆನರಸೀಪುರ ತಾಲೂಕು ಘಟಕದ ಅಧ್ಯಕ್ಷ ಪುಟ್ಟಸ್ವಾಮಿಗೌಡ ಅವರ ತಾಯಿ ಕಾಳಮ್ಮ ಸಣ್ಣಸ್ವಾಮಿಗೌಡ ಅವರ 102ನೇ ವರ್ಷದ ಸವಿ ನೆನಪಿನ ಶುಭಾಶಯಗಳನ್ನೂ ಈ ಸಂದರ್ಭದಲ್ಲಿ ಹಂಚಿಕೊಳ್ಳಲಾಗುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ರಂಗಗೀತೆ ಗಾಯನದಲ್ಲಿ ಭಾಗವಹಿಸುವ ಕಲಾವಿದರು ಹಾಗೂ ಕವಿಗಳು ತಮ್ಮ ಹೆಸರುಗಳನ್ನು ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಸಿ.ಆರ್. (ಮೊಬೈಲ್: 7483491166) ಅಥವಾ ಪುಟ್ಟಸ್ವಾಮಿಗೌಡರು (ಮೊಬೈಲ್: 7483344770) ಅವರನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳುವಂತೆ ಕೋರಲಾಗಿದೆ.
ಈ ಕಾರ್ಯಕ್ರಮವು ಕನ್ನಡ ಸಾಹಿತ್ಯ, ರಂಗಭೂಮಿ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಲಾಗುತ್ತಿದೆ ಎಂದು ಸಂಘಟಕರು ತಿಳಿಸಿದ್ದಾರೆ.
