ಟಿ.ನರಸೀಪುರ : ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಉತ್ತಮ ಸಾಧನೆಗಳನ್ನು ಹಾಗೂ ಹುಳುಕುಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಪತ್ರಿಕೆಗಳು ವಸ್ತು ನಿಷ್ಠವಾಗಿ ಮಾಡುತ್ತಿವೆ.ಈ ಮೂಲಕ ಜನರಿಗೆ ಸಾಕಷ್ಟು ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿವೆ ಎಂದು ವಿಧಾನ ಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯ ಶ್ಲಾಘಿಸಿದರು.

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಳಿ ನೂತನವಾಗಿ ನವೀಕರಣವಾಗಿರುವ ತಿ.ನರಸೀಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಕಛೇರಿಯ ಸುದ್ದಿಗೋಷ್ಠಿ ಸಭಾಂಗಣವನ್ನು ಟೇಪ್ ಕತ್ತರಿಸುವ ಮೂಲಕ ನೆರವೇರಿಸಿ ಮಾತನಾಡಿ ನೂತನವಾಗಿ ನವೀಕರಣವಾಗಿರುವ ಸಂಘದ ಕಛೇರಿ ಅದ್ಯಕ್ಷರಾದ ಅಧ್ಯಕ್ಷ ಅಕ್ರಂಪಾಷ ಹಾಗೂ ತಂಡದ ನೇತೃತ್ವದಲ್ಲಿ ಎಲ್ಲ ಸೌಕರ್ಯಗಳನ್ನು ಒಳಗೊಂಡಂತೆ ಅತ್ಯಂತ ಸುಂದರವಾಗಿ ಮೂಡಿ ಬಂದಿದೆ.ಹಾಗೆ ಇಲ್ಲಿನ ಪತ್ರಕರ್ತರು ವಸ್ತುನಿಷ್ಠ ಹಾಗೂ ಸಾಮಾಜಿಕ ಜವಾಬ್ದಾರಿಯುತ ಸುದ್ದಿಗಳನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನು ಓದಿ: ಟಿ.ನರಸೀಪುರ : ಅ.18ರಂದು ಪತ್ರಿಕಾ ದಿನಾಚರಣೆ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಕಚೇರಿ ಉದ್ಘಾಟನೆ
ಸ್ವಂತ ಕಟ್ಚಡ ನಿರ್ಮಾಣಕ್ಕೆ ಅಗತ್ಯ ಕ್ರಮ :-
ಪತ್ರಿಕಾರಂಗ ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಅಂಗ ಅಥವಾ ಆಯಾಮ ಎಂದೇ ಪರಿಗಣಿಸಲಾಗುತ್ತದೆ.ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಷ್ಟೇ ಅಥವಾ ಅದಕ್ಕಿಂತಲೂ ಪ್ರಬಲವಾದ ಶಕ್ತಿ ಪತ್ರಿಕೋದ್ಯಮಕ್ಕೆ ಇದೆ ಎನ್ನುವುದು ಹಲವಾರು ಸಾರಿ ಸಾಬೀತಾಗಿದೆ.ಮುಂದಿನ ದಿನಗಳಲ್ಲಿ ನರಸೀಪುರ ಪತ್ರಕರ್ತರ ಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸುವುದರ ಜೊತೆಗೆ ಪತ್ರಕರ್ತರ ಹಿತ ಕಾಯುವ ಕೆಲಸವನ್ನು ಮಾಡುತ್ತೇನೆ ತಾವು ಸಹ ಸಂಘದ ವತಿಯಿಂದ ಉತ್ತಮ ಕೆಲಸನ್ನು ಮಾಡಿ ಎಂದು ಶುಭ ಹಾರೈಸಿದರು.

ಇದೇ ವೇಳೆ ಡಾ.ಯತೀಂದ್ರ ಸಿದ್ದರಾಮಯ್ಯರವರನ್ನು ಸಂಘದ ಸದಸ್ಯರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ತಿ.ನರಸೀಪುರ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಎಂ.ನಾಗೇಂದ್ರ ಕುಮಾರ್,ಉಪಾಧ್ಯಕ್ಷರಾದ ನಂಜುಂಡಯ್ಯ,ಪ್ರಧಾನ ಕಾರ್ಯದರ್ಶಿಗಳಾದ ಆಲಗೂಡು ರೇವಣ್ಣ, ನಿರ್ದೇಶಕರಾದ ರಂಗಸ್ವಾಮಿ,ಸದಸ್ಯರಾದ ಕೇತಹಳ್ಳಿ ಬಸವರಾಜು, ಎಸ್.ರಮೇಶ್ ,ಶಿವರಾಜು,ಜಿ.ಗುಂಡಶೆಟ್ಟಿ,ಸೋಸಲೆ ಅನಿಲ್,ಪುರಸಭೆ ನಾಮ ನಿರ್ದೇಶಿತ ಸದಸ್ಯ ಕೆ.ಗಣೇಶ್,ಕಾಂಗ್ರೆಸ್ ಯುವ ಮುಖಂಡ ಹೆಳವರಹುಂಡಿ ಲಿಂಗರಾಜು, ಮಿಥುನ್,ಆಲಗೂಡು ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಸದಸ್ಯ ನಿಂಗರಾಜು ಸೇರಿದಂತೆ ಮತ್ತಿತರರು ಹಾಜರಿದ್ದರು.
ಎಂ.ನಾಗೇಂದ್ರಕುಮಾರ್

[…] […]