ಟಿ.ನರಸೀಪುರ : ತಾಲ್ಲೂಕಿನ ಮೂಗೂರು ಹೋಬಳಿ ಸಮೀಪದ ಎಂ. ಸೀಹಳ್ಳಿ ಗ್ರಾಮದಲ್ಲಿ ಶ್ರೀ ತ್ರಿಪುರ ಸುಂದರಿ ಅಮ್ಮನವರರ ಜಾತ್ರಾ ಮಹೋತ್ಸವದ ಅಂಗವಾಗಿ ಬಂಡಿಯ ಉತ್ಸವ ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು.
ಗ್ರಾಮದಲ್ಲಿ ವರ್ಷಕ್ಕೊಮ್ಮೆ ಜರುಗುವ ಈ ಜಾತ್ರೆ ಗ್ರಾಮದಲ್ಲಿ ಬಂಡಿಯ ವೈಶಿಷ್ಟ್ಯವನ್ನು ವ್ಶೇಷ ರೀತಿಯಲ್ಲಿ ಆಚರಿಸುವರು.ಸಮೀಪದ ಕನ್ನಳ್ಳಿ ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಸೀಹಳ್ಳಿ ಗ್ರಾಮಕ್ಕೆ ಬರಮಾಡಿಕೊಳ್ಳಲಾಗುವುದು.
ಗ್ರಾಮದ ಮುಖ್ಯ ರಸ್ತೆಯುದ್ದಕ್ಕೂ ನೆರೆದಿದ್ದ ಭಕ್ತರು ತಮ್ಮ ಮನೆಯಂಗಳದ ಮುಂದೆ ನಿಂತು ಇಷ್ಟಾರ್ಥ ಸಿದ್ದಿಗಾಗಿ ಬಂಜಿಗೆ ಬಾಳೆ ಗೊನೆಯನ್ನು ಅರ್ಪಿಸಿ,ಬೃಹತ್ ಹೂವಿನ ಹಾರಗಳನ್ನು ಹಾಕಿ ಕುಟುಂಬಕ್ಕೆ ಹಾಗೂ ಗ್ರಾಮಕ್ಕೆ ಒಳಿತಾಗಲೆಂದು ಬೇಡಿಕೊಂಡರು.

ಬಂಡಿಯ ಓಟದ ವೀಕ್ಷಣೆಗೆ ಸಾವಿರಾರು ಮಂದಿ ಮನೆಯ ಮುಂದೆ ಜಮಾಯಿಸಿ ಸಂಭ್ರಮಿಸಿದರು.ಯುವಕರು,ಯುವತಿಯರು,ಮಕ್ಕಳು, ವಯೋವೃದ್ಧರು ಸೇರಿದಂತೆ ಎಲ್ಲಾ ವಯೋಮಾನದರೆಲ್ಲರೂ ಅತ್ಯಂತ ಸಡಗರ ಸಂಭ್ರಮದಿಂದ ಭಾಗವಹಿಸಿ ಹಬ್ಬದ ಕಳೆ ಹೆಚ್ಚಿಸಿದರು.
ಈ ಸಂದರ್ಭದಲ್ಲಿ ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯರು ಹಾಗೂ ಕಬಿನಿ ನೀರು ಬಳಕೆದಾರರ ಮಹಾ ಮಂಡಲದ ಮಾಜಿ ಅದ್ಯಕ್ಷರಾದ ಸೀಹಳ್ಳಿ ಗುರುಮೂರ್ತಿ ಮಾತನಾಡಿ ಪ್ರತಿ ವರ್ಷವೂ ಮೂಗೂರು ಜಾತ್ರೆಯ ನಿಮಿತ್ತ ನಮ್ಮ ಗ್ರಾಮದಲ್ಲಿ ಬಂಡಿ ಹಬ್ಬ ನಡೆಯುವುದು ವಾಡಿಕೆ.ಪ್ರತಿ ಮನೆಯ ಕುಟುಂಬಸ್ಥರು ಊರಿಂದ ಆಚೆ ಎಲ್ಲೇ ಇದ್ದರೂ ವರ್ಷಕ್ಕೊಮ್ಮೆ ಊರಿಗೆ ಬಂದು ಹಬ್ಬ ಆಚರಿಸಿ ನೆಂಟರಿಷ್ಟರು,ಸ್ನೇಹಿತರನ್ನು ಕರೆದು ಪ್ರತಿ ಮನೆ, ಮನೆಯಲ್ಲೂ ಸಿಹಿ ಅಡುಗೆ ಮಾಡಿಸಿ ಭರ್ಜರ ಔತಣ ಕೂಟ ಏರ್ಪಡಿಸಿ ಸಂತೋಷ ಪಡುತ್ತಾರೆ.ಅದರಂತೆ ಸಂಪ್ರದಾಯ ಬದ್ದವಾಗಿ ಈ ಹಬ್ಬವನ್ನು ಸರ್ವ ಜನಾಂಗವು ಶಾಂತಿ ಸೌಹಾರ್ದತೆಯಿಂದ ಆಚರಿಸಿಕೊಂಡು ಬರುತ್ತಿರುವುದು ನಮ್ಮ ಗ್ರಾಮದ ವಿಶೇಷವಾಗಿದೆ ಎಂದರು.
ಎಂ. ನಾಗೇಂದ್ರ ಕುಮಾರ್

[…] ಇದನ್ನು ಓದು: ಟಿ.ನರಸೀಪುರ : ತಾಲ್ಲೂಕಿನ ಮೂಗೂರು ಹೋಬಳಿ ಸಮ… […]
[…] ಇದನ್ನು ಓದಿ: ಟಿ.ನರಸೀಪುರ : ತಾಲ್ಲೂಕಿನ ಮೂಗೂರು ಹೋಬಳಿ ಸಮ… […]