ಕುಡಿಯುವ ನೀರನ್ನ
ಎಲ್ಲರೂ ಫಿಲ್ಟರ್ ಮಾಡಿ ಕುಡಿಯುತ್ತಾ ಇದ್ದಾರೆ,
ಮನಸ್ಸನ್ನೂ ಫಿಲ್ಟರ್ ಮಾಡಿ ಬದುಕೋಣ ನಾವಿಲ್ಲಿ…
ನೀರಿನಲ್ಲಿರುವ ಕೊಳೆಯನ್ನು
ಫಿಲ್ಟರ್ ತೆಗೆದುಹಾಕುತ್ತದೆ,
ಮನಸ್ಸಿನಲ್ಲಿರುವ ಕೋಪವನ್ನ
ಕ್ಷಮೆ ತೆಗೆದುಹಾಕಲಿ.
ನೀರನ್ನು ಶುದ್ಧಗೊಳಿಸಿ
ದೇಹವನ್ನು ಕಾಪಾಡುತ್ತೇವೆ,
ಮನಸ್ಸನ್ನು ಶುದ್ಧಗೊಳಿಸಿ
ಸಂಬಂಧಗಳನ್ನು ಕಾಪಾಡೋಣ.
ಮಾತುಗಳು ಹೊರಬರುವ ಮುನ್ನ
ಒಮ್ಮೆ ಮನಸ್ಸಿನಲ್ಲಿ ಸೋಸಿ ನೋಡೋಣ,
ಒಂದು ಮಾತು ನೋವು ಕೊಡಬಹುದು,
ಒಂದು ಮಾತು ಬದುಕನ್ನೇ ಬದಲಿಸಬಹುದು.
ಕಣ್ಣಿಗೆ ಕಾಣದ ಕಸಕ್ಕಿಂತ
ಮನಸ್ಸಿನೊಳಗಿನ ಕಸವೇ ಅಪಾಯಕಾರಿ,
ಅಸೂಯೆ, ದ್ವೇಷ, ಅಹಂಕಾರವನ್ನ
ಸ್ವಲ್ಪ ಸ್ವಲ್ಪವಾಗಿ ಹೊರಹಾಕೋಣ.
ಯಾರನ್ನಾದರೂ ನೋಯಿಸುವ ಮುನ್ನ
ಅವರ ಹೃದಯವನ್ನೊಮ್ಮೆ ನೆನಪಿಸಿಕೊಳ್ಳೋಣ,
ತಪ್ಪು ಕಂಡಾಗ ತೀರ್ಪು ಕೊಡುವ ಬದಲು
ಒಮ್ಮೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ.
ನೀರು ಶುದ್ಧವಾಗಿದ್ದರೆ
ದೇಹ ಆರೋಗ್ಯವಾಗಿರುತ್ತದೆ,
ಮನಸ್ಸು ಶುದ್ಧವಾಗಿದ್ದರೆ
ಬದುಕು ಅರ್ಥಪೂರ್ಣವಾಗಿರುತ್ತದೆ.
ಆದ್ದರಿಂದ ನೀರಿಗಷ್ಟೇ ಅಲ್ಲ,
ನಮ್ಮ ಮನಸ್ಸಿಗೂ ಪ್ರತಿದಿನ ಫಿಲ್ಟರ್ ಹಾಕೋಣ…
ನಮ್ಮೊಳಗಿನ ಮನುಷ್ಯನನ್ನು ಶುದ್ಧವಾಗಿಟ್ಟುಕೊಂಡರೆ,
ನಮ್ಮ ಬದುಕೇ ಮತ್ತೊಬ್ಬರಿಗೆ
ಒಂದು ಸುಂದರವಾದ ಮಾದರಿಯಾಗುತ್ತದೆ….
– ಕಾರ್ತಿಕ್… ✍️
ಶ್ರವಣ ಬೆಳಗೊಳ
