ತುಮಕೂರು: ಇಂದಿನ ಯುವಜನತೆ ಕಾಲ್ಪನಿಕ ವ್ಯಕ್ತಿಗಳನ್ನು ಆರಾಧಿಸುವುದಕ್ಕಿಂತ ನಮ್ಮ ಕಣ್ಣ ಮುಂದೆಯೇ ಇರುವ ಸಾಧಕರನ್ನು ಅನುಸರಿಸುವ ಮೂಲಕ,ತಾವು ಪ್ರಸಿದ್ಧರ ಸಾಲಿನಲ್ಲಿ ನಿಲ್ಲುವ ಬಗ್ಗೆ ಯೋಚಿಸಬೇಕಿದೆ ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕೌಶಲ್ಯಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.
ನಗರದ ತುಮಕೂರು ವಿವಿಯ ಡಾ.ಸದಾನಂದಮಯ್ಯ ಬ್ಲಾಕ್ನಲ್ಲಿ ತುಮಕೂರು ವಿವಿ ಐಕ್ಯೂಎಸಿ ವಿಭಾಗ ಹಾಗು ಹಾಲಪ್ಪ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಎರಡನೇ ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡುತಿದ್ದ ಅವರು,ನಮ್ಮ ನಡುವೆಯೇ ಕೊರತೆಗಳ ನಡುವೆಯೇ ಸಾಧನೆ ಮಾಡಿದ ಅನೇಕರಿದ್ದಾರೆ.ಅವರುಗಳನ್ನು ನಾವು ಮಾದರಿಯಾಗಿ ತೆಗೆದುಕೊಂಡರೆ, ನಮ್ಮ ಕೊರತೆಗಳನ್ನು ಮೆಟ್ಟಿ ನಿಂತು ಸಾಧಕರ ಸಾಲಿನಲ್ಲಿ ನಿಲ್ಲಲು ಸಾಧ್ಯ ಎಂದರು.
ಸಾಧನೆ ಎಂಬುದು ಪುಕ್ಕಟೆಯಾಗಿ ಸಿಗುವಂತಹದ್ದಲ್ಲ. ಅದಕ್ಕೆ ತಕ್ಕ ಪರಿಶ್ರಮಬೇಕು.ಕಳೆದ ಎರಡು ದಿನಗಳಿಂದ ತುಮಕೂರು ವಿವಿಯ ಜೊತೆ ಸೇರಿ ಈ ಕಾರ್ಯಾಗಾರ ನಡೆಸುತ್ತಿರುವ ಪ್ರಮುಖ ಉದ್ದೇಶ. ನಮ್ಮ ಜಿಲ್ಲೆಯಲ್ಲಿಯೂ ಕಾರ್ಯಾಂಗದ ಪ್ರಮುಖ ಹುದ್ದೆಗಳಲ್ಲಿ ಕಲ್ಪತರು ನಾಡಿನ ಜನರು ಹೆಚ್ಚಾಗಬೇಕು ಎಂಬುದಾಗಿದೆ.ಉದ್ಯೋಗ ಮೇಳಕ್ಕೆ ಬರುವ ಯುವ ಜನರ ಕ್ಯೂ ನೋಡಿದಾಗ ನಿಜಕ್ಕೂ ವಿಷಾದವೆನಿಸುತ್ತದೆ.ಖಾಸಗಿ ಕಂಪನಿಗಳ ಹೊರತಾಗಿಯೂ ಸರಕಾರದ ವಿವಿಧ ಇಲಾಖೆಗಳಲ್ಲಿ ಇರುವ ಉದ್ಯೋಗ, ಅವುಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ತಯಾರಿ, ಪಠ್ಯಕ್ರಮ ಈ ಎಲ್ಲಾ ವಿಚಾರಗಳ ಬಗ್ಗೆ ಜಿಲ್ಲೆಯ ವಿದ್ಯಾವಂತರಿಗೆ ಮಾರ್ಗದರ್ಶನ ಮಾಡುವ ಸಲುವಾಗಿ ಆಯೋಜಿಸಲಾಗಿದೆ. ಇಲ್ಲಿ ಪಡೆಯುವ ಮಾಹಿತಿಯ ಮೇಲೆ ಕೌಶಲ್ಯ ಮತ್ತು ಕಮ್ಯುನಿಕೇಷನ್ ಸ್ಕಿಲ್ ಬೆಳೆಸಿಕೊಂಡರೆ,ಸಾಧಕರ ಸಾಲಿನಲ್ಲಿ ನೀವಿರಲಿದ್ದೀರಿ ಎಂದು ಮುರುಳೀಧರ ಹಾಲಪ್ಪ ವಿಶ್ವಾಸ ತುಂಬಿದರು.

ಇನ್ಸೈಟ್ ಅಕಾಡೆಮಿಯ ವಿನಯ್.ಜಿ.ಆರ್ ಮಾತನಾಡಿ,ಪಿಡಿಓ ಆಗಿ ಸರಕಾರಿ ಹುದ್ದೆ ಪಡೆದು, ಕೆಲ ಕಾಲ ಕೆಲಸ ಮಾಡಿ ನಂತರ 12 ವರ್ಷಗಳಿಂದ ಇನ್ಸೈಟ್ ಆಕಾಡೆಮಿಯ ಮೂಲಕ ಯುಪಿಎಸ್ಸಿ, ಕೆಪಿಎಸ್ಸಿ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗೆ ಮಾರ್ಗದರ್ಶನ ಮಾಡುತಿದ್ದೇನೆ.ರಾಜ್ಯ 21 ಜಿಲ್ಲೆಗಳಲ್ಲಿ ನನ್ನ ಅಕಾಡೆಮಿಯಲ್ಲಿ ಕಲಿತ ಅಭ್ಯರ್ಥಿಗಳು ಐಎಎಸ್,ಐಪಿಎಸ್ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಅಡಳಿತಾತ್ಮಕ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಬಹಳ ಮುಖ್ಯ,ಮೊದಲು ಯುಪಿಎಸ್ಸಿ, ಕೆಪಿಎಸ್ಸಿಯ ಆಳ ಮತ್ತು ಅಗಲ (ನೀಡ್ಅಂಡ್ಡೆಪ್ತ್) ಅರ್ಥ ಮಾಡಿಕೊಳ್ಳಬೇಕು.ಟ್ರಯಲ್ ಅಂಡ್ ಎರರ್ಗೆ ಅವಕಾಶವಿಲ್ಲ.ನಿಮ್ಮಕೌಟುಂಬಿಕ, ಅರ್ಥಿಕ, ಸಾಮಾಜಿಕ ಹಿನ್ನೆಲೆಗಳನ್ನು ಮರೆತು,ಮಹಾತ್ವಕಾಂಕ್ಷೆಯೊAದಿಗೆ ಮುನ್ನುಗ್ಗಿದರೆ ಮಾತ್ರ ಯುಪಿಎಸ್ಸಿಯಂತಹ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯ.ನಮ್ಮಲ್ಲಿರುವ ಅಂತಃಶಕ್ತಿಯನ್ನು ಮೊದಲು ನಾವು ಕಂಡುಕೊಳ್ಳಬೇಕಿದೆ.ಅದಕ್ಕೆ ಒಳ್ಳೆಯ ಮಾರ್ಗದರ್ಶನದೊರೆತೆರೆ ಮುಂದಿನ ವರ್ಷ ನೀವು ಕೂಡ ಸಾಧಕರ ಸಾಲಿನಲ್ಲಿ ನಿಲ್ಲಬಹುದುಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿಕೃಷಿಕ್ ಸರ್ವೋದಯ ಪೌಂಡೇಷನ್ನ ಪ್ರೊ.ಕೆ.ಚಂದ್ರಣ್ಣ, ಕೆ.ಎ.ಎಸ್ಅಧಿಕಾರಿಕೃಷ್ಣಮೂರ್ತಿ, ದಿಲೀಪ್ ಅಪ್ಪೇನಹಳ್ಳಿ, ಸಂಶೋಧಕರಾದಗಿರೀಶ್, ಕೃಷಿಕ ಸರ್ವೋದಯ ಪೌಂಡೇಷನ್ನನ ಹನುಮೇಗೌಡ, ಉಪನ್ಯಾಸಕರಾದ ಮೋಹನ್, ಶೇಖರಯ್ಯ ಅವರುಗಳು ಭಾಗವಹಿಸಿದ್ದರು.
ಎರಡು ದಿನಗಳ ಈ ಕಾರ್ಯಾಗಾರದಲ್ಲಿ ಎಸ್.ಬಿ.ಐನ ವಾದಿರಾಜ್, ಕೆ.ಎಸ್ಎಫ್ನಗುರುರಾಜ್, ನಲ್ನುಡಿಯ ಸಂಪಾದಕರಾದ ಪ್ರೊ.ಪ್ರಸನ್ನ,ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರರಾದ ಶರಣಯ್ಯ ಬಂಡಾರಿ ಮಠ್, ಗರಣಿ ಕೃಷ್ಣಮೂರ್ತಿ,ಜಾಗೃತದಳದ ಡಿವೈಎಸ್ಪಿ ಕೃಷ್ಣಮೂರ್ತಿ,ಮೋಹನ್ ಅವರುಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಅಭ್ಯರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ಎರಡು ದಿನಗಳ ಕಾರ್ಯಗಾರದಲ್ಲಿ 69 ಪದವಿ, ಸ್ನಾತಕೋತ್ತರ ಪದವಿ ಹಾಗೂ 9ಡಿಪ್ಲಮೋ ಪದವಿ ಪಡೆದ ಸುಮಾರು 1704ಜನರು ಪಾಲ್ಗೊಂಡಿದ್ದರು.
– ಚಂದ್ರಚೂಡ ಕೆ.ಬಿ.
