ತುಮಕೂರು: ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಮಹಾರಾಣಿ ಮಹಿಳಾ ಕಲಾ, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಶೇಖ್ ಹೈದರ್ ಅಲಿ ಡಿ.ಎಸ್. ರವರಿಗೆ ಡಾ. ನೀಲಾ.ಎ. ಚೋಟೈ ಅವರ ಮಾರ್ಗದರ್ಶನದಲ್ಲಿ “ಬೆಳೆ ಪದ್ಧತಿಯಲ್ಲಿನ ಬದಲಾವಣೆಯ ವಿಶ್ಲೇಷಣೆ ಮತ್ತು ಕೃಷಿ ಉತ್ಪಾದನೆಯ ಮೇಲೆ ಅದರ ಪ್ರಭಾವ – ಕರ್ನಾಟಕದಲ್ಲಿ ಒಂದು ಅಧ್ಯಯನ” ಎಂಬ ಮಹಾಪ್ರೌಢಪ್ರಬಂಧಕ್ಕಾಗಿ ಮೈಸೂರು ವಿಶ್ವವಿದ್ಯಾಲಯವು ಪಿಎಚ್ಡಿ ಪದವಿಯನ್ನು ನೀಡಿದೆ.
ಇದನ್ನು ಓದು: ತುಮಕೂರು: ಕರ್ನಾಟಕದ ಅಂಗಾಂಗಕಸಿ ಪರಿಸರ ವ್ಯವಸ್ಥೆಯ ಬಲವರ್ಧನೆ:ಡಾ||ರಾಜೀವ್.ಇ.ಎನ್.
ಅವರು ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ದಂಡಿನಶಿವರದವರು.ಶ್ರೀಯುತರಿಗೆ ವಿದ್ಯಾರ್ಥಿಗಳು,ಸ್ನೇಹಿತರು,ಸಂಘ-ಸಂಸ್ಥೆಗಳು ಅಭಿನಂದಿಸಿದೆ.
– ಕೆ.ಬಿ.ಚಂದ್ರಚೂಡ

[…] […]