ತುಮಕೂರು:ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ದುಶ್ಚಟ ದುರಭ್ಯಾಸಗಳಿಗೆ ದಾಸರಾಗಬಾರದು,ಧುಮಪಾನ,ಮಧ್ಯಪಾನ, ಗುಟ್ಕಾ,ಗಾಂಜಾ,ಅಫೀಮು,ಚರಸ್, ಇತ್ಯಾದಿಗಳಿಗೆ ದಾಸರಾಗದೆ. ಉತ್ತಮ ಹವ್ಯಾಸ ಅಭ್ಯಾಸಗಳನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಂಡು ಉತ್ತಮವಾದ ಸಾಧನೆ ಮಾಡಬೇಕು,ಆರೋಗ್ಯವಂತ ಯುವಕರು ಈ ದೇಶದ ಆಸ್ತಿ,ಎಲ್ಲರೂ ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಕೈಜೋಡಿಸಬೇಕು, ಯಾರಾದರೂ ಶಾಲಾ ಕಾಲೇಜು ಆವರಣದಲ್ಲಿ ಡ್ರಗ್ಸ್ ಮಾರಾಟ ಮಾಡಿದರೆ ತಕ್ಷಣವೇ ಸ್ಥಳೀಯ ಪೋಲೀಸ್ ಠಾಣೆಗೆ ಫೋನ್ ಮುಖಾಂತರ ವಿಷಯ ತಿಳಿಸಬೇಕು.

ತುಮಕೂರು ನಗರ ಸೇರಿದಂತೆ ಎಲ್ಲ ಶಾಲಾ ಕಾಲೇಜು ಆವರಣದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವುದು ನಾಗರೀಕರಿಗೆ,ಪೋಷಕರಿಗೆ ನಿದ್ದೆ ಗೆಡಿಸಿದೆ ತಮ್ಮ ಮಕ್ಕಳ ಭವಿಷ್ಯ ಎಲ್ಲಿ ಏನಾಗುವುದೋ ಎಂದು ಯೋಚಿಸುತ್ತಿದ್ದಾರೆ, ಆದ್ದರಿಂದ ಡ್ರಗ್ಸ್ ಮುಕ್ತ ಕರ್ನಾಟಕ ಮಾಡಲು ಪೋಷಕರು, ನಾಗರೀಕರು ಸೇರಿದಂತೆ ಎಲ್ಲರ ಸಹಕಾರ ಮುಖ್ಯ ಎಂದು ವಕೀಲರು ಮತ್ತು ಹಿರಿಯ ಪತ್ರಕರ್ತರಾದ ಕೆ.ಬಿ.ಚಂದ್ರಚೂಡರವರು ತಿಳಿಸಿದರು.
ಇದನ್ನು ಓದು: ತುಮಕೂರು: ಡಿ.ಎಸ್. ಶೇಖ್ ಹೈದರ್ ಅಲಿ ಅವರಿಗೆ ಅರ್ಥಶಾಸ್ತçದಲ್ಲಿ ಪಿಎಚ್ಡಿ ಪದವಿ ಪ್ರಧಾನ
ಅವರು ಇಂದು ತುಮಕೂರು ತಾಲ್ಲೋಕಿನ ನಾಗವಲ್ಲಿಗ್ರಾಮದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಉಪನ್ಯಾಸಕರಾದ ಪ್ರೊ.ವಿ.ಎಸ್.ರಂಗರಾಜುರವರು ವಿದ್ಯಾರ್ಥಿಗಳು ಸದಾ ಓದಿನಲ್ಲಿ ತಲ್ಲೀನರಾಗಿರಬೇಕು,ಉತ್ತಮ ಪುಸ್ತಕಗಳನ್ನು ಓದುತ್ತಿರಬೇಕು ಕೆಟ್ಟ ಅಭ್ಯಾಸವಿರುವ ಸ್ನೇಹಿತರಿಂದ ದೂರವಿರಬೇಕು,ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು,ಇಂದಿನ ಪಾಠವನ್ನು ಇಂದೇ ಓದಬೇಕು,ಐಎಎಸ್,ಐಪಿಎಸ್,ಕೆಎಎಸ್ ಅಧಿಕಾರಿಗಳಾಗಬೇಕು,ನೀವು ಉತ್ತಮ ಸಾಧಕರಾದರೆ ಸಮಾಜದಲ್ಲಿ ಬೆಲೆ ಬರುತ್ತದೆ,ಧರ್ಮಸ್ಥಳದ ಡಾ||ಡಿ.ವೀರೇಂದ್ರಹೆಗ್ಗಡೆರವರು ವಿದ್ಯಾರ್ಥಿಗಳಿಗೆ ಇಂತಹ ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಾ ಸದಾ ಮಾಗದರ್ಶಕರಾಗಿದ್ದಾರೆ ಅವರಿಗೆ ನಮ್ಮ ಕಾಲೇಜಿನ ಪರವಾಗಿ ಧನ್ಯವಾದಗಳು ಎಂದು ತಿಳಿಸಿದರು.

ವೇದಿಕೆಯಲ್ಲಿ ಹಿರಿಯ ಉಪನ್ಯಾಸಕರಾದ ಪ್ರೊ.ವಿ.ಎಸ್..ರಂಗರಾಜು, ಪ್ರೊ.ಎಂ.ಸುರೇಶ್, ಸಿ.ಮಂಜುನಾಥ್,ಅಬಿದುಲ್ಲಾಖಾನ್,ಶಶಿಕಲಾ,ವನಿತಾ ,ಶ್ರೀನಿವಾಸಮೂರ್ತಿ,ಟಿ.ಜ್ಯೋತಿಪ್ರಕಾಶ್,ಪ್ರವೀಣ್,ಮೇಲ್ವಿಚಾರಕರಾದ ಕೆ.ನಾಗರಾಜು,ಸೇವಾಪ್ರತಿನಿಧಿ ಶಶಿಕಲಾ ಇತರರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ

[…] ಇದನ್ನು ಓದಿ: ತುಮಕೂರು: ವಿದ್ಯಾರ್ಥಿಗಳು ಡ್ರಗ್ಸ್ ಮುಕ್ತ… […]