ತುಮಕೂರು:ಶಿಕ್ಷಣ ತಜ್ಞರು, ಹಿರಿಯ ವಕೀಲರೂ, ಸಮಾಜ ಸೇವಕರೂ ಆದ ಹೆಚ್.ಎಸ್.ರಾಜುರವರಿಗೆ ಉದ್ಯಮಿ ಒಕ್ಕಲಿಗ ಪ್ರಶಸ್ತಿ ಲಭಿಸಿದೆ.ಅವರು ಶಿಕ್ಷಣ ರಂಗದಲ್ಲಿ ಸಲ್ಲಿಸಿರುವ ಸೇವೆಗಾಗಿ ಫಸ್ಟ್ ಸರ್ಕಲ್ ಎಕ್ಸ್ ಪೋ-2026ರ ಅಧ್ಯಕ್ಷರಾದ ಎಂ.ಎ.ಮಧನ್ ಕುಮಾರ್ ರವರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಶುಭಹಾರೈಸಿದರು.ಈ ಸಂದರ್ಭದಲ್ಲಿ ರಾಮ್ ಜೆ ವೆಂಕಟೇಶಬಾಬು ಇತರರು ಉಪಸ್ಥಿತರಿದ್ದರು.
ಹೆಚ್.ಎಸ್.ರಾಜುರವರು ಪ್ರಸ್ತುತ ರಾಜ್ಯದ ಹೆಸರಾಂತ ಕಾನೂನು ಕಾಲೇಜು ಆದ ವಿದ್ಯೋದಯ ಕಾನೂನು ಕಾಲೇಜಿನ ವಿದ್ಯೋದಯ ಫೌಂಡೇಶನ್ ನ ಮ್ಯಾನೆಂಜಿಂಗ್ ಟ್ರಸ್ಠಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಅವರಿಗೆ ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್,ವಿದ್ಯೋದಯ ಕಾನೂನು ಕಾಲೇಜಿನ ಆಡಳಿತ ಮಂಡಳಿ,ಭೋದಕರು,ಬೋಧಕೇತರ ಸಿಬ್ಬಂದಿಗಳು,ಕಾಲೇಜಿನ ಹಳೆಯ ವಿದ್ಯಾರ್ಥಿಗಳು,ಬೆಂಗಳೂರು ಉಚ್ಛನ್ಯಾಯಾಲಯದ ಹಿರಿಯ ವಕೀಲರಾದ ಎಂ.ಎನ್.ಮಧುಸೂಧನ್,ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯ,ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿ ಮಹೇಶ್,ಜಂಟಿ ಕಾರ್ಯದರ್ಶಿ ಧನಂಜಯ,ಬಿ.ಜಿ.ಸತೀಶ್,ಬಿ.ವಿ.ವಸಂತಕುಮಾರ್,ಶ್ರೀಮತಿ ಭವ್ಯ.ಎಸ್.ಶಾನುಭೋಗ್, ಶಿವಶಂಕರಯ್ಯ, ಬಿ.ಆರ್.ರಾಮಕೃಷ್ಣಯ್ಯ, ಎಸ್.ಎಂ.ಕೃಷ್ಣಮೂರ್ತಿ, ನರಸಿಂಹಯ್ಯಬಿಜವರ, ಕೆ.ಬಿ.ಚಂದ್ರಚೂಡ ಇತರರು ಶುಭಹಾರೈಸಿದ್ದಾರೆ.
ವರದಿ : ಕೆ ಬಿ ಚಂದ್ರಚೂಡ್
