ತುಮಕೂರು: ಜಿಲ್ಲಾ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ವಿ.ಕೆಂಪರಾಜು ನೇಮಕವಾಗಿದ್ದಾರೆ. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹೆಚ್. ನಿಂಗಪ್ಪ ಅವರು ಈ ನೇಮಕ ಮಾಡಿ ಶನಿವಾರ ನಗರದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಕೆಂಪರಾಜುಗೆ ನೇಮಕಾತಿ ಪತ್ರ ವಿತರಿಸಿದರು.
ಕೆಂಪರಾಜು ಅವರು ಈ ಮೊದಲು ಜೆಡಿಎಸ್ ಸೇವಾದಳ ಘಟಕದ ಜಿಲ್ಲಾಧ್ಯಕ್ಷರಾಗಿ,ಹಿರಿಯ ಕಾರ್ಯಕರ್ತರಾಗಿ ಜೆಡಿಎಸ್ ಪಕ್ಷ ಕಟ್ಟುವಲ್ಲಿ ಹಗಲಿರುಳು ಶ್ರಮವಹಿಸಿ ಪಕ್ಷಕ್ಕಾಗಿ ದುಡಿದಿದ್ದು ಈಗ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದಾರೆ.
ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್. ನಾಗರಾಜು, ಸೋಲಾರ್ ಕೃಷ್ಣಮೂರ್ತಿ, ಟಿ.ಹೆಚ್. ಜಯರಾಮ್, ಟಿ.ಜಿ. ನರಸಿಂಹರಾಜು, ಮೋಹನ್ಕುಮಾರ್, ಕಾಮರಾಜು, ಬೆಳಗುಂಬ ವೆಂಕಟೇಶ್, ದಿಬ್ಬೂರು ವಿಜಯಕುಮಾರ್, ಪ್ರಮೋದ್ಗೌಡ, ದಿವಾಕರ್, ಲಕ್ಷ್ಮೀನರಸಿಂಹರಾಜು ಸೇರಿದಂತೆ ಜಿಲ್ಲೆಯ ಹಿರಿಯ ಮುಖಂಡರು,ಸಂಘ-ಸಂಸ್ಥೆಗಳ ಪದಾಧಿಕಾರಿಗಳು,ಮಠಾಧೀಶರು ಕೆಂಪರಾಜು ರವರನ್ನು ಅಭಿನಂದಿಸಿ ಆಶೀರ್ವದಿಸಿದರು.
– ಚಂದ್ರಚೂಡ ಕೆ.ಬಿ.
