ತುಮಕೂರು: ಶ್ರೀಲಂಕಾದಲ್ಲಿ ನಡೆದ ಮೊದಲ ಏಷಿಯನ್ ಪ್ಯಾರ ಸಿಟ್ಟಿಂಗ್ ಥ್ರೋ ಬಾಲ್ನಲ್ಲಿ ಭಾರತವನ್ನು ಪ್ರತಿನಿಧಿಸಿದ ತುಮಕೂರಿನ ಪ್ರಕಾಶ್ ಆರ್ ಅವರು ಬೆಳ್ಳಿ ಪದಕ ಗೆಲ್ಲುವ ಮೂಲಕ ರಾಜ್ಯಕ್ಕೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಜಿಲ್ಲೆಯಲ್ಲಿ ಎಲ್ಲ ವಿಕಲ ಚೇತನರಿಗೆ ಕ್ರೀಡೆಗಳನ್ನು ಅಭ್ಯಾಸ ಮಾಡಿಸುತ್ತ ಪ್ರಕಾಶ್ ಅವರು ಕೂಡ ನಿರಂತರ ಅಭ್ಯಾಸ ಇಂದು ಇದೆ ಮೊಟ್ಟ ಮೊದಲ ಬಾರಿಗೆ ತುಮಕೂರು ಜಿಲ್ಲೆಯಿಂದ ಅಂತರಾಷ್ಟ್ರೀಯ ಏಶಿಯನ್ ಪ್ಯಾರ ಸಿಟ್ಟಿಂಗ್ ತ್ರೋ ಬಾಲ್ ಅಡಿ ಬೆಳ್ಳಿ ಪದಕ ಗೆದ್ದು ಜಿಲ್ಲೆಗೆ ಹೆಮ್ಮೆ ಎನಿಸಿ ಜಿಲ್ಲೆಯ ವಿಶೇಷ ಚೇತನರಿಗೆ ಮಾದರಿ ಆಗಿದ್ದಾರೆ.
ಪ್ರಕಾಶ್ ಅವರು ತುಮಕೂರು ಡಿಸ್ಟಿಕ್ ದಿವ್ಯಂಗ ಸ್ಪೋರ್ಟ್ಸ್ ಅಕಾಡೆಮಿಯ ಸಂಸ್ಥಾಪಕರಾಗಿ ತುಮಕೂರು ಜಿಲ್ಲೆಯಲ್ಲಿ ಎಲ್ಲಾ ವಿಕಲಚೇತನರಿಗೆ ಕ್ರೀಡೆಯಲ್ಲಿ ಬೆಳೆಸುತ್ತಿರುವುದು ಶ್ಲಾಘನೀಯ ಇವರು ತಮ್ಮ ಅಕಾಡೆಮಿಯಲ್ಲಿ ವೀಲ್ ಚೇರ್ ಕ್ರಿಕೆಟ್ ವೀಲ್ ಚೇರ್ ಬಾಸ್ಕೆಟ್ ಬಾಲ್ ಸಿಟ್ಟಿಂಗ್ ತ್ರೋಬಾಲ್ ಎಲ್ಲಾ ಅಥ್ಲೆಟಿಕ್ಸ್ ಆಟಗಳನ್ನು ಅಭ್ಯಾಸ ಮಾಡಿಸುತ್ತಾರೆ. ಇಷ್ಟೇ ಅಲ್ಲದೆ ಈಗಾಗಲೇ ಇವರ ಅಕಾಡೆಮಿಯ ಮೂಲಕ ಐದಾರು ಆಟಗಾರರಿಗೆ ರಾಷ್ಟ್ರೀಯ ತಂಡದಲ್ಲಿ ಆಡುತ್ತಿದ್ದಾರೆ. ಆದರೆ ಇವರ ಅಕಾಡೆಮಿಯನ್ನು ಗುರುತಿಸಿ ಕೆಲವು ಸಂಘ-ಸಂಸ್ಥೆಗಳು ಸಣ್ಣಪುಟ್ಟ ಸಹಾಯ ಮಾಡುವ ಮೂಲಕ ಇವರನ್ನು ಪ್ರೋತ್ಸಾಹಿಸುತ್ತಿದೆ. ಇವರಿಗೆ ಸರ್ಕಾರದಿಂದ ಇನ್ನಷ್ಟು ಹೆಚ್ಚಿನ ನೆರವು ಸಿಕ್ಕದರೆ ಮತ್ತಷ್ಟು ಸಾಧನೆ ಮಾಡಲು ದಾರಿ ಸಿಗುತ್ತದೆ. ಇವರನ್ನು ಮಾಜಿ ಕೌಶಲ್ಯಾಭಿವೃದ್ಧಿ ಅಧ್ಯಕ್ಷ ಮುರಳೀಧರ ಹಾಲಪ್ಪ ಅವರು ಅಭಿನಂದಿಸಿದರು. ಸಂತೋಷ್, ನಟರಾಜು, ಆದಿಲ್ ಪಾಷ ಮುಂತಾದವರಿದ್ದರು.
ವರದಿ : ಕೆ ಬಿ ಚಂದ್ರಚೂಡ್

[…] ಇದನ್ನು ಓದು: ತುಮಕೂರು : ವಿಶೇಷ ಚೇತನ ಪ್ರಕಾಶ್.ಆರ್ ರವರನ… […]