ತುಮಕೂರು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸ್ಥಳೀಯ ಶಾಸಕರ ಅನುದಾನದಡಿಯಲ್ಲಿ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸದಾಶಿವನಗರದಲ್ಲಿ ರಚನೆಯಾದ ಶುದ್ದಗಂಗಾ ಘಟಕವನ್ನು ಮಾನ್ಯ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರು ಉದ್ಘಾಟನೆ ಮಾಡಿದರು.ಧರ್ಮಸ್ಥಳ ಯೋಜನೆಯ ಮೂಲಕ ರಾಜ್ಯದಲ್ಲಿ 581 ಶುದ್ಧಗಂಗಾ ಘಟಕ ರಚನೆ ಆಗಿದ್ದು ಅದರಲ್ಲಿ ತುಮಕೂರು ತಾಲೂಕಿನಲ್ಲಿ ಸುಮಾರು 23 ಶುದ್ದಗಂಗಾ ಘಟಕ, ನಗರ ಪ್ರದೇಶದಲ್ಲಿ 14 ಘಟಕ ರಚನೆ ಮಾಡಿ ತುಮಕೂರು ತಾಲೂಕಿಗೆ ಶುದ್ಧ ಕುಡಿಯುವ ನೀರು ವರದಾನವಾಗಿದೆ ಎಂದರು.
ಪೂಜ್ಯ ವೀರೇಂದ್ರ ಹೆಗ್ಗಡೆಯವರ ಈ ಸಮಾಜಮುಖಿ ಸೇವೆ ಸಮಾಜಕ್ಕೆ ದೊಡ್ಡ ಕೊಡುಗೆಯಾಗಿದೆ.ಪೂಜ್ಯರಿಗೆ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರಿಗೆ ಇನ್ನಷ್ಟು ಸಮಾಜ ಸೇವೆ ಮಾಡಲು ಮಂಜುನಾಥ ಸ್ವಾಮಿ ಅನುಗ್ರಹ ನೀಡಲಿ ಎಂದು ಶುಭ ಹಾರೈಸಿದರು.
ಇದನ್ನು ಓದು: ತುಮಕೂರು : ವಿಶೇಷ ಚೇತನ ಪ್ರಕಾಶ್.ಆರ್ ರವರನ್ನು ಸನ್ಮಾನಿಸಿದ ಮುರಳೀಧರಹಾಲಪ್ಪ.!
ಯೋಜನೆಯ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ಮಾತನಾಡಿ ಶುದ್ದಗಂಗಾ ಘಟಕದ ನಿರ್ವಹಣೆಯನ್ನು ಉತ್ತಮವಾಗಿ ಮಾಡುವ ಕುರಿತು ಹಾಗೂ ಯೋಜನೆಯ ಕಾರ್ಯಕ್ರಮಗಳ ಕುರಿತು ಮಾತನಾಡಿದರು.
ವೇದಿಕೆಯಲ್ಲಿ ತಾಲೂಕಿನ ಯೋಜನಾಧಿಕಾರಿಗಳಾದ ಪ್ರಭಾಕರ್ ನಾಯಕ್,ತುಮಕೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಯೋಗೇಶ್ರವರು. ತುಮಕೂರು ಜಿಲ್ಲಾ ಜನಜಾಗೃತಿ ವೇಧಿಕೆ ಅದ್ಯಕ್ಷರಾದ ಅಮರನಾಥ್ ಶೆಟ್ಟಿರವರು, ತುಮಕೂರು ಮಹಾನಗರ ಪಾಲಿಕೆ ಉಪ ಆಯುಕ್ತರಾದ ಸಂದೀಪ್.ಕೆ.ಎಸ್ ತುಮಕೂರುಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರರಾದ ಪ್ರವೀಣ್ ಕುಮಾರ್, ಸದಾಶಿವನಗರ ಸರ್ವಜನ ಹಿತರಕ್ಷಣ ವೇದಿಕೆ ಅಧ್ಯಕ್ಷರಾದ ಟಿ.ಎಚ್.ಮಹದೇವ ಹಾಗೂ ಸದಾಶಿವನಗರ ಸರ್ವಜನ ಹಿತರಕ್ಷಣಾ ವೇದಿಕೆಯ ಎಲ್ಲಾ ಪದಾಧಿಕಾರಿಗಳು ಹಾಗೂ ವಲಯ ಮೇಲ್ವಿಚಾರಕರು. ಶುದ್ದಗಂಗಾ ಮೇಲ್ವೀಚಾರಕರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ

[…] […]