ಬೆಂಗಳೂರು, ಜುಲೈ 23: ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಸೀಮಾ ಜ್ಞಾನದೇವ್ ಅವರ ವಿರುದ್ಧ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಆರೋಪ ಎದ್ದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಒಂದು ವಿಡಿಯೋದಲ್ಲಿ, ಅತಿಥಿ ಉಪನ್ಯಾಸಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ವೈರಲ್ ಆಗಿದೆ.
ವಿವರಗಳ ಪ್ರಕಾರ, ಕುಲಪತಿಗಳ ಕಚೇರಿಯಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ಕುಲಪತಿ ಡಾ. ಸೀಮಾ ಜ್ಞಾನದೇವ್ ಎತ್ತಿ ಪಕ್ಕಕ್ಕೆ, ತನ್ನ ಕಾಲಿನ ಬಳಿಗೆ ಇಡಲಾಗಿದ್ದು, ಇದನ್ನು ಕಂಡ ಗ್ರಾಮೀಣ ವಿಭಾಗದ ಉಪನ್ಯಾಸಕಿ ಗಂಭೀರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ಇದು ಯಾರದರೂ ಅಪಮಾನಿಸುವ ಕೆಲಸವೇ ? ಎಷ್ಟು ಸಲ ಹೇಳಿದರು, ಫೋಟೋನನ್ನು ಗೌರವದಿಂದ ಇಡಿ ಅಂದರೂ ಕೇಳೋದಿಲ್ಲ,” ಎಂಬ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರನ್ನು ಹೀನಾಯವಾಗಿ ಕಾಣುತ್ತಾರೆ” ಎಂದು ಆರೋಪಿಸಿದ್ದಾರೆ.

ಈ ಘಟನೆಯ ಬಗ್ಗೆ ವಿದ್ಯಾರ್ಥಿ ಸಂಘಟನೆಗಳು ಹಾಗೂ ವಿವಿಧ ಸಾಮಾಜಿಕ ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ವಿಶ್ವವಿದ್ಯಾಲಯದ ಆಡಳಿತದಿಂದ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದ್ದಾರೆ.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಈ ರೀತಿ ಅಪಮಾನಸಾಧನೆಯ ನಡೆ ನಡೆಯುತ್ತಿರುವುದು ವಿಷಾದಕರ ಹಾಗೂ ಉಗ್ರಗೊಳಿಸುವಂತಹದ್ದಾಗಿದೆ ಎಂಬ ಪ್ರತಿಕ್ರಿಯೆಗಳು ಜನಮಟ್ಟದಲ್ಲಿ ಕೇಳಿಬರುತ್ತಿವೆ.
ವಿಶ್ವವಿದ್ಯಾಲಯದ ಮೂಲಗಳಿಂದ ಈ ಕುರಿತು ಸ್ಪಷ್ಟನೆ ಇನ್ನೂ ಬಂದಿಲ್ಲ.
ನೆಲಮಂಗಲ ಬಳಿ ರಿಸರ್ವ್ ಬ್ಯಾಂಕ್ನ ಲಕ್ಷ ಲಕ್ಷ ನಾಣ್ಯ ಸಾಗಾಟ ಮಾಡುತ್ತಿದ್ದ ಲಾರಿ ಪಲ್ಟಿ

[…] […]