ವೈನಾಡು: ಕೇರಳದ ವೈನಾಡಿನ ಮೇಪಾಡಿಯಿಂದ 15 ಕಿ.ಮೀ. ದೂರದಲ್ಲಿರುವ ಚೂರಲ್ ಮಲ ಮತ್ತು ಮುಂಡಕಾಯಿ ಗ್ರಾಮಗಳಲ್ಲಿ ವಾಸಿಸುತ್ತಿದ್ದ ಸರಿ ಸುಮಾರು 1,000 ಮಂದಿ 2024 ನೇ ಇಸವಿ ಜುಲೈ 30 ನೇ ತಾರೀಖು ಬೆಳಗಿನ ಜಾವ 1-15 ನಿಮಿಷದ ಆಸು ಪಾಸಿನಲ್ಲಿ ಬರ ಸಿಡಿಲಿನಂತೆ ಬಂದು ಅಪ್ಪಳಿಸಿದ ಸುನಾಮಿ ಮಳೆಯ ಹೊಡೆತಕ್ಕೆ ಊರಿಗೆ ಊರೇ ಸರ್ವ ನಾಶವಾಗಿ ಶಾಂತವಾಗಿ ಮಲಗಿದ್ದ ಪುರುಷರು,ಮಹಿಳೆಯರು,ಮಕ್ಕಳು,ವಯೋವೃದ್ಧರು ಸೇರಿದಂತೆ 1,000ಕ್ಕಿಂತ ಹೆಚ್ಚು ಜನರನ್ನು ಛಿದ್ರ,ಛಿದ್ರವಾಗಿ ಬಲಿ ತೆಗೆದುಕೊಂಡ ಈ ದಿನ ಎಂದೂ ಮರೆಯಲಾಗದ ಘಟನೆಯಾಗಿ ಉಳಿದಿದೆ.
ಇಂದು ಆ ಎರೆಡೂ ಗ್ರಾಮಗಳ ಜನರ ಆಕ್ರಂಧನ ಮುಗಿಲು ಮುಟ್ಚಿ ಬದುಕುಳಿದವರ ತಮ್ಮವರ ಕಳೇ ಬರಹವನ್ನು ತೆಗೆದುಕೊಳ್ಳಲು ಅವರು ಪಟ್ಚ ಪಾಡು ನೋಡಿದವರಿಗೆ ಮಾತ್ರ ಗೊತ್ತು.ಎಂತಹ ಘನಘೋರ ದುರ್ಘಟನೆ ಸಂಭವಿಸಿತ್ತೆಂದರೆ ಸತ್ತವರ ಕಳೇ ಬರಹಗಳ ಪೂರ್ತಿ ದೇಹ ಸಿಗದೇ ತಲೆ,ದೇಹ ಭಾಗ,ಕೈ,ಕಾಲು,ಕಿವಿ ಹಾಗೂ ಅವರು ಧರಿಸಿದ್ದ ಒಡವೇ,ವಸ್ತ್ರಗಳಿಂದ ಈ ಕಳೇ ಬರಹ ನಮ್ಮವರದ್ದು ಎಂದು ಪತ್ತೇ ಮಾಡಿ ತೆಗೆದುಕೊಳ್ಳುತ್ತಿದ್ದ ಅವರ ಸಂಬಂಧಿಕರ ನೋವು ಹೇಳ ತೀರದ್ದು.
ಸಾರ್ವಜನಿಕರಿಂದಿಡಿದು ಇಡೀ ಕೇರಳ ಸರ್ಕಾರ ಬದುಕುಳಿದವರ ಜೊತೆ ನಿಂತು ಎಲ್ಲರ ಕಳೇಬರಹವನ್ನು ಒಂದು ಕಡೆ ಅಂತ್ಯ ಸಂಸ್ಕಾರ ನೆರವೇರಿಸಿದ ರೀತಿ ಸ್ಮರಣೀಯ.
ಇಂದು, ದುರಂತದ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ, ಕೇರಳ ಸರ್ಕಾರ ಶಾಸ್ತ್ರೀಯ ಮತ್ತು ಶ್ರದ್ಧಾಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ಬದುಕುಳಿದ ಸಂಬಂಧಿಕರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ವರದಿ
ಎಂ.ನಾಗೇಂದ್ರಕುಮಾರ್

[…] ವಿಡಿಯೋ ನೋಡಿ: ವೈನಾಡಿನ ಚೂರಲ್ ಮಲ ಮತ್ತು ಮು… […]