ನಾನು ಪಂಡಿತನಲ್ಲ, ಸಂಶೋಧನಾ ವಿಧ್ವಾಂಸಕನೂ ಅಲ್ಲ. ಒಬ್ಬ ಸಾಮಾನ್ಯ ಮನೋವೈದ್ಯನಷ್ಟೆ. ಮನಸ್ಸೆಂಬುದು ಉಹಿಸಲಾರದಷ್ಟು ಅಗಲ ಮತ್ತು ಎತ್ತರ. ವಿಜ್ಞಾನವನ್ನು ಬಗೆದಷ್ಟು ಪಳಯುಳಿಕೆಗಳ ಅನಾವರಣ. ಮನಸ್ಸಿನ ಒಳಗೆ ಇಣಿಕಿದಷ್ಟು ಸೂಕ್ಷ್ಮತೆಯ ಗೊಂದಲಗಳು. ಈ ವಿಷಯ ಪಕ್ಕದಲ್ಲಿ ಇಡೋಣ. ಈಗ ತತ್ವ ವಿಚಾರಕ್ಕೆ ಬಂದಾಗ, ತತ್ವಶಾಸ್ತ್ರವು ಎರಡು ತತ್ವ ತಾಂತ್ರಿಕ ಮನೋ ಸಲಕರಣೆಗಳನ್ನು ಹೊಂದಿರುತ್ತದೆ. ಮೊದಲನೆಯದು ಪ್ರಶ್ನೆ, ಇನ್ನೊಂದು ಕೌತುಕ. ಪ್ರಶ್ನೆಯಿಂದ ದ್ವಂದ್ವ ಕುತೂಹಲದಿಂದ ಆವಿಷ್ಕಾರ. ಇವುಗಳು ಒಳಗೊಂಡಿರುವ ಸಲಕರಣೆಗಳಿಂದ ನನ್ನದೇ ಆದ ಒಂದು ಸಿದ್ದಾಂತವನ್ನು ನೀಡುವ ಯತ್ನ.
“ಯಮ” ಮಹಾರಾಜ ಯಾರು? ಪುರಾಣದ ಕಥೆ ನನಗೆ ತಿಳಿಯದು. ಇಂದ್ರ ಇದ್ದಾ ಎನ್ನುವುದಾರೆ ಯಮ ಮಹಾರಾಜನೂ ಇರಬೇಕಲ್ಲವೇ. ಜನರಿಗೆ ಸ್ವರ್ಗ ಮತ್ತು ನರಕ ಮೇಲೆ ಇರುವುದಾದರೆ, ಪ್ರಜ್ಞಾವಂತನಿಗೆ ಅಸ್ತಿತ್ವದಲ್ಲಿರುವ ಪ್ರಪಂಚವೇ ಸ್ವರ್ಗ ಮತ್ತು ನರಕ ಅನ್ನಬಹುದೇ? ಪ್ರಸ್ತುತದಲ್ಲಿ ನಮ್ಮ ನಡುವೆ ಮಹಾರಾಜರು ಇದ್ದಾರೆ ಮತ್ತು ಬಿಕಾರಿಗಳೂ ಇದ್ದಾರೆ. ಇವುರುಗಳ ಮಧ್ಯೆ ನಾವು ನೀವು ಹೇಗೋ ಬದಕುತ್ತಾ ಸಾಗುತ್ತಿದ್ದೆವೇ. ಪುರಾಣದಲ್ಲಿ ಸ್ವರ್ಗ ಇದೆ ಆದರೂ ಸತ್ತ ನಂತರ ಯಾರು ಸ್ವರ್ಗಕ್ಕೆ ಹೋಗುವುದಿಲ್ಲ. ಕಾರಣ ಎಲ್ಲರೂ ಪಾಪಿಗಳೇ. ನರಕಕ್ಕೆ ಹೋಗುವದು ನಿಶ್ಚಿತ. ಹೀಗೆ ಇರುವಾಗ ನರಕ ಸಾಮ್ರಾಜ್ಯಕ್ಕೆ “ಯಮ” ಹೇಗೆ ಮಹಾರಾಜನಾದ?
“ಯಮ” ಯಾರು? “ಯಮ” ಪದದ ಅರ್ಥ, ಸಮರ್ಥ ಹಾಗು ಸೃಜನಶೀಲತೆ. ಇಂತಾ ವ್ಯಕ್ತಿ ನರಕ ಎಂಬ ಜಗತ್ತಿಗೆ ಹೇಗೆ ಹೋದ? ಇಂತವನು ಸ್ವರ್ಗದಲ್ಲಿ ಇರಬೇಕು, ಆದರೆ ನರಕವನ್ನು ಹೇಗೆ ಸೇರಿದ? ಇದೇ ಕುತೂಹಲ. ನನ್ನ ನಿರೂಪಣೆ ವೈಯಕ್ತಿಕ. ವಿರುಧ್ಧ ಮತ್ತು ಟೀಕೆ ಸಹಜ, ಸ್ವಾಗತಿಸುವೆನು.
ಸುಮಾರು 13.3 ಬಿಲಿಯನ್ ವರ್ಷಗಳ ಹಿಂದೆ ನೆಡೆದಂತಾ ಹಿರಣ್ಯ ಗರ್ಭ ಸ್ಪೂಟದಿಂದ ಬ್ರಹ್ಮಾಂಡ ಸೃಷ್ಟಿ ಆಯಿತೆಂದು ತಿಳಿದಿದ್ದೇವೆ. ಈ ಬ್ರಹ್ಮಾಂಡದಲ್ಲಿ ಕಾಣಬರುವ ಕೋಟ್ಯಂತರ ನಕ್ಷತ್ರ ಪುಂಜಗಳಲ್ಲಿ ನಮ್ಮ ಭೂಮಿ ಒಂದು ಧೂಳು ಮಾತ್ರ. ಈ ಗ್ರಹದ ಮೇಲೆ ಸುಮಾರು 4 ಬಿಲಿಯನ್ ವರ್ಷಗಳಿಂದ ಆದ ವಿಕಾಸದೊಂದಿಗೆ ಮಾನವ ಸೃಷ್ಟಿ ಆದ ಎಂದು ವಿಜ್ಞಾನ ಹೇಳುತ್ತದೆ. ಸಾಮಾನ್ಯವಾಗಿ ಉತ್ಖನನದಲ್ಲಿ ಕಂಡ ಮಾನವನ ಮೂಳೆಗಳಿಂದ ಮಾನವ ಎಂದಿನಿಂದ ಇದ್ದಾನೆ ಎನ್ನುವ ವಿಚಾರ ತಿಳಿಸಬಹುದು. ಇಲ್ಲಿಯವರೆಗೂ ಯಾವುದೇ ಉತ್ಖನನದಲ್ಲಿ ಇವರೇ ದೇವರು ಅಥವ ಇವರೇ ದೇವತೆ ಎಂಬುದರ ಪುರಾವೆ ಇಲ್ಲ. ಪುರಾಣದಲ್ಲಿ ದೇವತೆಗಳ ಅತೀಂದ್ರಿಯ ಶಕ್ತಿ ಮತ್ತು ಪವಾಡಗಳನ್ನು ವಿವರಿಸಲಾಗಿದೆ. ಆದರೇ ವೇದ ಹಾಗಿಲ್ಲ. ಕಡೇ ಪಕ್ಷ ವೇದಕ್ಕೆ ಸುಮಾರು 5,000 ಅಥವ 6,000 ಸಾವಿರ ವರ್ಷಗಳು ಇತಿಹಾಸ ಇರಬಹುದು. ಬರೆದಿರುವರು ದೂರ ದೃಷ್ಟಿ ಉಳ್ಳ ಋಷಿ ಮುನಿಗಳು. ಋಷಿಗಳು ವಾಖ್ಯಾನಿಸಿದುವುದಾದರೂ ಯಾವ ವಿಷಯ? ಅವುಗಳು ದೇವಾನು ದೇವತೆಗಳ ಬಗ್ಗೆ, ಆರಾಧಿಸುವ ರೀತಿ, ಪ್ರಪಂಚ ಮತ್ತು ಮಾನವ ಸೃಷ್ಟಿ, ಹುಟ್ಟು ಸಾವಿನ ವಿಷಯ, ಮನೋ ಕಾಮನೆ ಮತ್ತು ಶಮನಗಳ ಸೂತ್ರಗಳು, ದೈನಂದಿನ ಆಚರಣೆ ಹಾಗು ಭಕ್ತಿ ಪ್ರಧಾನ ಶ್ಲೋಕಗಳು ಇತ್ಯಾದಿ. ಆದುದರಿಂದ ನಾಲ್ಕು ವೇದಗಳು ಜ್ಞಾನ, ಭಕ್ತಿ ಮತ್ತು ಆಚರಣೆಗಳ ಗ್ರಂಥಗಳಾಗಿವೆ.
ಈಗ “ಯಮ” ನ ಕಡೆ ಬರೋಣ. ಮೊದಲನೆ ಯುಗದ ಪುರುಷನ ಚಿತ್ರಣ ನನ್ನಲ್ಲಿ ಇಲ್ಲ. ಹಲವಾರು ಸಿದ್ಧಾಂತಗಳು ಇದ್ದರೂ ಯಾರು ನಿಖರವಾಗಿ ಎಲ್ಲಿಂದ ಮೊದಲನೆ
ಮಾನವ ಸೃಷ್ಟಿಯಾದ ಎಂಬುದು ತಿಳಿದಿಲ್ಲ. ಮಾನವ ಸೃಷ್ಟಿ ಆದ ಎಂದುಕೊಳ್ಳೊಣ. ಹಿಂದೆ ವಿಕಾಸದಿಂದ ಮನ್ವಂತರನಾದ. ಕೆಟ್ಟ ನಡತೆ ಇಲ್ಲ, ಕೆಟ್ಟ ವಿಚಾರ ಇಲ್ಲ ಮತ್ತು ಕೆಟ್ಟ ನುಡಿ ಇಲ್ಲ. ಇಂತಾ ವ್ಯಕ್ತಿತ್ವ ಹೊಂದಿದ್ದ ಮಾನವ ಸತ್ತ ಮೇಲೆ ನರಕಕ್ಕೆ ಹೋಗಲು ಹೇಗೆ ಸಾಧ್ಯ. ಇಲ್ಲಿಂದಲೇ ಕಾಲ್ಪನಿಕ ಲೋಕ “ನರಕ” ಸೃಷ್ಟಿ ಆಯಿತೇ? ಈ ವಿಷಯ ನನ್ನ ಊಹೆಯಷ್ಟೆ. ಇವನು ಮಾಡಿದ್ದ ತಪ್ಪೇನು? ಹಿಂದಿನ ಕಠಿಣ ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ ಪ್ರೇಮಾಂಕುಶ ಮತ್ತು ಕುಲ ವರ್ಧನೆಯೇ ಕೆಟ್ಟ ನಡುವಳಿಕೆಗಳು ಆಗಿದ್ದವಾ? ಇಂತಹ ವರ್ತನೆಗೆ ಈ ನರ ಮಾನವ ಸತ್ತ ಮೇಲೆ “ನರಕ” ಲೋಕದ ದಾರಿ ಹಿಡಿಯಬೇಕಾಯಿತೇ?
ಈ ಲೋಕವನ್ನು ಸೇರಿದ ಮೊದಲನೆ ಮಾನವನಿಗೆ ದಾರಿ ತೋಚದಂತಾಯಿತು. ಕಾರಣ ಒಮ್ಮಲೆ ನರ ಮಾನವರು ಮೊದಲನೆ ಮಾನವನಗಿಂತ ಕೆಟ್ಟದನ್ನು ಮಾಡಿ ನರಕಕ್ಕೆ ಬರುತ್ತಿದ್ದರು. ಬಂದವರನ್ನು ಹೇಗೆ ನಿಯಂತ್ರಿಸುವುದು? ಆದುದರಿಂದ ಈ ಮೊದಲನೆ ಮಾನವ ಒಂದು ಸಾಮ್ರಾಜ್ಯವನ್ನು ಸ್ಥಾಪಿಸಿ ಧರ್ಮವನ್ನು ಎತ್ತಿ ಹಿಡಿದು ಕಾನೂನಿನ ಅಡಿಯಲ್ಲಿ ಇವನಿಗಿಂತ ಕೆಟ್ಟದನ್ನು ಮಾಡಿದವರಿಗೆ ಶಿಕ್ಷೆ ಕೂಡುವಂತನಾದ. ಈ ಮೊದಲನೆ ಮಾನವ ಧರ್ಮವನ್ನು ಎತ್ತಿ ಹಿಡಿದು ಶಿಕ್ಷೆ ಕೊಡುವುದರಲ್ಲಿ ಸಮರ್ಥನಾದ ಎನ್ನುವ ಕಾರಣದಿಂದ “ಯಮ ಧರ್ಮರಾಜ” ಎಂಬುದಾಗಿ ನಾಮಕರಣಗೊಂಡಿರಬಹುದು. ಈ ಯಮ ಧರ್ಮರಾಜ is the ruler to rule on morality ಎಂದತ್ತಾಯಿತು.
ಇದನ್ನು ಓದಿ: ಮೆದುಳೆಂಬ ಬ್ರಹ್ಮಾಂಡ ಮನೆ (ವೈಜ್ಞಾನಿಕ ವಿವರಣೆ)
ಯಮ ಮತ್ತು ಪ್ರಾಣದ (ಉಧ್ಗಿತ) ನಡುವೆ ಸಂಬಂಧ ಏನು? ಈ “ಪ್ರಾಣ” ದ ಬಗ್ಗೆ ಅನೇಕ ನಿರೂಪಣೆಗಳು ಮತ್ತು ವಿಶ್ಲೇಷಣೆಗಳು ಇವೆ. ನನ್ನ ಚಿಂತನಾ ಲಹರಿಯ ಅಡಿಯಲ್ಲಿ ಪ್ರಾಣ ಎಂದರೆ ಜ್ಞಾನ ಅಷ್ಟೆ. ಪತಂಜಲಿಯ “ಪ್ರಾಣಾಯಾಮ” ಪದವನ್ನು ಬೇರ್ಪಡಿಸಿದಾಗ ನನಗೆ ಕಾಣುವಂತಾದ್ದು “ಪ್ರಾಣ” ಮತ್ತು “ಯಮ”. ಸಾಮಾನ್ಯವಾಗಿ ಹೇಳಬೇಕೆಂದರೆ ಪ್ರಾಣವನ್ನು ಉಸಿರಿಗೆ ಹೋಲಿಸುತ್ತಾರೆ. “ಯಾಮ” ಎಂದರೆ ನಿಶ್ಯಬ್ದವಾದ ಪ್ರಾಂಗಣ. ಒಟ್ಟಾರೆ ಪ್ರಾಣಾಯಾಮವನ್ನು breathing exercise ಎನ್ನಬಹುದು. ವೇದಾನುಸಾರ ಉಸಿರನ್ನು “ಉಧ್ಗಿತ” ಎನ್ನುವರು.
ಬೃಹತ್ ಅರಣ್ಯ ಉಪನಿಷತ್ನಲ್ಲಿ ಬರುವ ಸೂತ್ರ …
ಯೋ ಹೆ ವೈ ಜೇಷ್ಟಮ್ ಚ ಶ್ರೇಷ್ಠಮ್ ಚ ವೇದಾಹ, ಜೇಷ್ಟಶ್ಚ ಶ್ರೇಷ್ಠಶ್ಚ ಸ್ವ ಅಂ ಭವತಿ, ಪ್ರಾಣೋಹೋ ವೈ ಜೇಷ್ಟಶ್ಚ ಶ್ರೇಷ್ಠಶ್ಚ, ಜೇಷ್ಟಶ್ಚ ಶ್ರೇಷ್ಠಶ್ಚ ಚಾ ಸ್ವಾ ಅಂ ಭವತಿ, ಅಪಿ ಚಾ ಏಶಾಮ್ ಬುಬ್ಬುಹು ಅತಿ, ಯ ಏವಮ್ ವೇದಾಹ.
He (the creator) knows the oldest of oldest and also that of high standard and that is the breath. Breath is the greatest in all beings on Earth. Thus, the Prana or the life source is supreme. Hence speech is the greatest of all.
ಅಂದರೆ, ನಾವು ಆಡುವ ನುಡಿ ಸುಮ್ಮನೆ ಬರುವುದಿಲ್ಲ. ಬಂದ ನುಡಿಯ ಹಿಂದೆ ಒಂದು ಉದ್ದೇಶವಿರುತ್ತೆ. ಮಾತನಾಡುವಾಗ ನಮ್ಮ ಮನೋಕಾಮನೆ ಮತ್ತು ಯೋಚನೆಗಳ ಲೇಪನ ಪಡೆದಿರುತ್ತೆ. ಮಾತುಗಳು ಅಥವ ಬಾಷೆ, ಮನಸ್ಸು ಮತ್ತು ನರಗಳ ಪುಂಜಗಳ ನಡುವೆ ಆಗುವ ಸಂಸ್ಕರಣೆಯಿಂದ ಹೂರಬರುತ್ತದೆ. ಇದರಿಂದಲೇ ಏನೋ ಮಾತನಾಡುವಾಗ ಜೋಪಾನವಾಗಿ ಮಾತನಾಡಬೇಕು ಎನ್ನುವುದು. ಮಹಾ ಋಷಿ ಪತಂಜಲಿಯ ಉದ್ದೇಶ ಪ್ರಾಣ ಅಥವ ಉಸಿರಿನ ಮೇಲೆ ಧ್ಯಾನವನ್ನು ಮಾಡಿ ನಮ್ಮ ಬಾಷೆ ಅಥವ ನುಡಿಗಳ ಮೇಲೆ ಹತೋಟಿ ಸಾಧಿಸಬೇಕೆಂಬುದು. ಇಂದಿನ ಬಾಷೆ ದೇವರಿಗೇ ಪ್ರೀತಿ. ಮಾತನಾಡಿದರೆ ಮನಸ್ಸಿಗೆ ನಾಟುವಂತ ನುಡಿಗಳು. ಒಬ್ಬರ ಮೇಲೆ ಇನ್ನೊಬ್ಬರು ಚಾಡಿ.
ಯೋಗದಿಂದ ಯಾವುದೇ ನಡೆ ನುಡಿ ಸುಧಾರಿಸಿಲ್ಲ. ಯೋಗದ ಹೆಸರಿನಲ್ಲಿ ಪಾರ್ಟಿಗಳು ಆಗುತ್ತಿವೆ. ಯೋಗ ಎಂಬುದು ವ್ಯಾಪಾರ ಆಗಿದೆ. ಕೆಲವರಿಗೆ ಯೋಗದ ಆರ್ಥವೇ ತಿಳಿದಿಲ್ಲ. ಒಂದತ್ತು ನಿಜ, ನಾವು ನಮ್ಮ ನುಡಿ ಅಥವ ಬಾಷೆ ಮೇಲೆ ನಿಯಂತ್ರಣ ಸಾಧಿಸದಿದ್ದರೇ “ಯಮ ಧರ್ಮರಾಜ” ನು ತನ್ನ ನ್ಯಾಯಭರಿತವಾದ ಅಥವಾ ಧರ್ಮಾನುಸಾರ ಅವನ ಸಾಮ್ರಾಜ್ಯದಲ್ಲಿ ನಮ್ಮನ್ನು ಶಿಕ್ಷಿಸದೇ ಬಿಡುವುದಿಲ್ಲ………….
ಮುಂದುವರಿಯುವುದು….
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ


[…] ಇದನ್ನು ಓದು: ಯಮ ಮಹಾರಾಜ (ವೈಯಕ್ತಿಕ ಸಿದ್ಧಾಂತ) […]