“ಪು.ತಿ.ನರಸಿಂಹಾಚಾರ್”
~~~~~~~~~~~~~~~~
1. ಪು.ತಿ.ನರಸಿಂಹಾಚಾರ್ ಅವರ ಹುಟ್ಟೂರು ಯಾವುದು?
1)ಬೆಳ್ಳೂರು. 2)ನಾಗಮಂಗಲ. 3)ಮೇಲುಕೋಟೆ
2. ಪು.ತಿ.ನರಸಿಂಹಾಚಾರ್ ಅವರ ಜನ್ಮದಿನಾಂಕ ಯಾವುದು?
1) 17 ಮಾರ್ಚ್ 1905 2)17 ಫೆಬ್ರವರಿ 1905 3)17 ಏಪ್ರಿಲ್ 1905
3. ಪು.ತಿ.ನರಸಿಂಹಾಚಾರ್ ಅವರ ತಂದೆಯ ಹೆಸರೇನು?
1)ವೆಂಕಟನಾರಾಯಣ ಅಯ್ಯಂಗಾರ್. 2)ಲಕ್ಷ್ಮೀನಾರಾಯಣ ಅಯ್ಯಂಗಾರ್. 3)ತಿರುನಾರಾಯಣ ಅಯ್ಯಂಗಾರ್.
4. ಪು.ತಿ.ನರಸಿಂಹಾಚಾರ್ ಅವರ ತಾಯಿಯ ಹೆಸರೇನು?
1)ಕಾಂತಮ್ಮ. 2)ಶಾಂತಮ್ಮ. 3)ಪಾಪಮ್ಮ
5. ಪಂಪ ಪ್ರಶಸ್ತಿ ಪಡೆದ ಪು.ತಿ.ನರಸಿಂಹಾಚಾರ್ ಅವರ ಕೃತಿ ಯಾವುದು?
1)ಶ್ರೀಹರಿಚರಿತೆ. 2)ಯದುಗಿರಿಯ ವೀಣೆ. 3)ಹಣತೆ
6. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಪು.ತಿ.ನರಸಿಂಹಾಚಾರ್ ಅವರ ಕೃತಿ ಯಾವುದು?
1)ಗೋಕುಲ ನಿರ್ಗಮನ. 2)ಯದುಗಿರಿಯ ಮೌನ ವಿಕಾಸ. 3)ಹಂಸ ದಮಯಂತಿ ಮತ್ತು ಇತರ ರೂಪಕಗಳು
7. ಇವುಗಳಲ್ಲಿ ಪು.ತಿ.ನರಸಿಂಹಾಚಾರ್ ಅವರ ನಾಟಕ ಕೃತಿ ಯಾವುದು?
1)ರಾಮಾಚಾರಿಯ ನೆನಪು. 2)ಅಹಲ್ಯೆ 3)ರಥಸಪ್ತಮಿ
8. ಇವುಗಳಲ್ಲಿ ಪು.ತಿ.ನರಸಿಂಹಾಚಾರ್ ಅವರ ಅನುವಾದ ಕೃತಿ ಯಾವುದು?
1)ಮಹಾ ಪ್ರಸ್ಥಾನ. 2)ಧ್ವಜ ರಕ್ಷಣೆ. 3)ಶ್ರೀರಾಮ ಪಟ್ಟಾಭಿಷೇಕ
9. ಸಂಗೀತ ಪ್ರಧಾನವಾದ ಪು.ತಿ.ನರಸಿಂಹಾಚಾರ್ ಅವರ ಗೀತನಾಟಕ ಯಾವುದು?
1)ದೀಪಲಕ್ಷ್ಮಿ. 2)ಗೋಕುಲ ನಿರ್ಗಮನ. 3)ಜಾಹ್ನವಿಗೆ ಜೋಡಿ ದೀವಿಗೆ
10. ಪು.ತಿ.ನರಸಿಂಹಾಚಾರ್ ಅವರ ಕೊನೆಯ ಕೃತಿ ಯಾವುದು?
1)ಶಾರದ ಯಾಮಿನಿ. 2)ಎಂಭತ್ತರ ನಲುಗು 3)ಹಣತೆಯ ಹಾಡು
11. ಪು.ತಿ.ನರಸಿಂಹಾಚಾರ್ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವು ಜರುಗಿದ ಸ್ಥಳ ಯಾವುದು?
1)ಚಿಕ್ಕಮಗಳೂರು. 2)ಮಂಗಳೂರು. 3)ಮೇಲುಕೋಟೆ
12. ಪು.ತಿ.ನರಸಿಂಹಾಚಾರ್ ಅವರಿಗೆ ಭಾರತ ಸರ್ಕಾರದ ವತಿಯಿಂದ ದೊರೆತ ಪ್ರಶಸ್ತಿ ಯಾವುದು?
1)ಪದ್ಮಭೂಷಣ. 2)ಪದ್ಮವಿಭೂಷಣ. 3)ಪದ್ಮಶ್ರೀ
13. ಪು.ತಿ.ನರಸಿಂಹಾಚಾರ್ ಅವರ ಮನೆಯನ್ನು ಸ್ಮಾರಕವಾಗಿ ಮಾಡಿದ ಸರ್ಕಾರದ ಮುಖ್ಯಮಂತ್ರಿಯಾಗಿದ್ದವರು ಯಾರು?
1)ರಾಮಕೃಷ್ಣ ಹೆಗಡೆ. 2)ಆರ್.ಗುಂಡೂರಾವ್. 3)ವೀರಪ್ಪಮೊಯ್ಲಿ
14. ‘ಪುತಿನ ಕಾವ್ಯ ಮೀಮಾಂಸೆ’ ಕೃತಿಯ ಲೇಖಕರು ಯಾರು?
1)ಜಿ.ಎಸ್.ಶಿವರುದ್ರಪ್ಪ. 2)ಬಿ.ಎಂ.ಶ್ರೀಕಂಠಯ್ಯ. 3)ಎಲ್.ಎಸ್.ಶೇಷಗಿರಿರಾವ್
15. ಪು.ತಿ.ನರಸಿಂಹಾಚಾರ್ ಅವರು ದೈವಾಧೀನರಾದ ದಿನಾಂಕ ಯಾವುದು?
1)23 ಅಕ್ಟೋಬರ್ 2000 2)23 ಅಕ್ಟೋಬರ್ 1998 3)23 ಅಕ್ಟೋಬರ್ 1996
~~~~~~~~~~~~~~~~~~~~~~~~~
★ಉತ್ತರಗಳು:–
1)ಮೇಲುಕೋಟೆ
2)17 ಮಾರ್ಚ್ 1905
3)ತಿರುನಾರಾಯಣ ಅಯ್ಯಂಗಾರ್
4)ಶಾಂತಮ್ಮ
5)ಶ್ರೀಹರಿಚರಿತೆ
6)ಹಂಸ ದಮಯಂತಿ ಮತ್ತು ಇತರ ರೂಪಕಗಳು
7)ಅಹಲ್ಯೆ
8)ಮಹಾಪ್ರಸ್ಥಾನ
9)ಗೋಕುಲ ನಿರ್ಗಮನ
10)ಹಣತೆಯ ಹಾಡು
11)ಚಿಕ್ಕಮಗಳೂರು
12)ಪದ್ಮಶ್ರೀ
13)ವೀರಪ್ಪ ಮೊಯ್ಲಿ
14)ಜಿ.ಎಸ್. ಶಿವರುದ್ರಪ್ಪ
15) 23 ಅಕ್ಟೋಬರ್ 1998
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
