“ಡಿ.ವಿ.ಗುಂಡಪ್ಪ”
~~~~~~~~~~~~~~~~
1. ಡಿ.ವಿ.ಗುಂಡಪ್ಪನವರು ಹುಟ್ಟಿದೂರು ಯಾವುದು?
1)ಮುಳಬಾಗಿಲು. 2)ಕೋಲಾರ. 3)ದೇವನಹಳ್ಳಿ
2. ಡಿ.ವಿ.ಗುಂಡಪ್ಪನವರ ಜನ್ಮದಿನಾಂಕ ಯಾವುದು?
1)1887 ಮಾರ್ಚ್ 17 2)1896 ಮಾರ್ಚ್ 17 3)1901 ಮಾರ್ಚ್ 17
3. ಪ್ರೌಢಶಾಲಾ ಹಂತದಲ್ಲಿಯೇ ವಿವಾಹವಾದ ಡಿ.ವಿ.ಗುಂಡಪ್ಪನವರ ಬಾಳ ಸಂಗಾತಿ ಯಾರು?
1)ಭಾಗ್ಯಮ್ಮ. 2)ಭಾಗ್ಯವತಿದೇವಿ. 3)ಭಾಗೀರಥಮ್ಮ
4. ಕನ್ನಡದ ಭಗವದ್ಗೀತೆ ಎಂದು ಓದುಗರಿಂದ ಬಿಂಬಿಸಿಕೊಂಡ ಡಿ.ವಿ.ಗುಂಡಪ್ಪ ಅವರ ಕೃತಿ ಯಾವುದು?
1)ಮಂಕುತಿಮ್ಮನ ಕಗ್ಗ. 2)ಉಮರನ ಒಸಗೆ. 3)ಅಂತಃಪುರ ಗೀತೆ
5. ಡಿ.ವಿ.ಗುಂಡಪ್ಪನವರ ನಾಟಕ ಕೃತಿ ಯಾವುದು?
1)ಗೀತ ಶಾಕುಂತಲ. 2)ಮರುಳ ಮುನಿಯನ ಕಗ್ಗ. 3)ವಿದ್ಯಾರಣ್ಯ ವಿಜಯ
6. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಡಿ.ವಿ.ಗುಂಡಪ್ಪನವರ ಗ್ರಂಥ ಯಾವುದು?
1)ಶ್ರೀರಾಮ ಪರೀಕ್ಷಣಂ. 2)ಮ್ಯಾಕ್ ಬೆತ್. 3)ಶ್ರೀಮದ್ಭಗವದ್ಗೀತಾ ತಾತ್ಪರ್ಯ
7. ಡಿ.ವಿ.ಗುಂಡಪ್ಪನವರ ಮಂಕುತಿಮ್ಮನ ಕಗ್ಗದಲ್ಲಿ “ಬದುಕು________” ಎಂದು ಹೇಳಿದ್ದಾರೆ.
1)ಬೇವು ಬೆಲ್ಲ. 2)ಜಟಕಾಬಂಡಿ. 3)ಗಂಡಾ ಗುಂಡಿ
8. ಡಿ.ವಿ.ಗುಂಡಪ್ಪನವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವು ಜರುಗಿದ ಸ್ಥಳ ಯಾವುದು?
1)ಮಡಿಕೇರಿ. 2)ಮೈಸೂರು. 3)ಕೋಲಾರ
9. 1974ರಲ್ಲಿ ಭಾರತ ಸರ್ಕಾರದ ವತಿಯಿಂದ ಡಿ.ವಿ.ಗುಂಡಪ್ಪನವರಿಗೆ ದೊರೆತ ಪ್ರಶಸ್ತಿ ಯಾವುದು?
1)ಪದ್ಮವಿಭೂಷಣ. 2)ಪದ್ಮಶ್ರೀ. 3)ಪದ್ಮಭೂಷಣ
10. ಭಾರತೀಯ ಅಂಚೆ ಇಲಾಖೆಯು ಡಿ.ವಿ.ಗುಂಡಪ್ಪನವರ ನೆನಪಿಗಾಗಿ ಅಂಚೆ ಚೀಟಿ ಬಿಡುಗಡೆ ಮಾಡಿದ ವರ್ಷ ಯಾವುದು?
1)1998 2)1988 3)1978
11. ಖ್ಯಾತ ಲೇಖಕರಾದ ಡಿ.ವಿ.ಗುಂಡಪ್ಪನವರ ಪುತ್ರ ಯಾರು?
1)ಬಿ.ಜಿ.ಎಲ್.ಸ್ವಾಮಿ. 2)ಹೆಚ್.ಜಿ.ಗೋವಿಂದೇಗೌಡ. 3)ಜಿ.ಮಾದೇಗೌಡ
12. ಡಿ.ವಿ.ಗುಂಡಪ್ಪನವರ ತಂದೆಯ ಹೆಸರೇನು?
1)ವೆಂಕಟೇಶಯ್ಯ. 2)ವೆಂಕಟರಮಣಯ್ಯ. 3)ವೆಂಕಟ್ ನಾರಾಯಣಯ್ಯ
13. ಡಿ.ವಿ.ಗುಂಡಪ್ಪನವರ ತಾಯಿಯ ಹೆಸರೇನು?
1)ನೀಲಮ್ಮ. 2)ಮಲ್ಲಮ್ಮ. 3)ಅಲಮೇಲಮ್ಮ
14. “ಡಾ.ಡಿ.ವಿ.ಗುಂಡಪ್ಪ- ಜೀವನ ಮತ್ತು ಸಾಧನೆ” ಕೃತಿಯ ಲೇಖಕರು ಯಾರು?
1)ಎಸ್.ದಿವಾಕರ್. 2)ನಾಗತಿಹಳ್ಳಿ ಚಂದ್ರಶೇಖರ್. 3)ನೀಲತ್ತಹಳ್ಳಿ ಕಸ್ತೂರಿ
15. ಡಿ.ವಿ.ಗುಂಡಪ್ಪನವರು ವಿಧಿವಶರಾದ ದಿನಾಂಕ ಯಾವುದು?
1)1975 ಅಕ್ಟೋಬರ್ 7 2)1975 ಅಕ್ಟೋಬರ್ 9 3)1975 ಅಕ್ಟೋಬರ್ 5
~~~~~~~~~~~~~~~~~~~~~~~~~~
1)★ಉತ್ತರಗಳು:-
1)ಮುಳಬಾಗಿಲು
2) 17 ಮಾರ್ಚ್ 1887
3)ಭಾಗೀರಥಮ್ಮ
4)ಮಂಕುತಿಮ್ಮನ ಕಗ್ಗ
5)ವಿದ್ಯಾರಣ್ಯ ವಿಜಯ
6)ಶ್ರೀಮದ್ಭಗವದ್ಗೀತಾ ತಾತ್ಪರ್ಯ
7)ಜಟಕಾ ಬಂಡಿ
8)ಮಡಿಕೇರಿ
9)ಪದ್ಮಭೂಷಣ
10) 1988
11)ಬಿ.ಜಿ.ಎಲ್. ಸ್ವಾಮಿ
12)ವೆಂಕಟರಮಣಯ್ಯ
13)ಅಲಮೇಲಮ್ಮ
14) ನೀಲತ್ತಹಳ್ಳಿ ಕಸ್ತೂರಿ
15)07 ಅಕ್ಟೋಬರ್ 1975

[…] ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ […]