ಕೆ.ಆರ್.ಪೇಟೆ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕಾಲ್ತುಣಿತ ಪ್ರಕರಣದಲ್ಲಿ ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ರಾಯಸಮುದ್ರ ಗ್ರಾಮದ ನಿವಾಸಿ ಹಾಗೂ ಶಿಕ್ಷಕರಾದ ಚಂದ್ರು ಕಾಂತಮಣಿ ದಂಪತಿಗಳ ಪುತ್ರ ಪೂರ್ಣಚಂದ್ರ ಸಾವಿಗೀಡಾಗಿದ್ದು ಮೃತರ ಅಂತ್ಯ ಸಂಸ್ಕಾರವು ಸ್ವಗ್ರಾಮದಲ್ಲಿರುವ ತಮ್ಮ ತೋಟದ ಜಮೀನಿನಲ್ಲಿ ವೀರಶೈವ ಸಮಾಜದ ಸಾಂಪ್ರದಾಯವಾಗಿ ಅಂತಿಮ ವಿಧಿ ವಿಧಾನ ನೆರವೇರಿತು.
ಬೆಂಗಳೂರಿನ ಆಸ್ಪತ್ರೆಯಿಂದ ಮುಂಜಾನೆ ನಾಲ್ಕು ಗಂಟೆಗೆ ಸ್ವಗ್ರಾಮಕ್ಕಾಗಮಿಸಿದ ಮೃತದೇಹ ಮುಂದೆ ಕುಟುಂಬಸ್ಥರ ಆಕ್ರಂದನ ಮಾತ್ರ ಮುಗಿಲು ಮುಟ್ಟಿತು. ಅಂತ್ಯ ಸಂಸ್ಕಾರದ ಸ್ಥಳಕ್ಕೆ ತೆರೆದ ವಾಹನದ ಮೂಲಕ ಕರೆತರಲಾಯಿತು.
ಶಾಸಕ ಹೆಚ್.ಟಿ ಮಂಜು,ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್, ಮನ್ಮುಲ್ ನಿರ್ದೇಶಕ ಡಾಲು ರವಿ, ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮೇಗೌಡ,ಸೇರಿದಂತೆ ಗಣ್ಯರು ಅಂತಿಮ ದರ್ಶನ ಪಡೆದು ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸಿದರು.

ಮೃತ ಪೂರ್ಣಚಂದ್ರ ತಂದೆ ಶಿಕ್ಷಕ ಚಂದ್ರು ಮಾತನಾಡಿ ನನ್ನ ಮಗ ಪೂರ್ಣಚಂದ್ರ ಬಾಲ್ಯದಿಂದಲೂ ಕ್ರಿಕೆಟ್ ಕ್ರೀಡೆಯ ಹುಚ್ಚು ಅಭಿಮಾನಿ ಆದರೂ ಕಳೆದು ಒಂದು ವರ್ಷ ಹಿಂದೆ ಅಷ್ಟೇ ಸಿವಿಲ್ ಇಂಜಿನಿಯರ್ ವ್ಯಾಸಂಗ ಮುಗಿಸಿ ಆರು ತಿಂಗಳಿಂದ ಮೈಸೂರಿನ ಖಾಸಗಿ ಕಂಪನಿ ಒಂದರಲ್ಲಿ ಕೆಲಸ ನಿರ್ವಹಿಸುತ್ತಾ ಬದುಕು ಕಟ್ಟುಕೊಳ್ಳಲು ನೂರಾರು ಆಶೋತ್ತರಗಳನ್ನ ಕನಸು ಕಾಣುತ್ತಾ ಕೆಲಸ ಮಾಡುತ್ತಿದ್ದ ಮದುವೆ ನಿಶ್ಚಯಿಸಲು ನಾನೆ ಮಂಗಳವಾರ ಊರಿಗೆ ಕರೆಸಿದೆ ಮೊದಲೇ ಪೂರ್ಣ ಚಂದ್ರ ಕ್ರಿಕೆಟ್ ಕ್ರೀಡಾ ಪ್ರೇಮಿ ಆದ್ದರಿಂದ ಮಂಗಳವಾರ ಸಂಜೆ ಆರ್ಸಿಬಿ ಮೊದಲ ಬಾರಿಗೆ ಕಪ್ ಗೆದ್ದ ಹಿನ್ನೆಲೆ ಗ್ರಾಮದ ಯುವಕರ ಜೊತೆಗೂಡಿ ಸಂಭ್ರಮಾಚರಣೆಸಿದ ಪೂರ್ಣಚಂದ್ರ ಬುಧವಾರ ಬೆಳಿಗ್ಗೆ ನಮ್ಮ ಕುಟುಂಬಸ್ಥರೊಡನೆ ಪಾಂಡುಪುರ ತಾಲೂಕಿನ ಒಂದು ಗ್ರಾಮಕ್ಕೆ ತೆರಳಿ ಯುವತಿ ನೋಡಿ ಬಂದ ನಂತರ ನಮಗೆ ಮೈಸೂರಿಗೆ ಕೆಲಸಕ್ಕೆ ತೆರಳುತ್ತೇನೆ ಎಂದು ಹೊರಟಿದ ಆದರೆ ಸ್ನೇಹಿತರೊಡನೆ ಬೆಂಗಳೂರಿಗೆ ಹೋಗಿದ್ದಾನೆ ಎಂದು ತಿಳಿದಿದ್ದು ಅವನ ಸಾವಿನ ಸುದ್ದಿ ನಂತರ ಇದು ಯಾವ ತಂದೆಗೂ ನೋವು ಬೇಡ. ಅವನೇ ನಮಗೆ ಆಧಾರವಾಗಿದ್ದ ಅವನನ್ನು ಕಳೆದುಕೊಂಡು ನಮಗೆ ನಿಜಕ್ಕೂ ಬದುಕಲು ಸಾಧ್ಯವಾಗುವುದಿಲ್ಲ ಸರ್ಕಾರ ಪೂರ್ವ ತಯಾರಿಯಾಗಿ ಕಾರ್ಯಕ್ರಮ ಆಯೋಜಿಸಿದ್ದರೆ ನನ್ನ ಮಗ ಸೇರಿದಂತೆ ಹಲವು ಅಮಾಯಕ ಮಕ್ಕಳು ಬದುಕುಳಿಯುತ್ತಿದ್ದೋ ಆದರೆ ಸತ್ತವರು ಅಮಾಯಕ ಮಕ್ಕಳು ಹೊರತು ರಾಜಕಾರಣಿಗಳ ಮಕ್ಕಳಲ್ಲ ಎಂದು ಸರ್ಕಾರದ ವಿರುದ್ಧ ಬೇಸರ ಹೊರಹಾಕಿದರು.

ಅಂತಿಮ ವಿಧಿ ವಿಧಾನ ಅಂತ್ಯ ಸಂಸ್ಕಾರಕ್ಕೆ ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಸುಮಾರಾಣಿ ನೇತೃತ್ವದಲ್ಲಿ ಸೂಕ್ತ ಬಂಧುಬಸ್ತ್ ಏರ್ಪಡಿಸಲಾಗಿತ್ತು.
– ಸುದ್ದಿಯೊಂದಿಗೆ ಮನು ಕೆ.ಆರ್.ಪೇಟೆ
