ಬೆಂಗಳೂರು – ನಗರದ ಯಲಹಂಕದ ವಾಯುನೆಲೆಯಲ್ಲಿ ಏರೋ ಶೋ-2025 ಆರಂಭವಾಗಿದ್ದು, ಏರೋ ಶೋ ಭದ್ರತೆಗೆ ಸುಮಾರು 400ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಭ್ರದತಾ ಕಾರ್ಯದಲ್ಲಿ ತೊಡಗಿದ್ದಾರೆ.
ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಸರ್ಕಾರ ದಿನಕ್ಕೆ 200 ರೂ,ಯಂತೆ ಆಹಾರಕ್ಕಾಗಿ ವ್ಯಯಿಸುತ್ತಿದ್ದರೂ, ಪೊಲೀಸ್ ಅಧಿಕಾರಿ ವರ್ಗದ ನಿರ್ಲಕ್ಷದಿಂದ ಸಿಬ್ಬಂದಿ ವರ್ಗದವರಿಗೆ ಕಳಪೆ ಗುಣಮಟ್ಟದ ಆಹಾರ ವಿತರಿಸುತ್ತಿರುವುದು ನಿಜಕ್ಕೂ ನಾಚೀಕೆಯ ಸಂಗತಿಯಾಗಿದೆ.
ನೆನ್ನೆಯಷ್ಟೇ ಕಾರ್ಯನಿರತ ಪೊಲೀಸ್ ಸಿಬ್ಬಂದಿಗೆ ನೀಡಿದ್ದ ಪಲಾವ್ ನಲ್ಲಿ ಜಿರಲೆ ಪತ್ತೆಯಾಗಿತ್ತು. ಈ ಸಂಬಂಧ ಮೇಲಾಧಿಕಾರಿಯವರಗೂ ತಲುಪಿದ್ದರೂ ಕ್ರಮವಹಿಸದೇ ಜಾಣಕುರುಡು ಪ್ರದರ್ಶಿಸಿದ್ದಾರೆ.

ಹೌದು … ನಿನ್ನೆಯಷ್ಟೇ ಗುಣಮಟ್ಟದ ಆಹಾರ ನೀಡಲು ಕಮಿಷನರ್ ಸೂಚಿಸಿದ್ದರು. ಇಂದು ಸಹ ಏರೋ ಶೋ ಭದ್ರತೆಗೆ ನಿಯೋಜಿಸಿದ್ದ ಪೊಲೀಸ್ ಸಿಬ್ಬಂದಿಗೆ ನೀಡಿದ್ದ ಸಿಹಿ ತಿನಿಸಿನಲ್ಲಿ, ಹುಳುಗಳು ಪತ್ತೆಯಾಗಿದೆ. ಹುಳ, ಜಿರಳೆ ಪತ್ತೆ ಹಿನ್ನೆಲೆ, ಗುಣಮಟ್ಟವಿಲ್ಲದ ಊಟದಿಂದಾಗಿ ಪೊಲೀಸ್ ಸಿಬ್ಬಂದಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಕಾನೂನು ಪಾಲನೆ ಮಾಡಿ ಭದ್ರತೆ ನೀಡುವ ಪೊಲೀಸ್ ರಿಗೆ ಸರಿಯಾದ ಊಟದ ವ್ಯವಸ್ಥೆ ಮಾಡದೇ ನ್ಯಾಯ ನೀಡದ ಪೊಲೀಸ್ ಇಲಾಖೆ, ಇನ್ನೂ ಸಾರ್ವಜನಿಕರಿಗೆ ಏನು ನ್ಯಾಯ ದೊರಕಿಸಿಕೊಡುತ್ತದೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಕಾಪಾಡುವ ದೇವರೇ ಕಣ್ಣು ಮುಚ್ಚಿ ಕುಳಿತಂತಿದೆ ಪೊಲೀಸ್ ಇಲಾಖೆಯ ಈ ವ್ಯವಸ್ಥೆ ಎಂದರೆ ತಪ್ಪಾಗಲಾರದು.
.
