ಹಾಸನ: ಹೊಸತನವನ್ನು ಹುಡುಕಿ ಸಾಧನೆಗೆ ಪೂರಕವಾದ ವಾತವರಣ ನಿರ್ಮಿಸುವ ನಿಟ್ಟಿನಲ್ಲಿ ೫ ರಿಂದ ೧೨ನೇ ತರಗತಿಯ ವಿದ್ಯಾರ್ಥಿಗಳಿಗೆ ಐಎಎಸ್ ಮತ್ತು ಐಪಿಎಸ್ ಫೌಂಡೇಶನ್ ಕೋರ್ಸ್ ಅನ್ನು ಪ್ರಾರಂಭಿಸಲಾಗಿದ್ದು, ಜೂನ್ ೧೫ರ ಭಾನುವಾರದಂದು ಉಚಿತ ಓರಿಯೇಂಟೇಶನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳ ಜೊತೆ ಪೋಷಕರು ಭಾಗವಹಿಸಬಹುದು ಎಂದು ಅಕ್ಷರ ಬುಕ್ ಹೌಸ್ ಮತ್ತು ಟೈಮ್ಸ್ ಸಮೂಹ ಸಂಸ್ಥೆಗಳ ಸ್ಥಾಪಕ ಬಿ.ಕೆ. ಗಂಗಾಧರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಕಳೆದ ೪ ವರ್ಷಗಳ ಹಿಂದೆ ಟೈಮ್ಸ್ ಗಂಗಾಧರ್ ಹಾಗೂ ಅಕ್ಷರ ಬಳಗದ ನೆರವಿನಿಂದ ಸ್ಥಾಪನೆಯಾದ ಅಕ್ಷರ ಅಕಾಡೆಮಿಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ಹುದ್ದೆಗಳಿಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಯನ್ನು ನೀಡುತ್ತಾ ಬರುತ್ತಿದೆ. ಅಕ್ಷರ ಅಕಾಡೆಮಿಯ ಸ್ಪರ್ಧಾರ್ಥಿಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಾನಾ ಹುದ್ದೆಗಳಿಗೆಆಯ್ಕೆಯಾಗಿರುವುದು ಸಂತಸದ ವಿಚಾರವಾಗಿದೆ ಅಕ್ಷರ ಬಳಗವು ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ಹೆಜ್ಜೆಯನ್ನು ಇಡಲು ಮುಂದಾಗಿದೆ ಎಂದರು.
ಅದೇನೆಂದರೆ 5 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಐಎಎಸ್ ಮತ್ತು ಐಪಿಎಸ್ ಫೌಂಡೇಶನ್ ಕೋರ್ಸ್ ಅನ್ನು ಆರಂಭಿಸಿದೆ. ಈ ಕೋರ್ಸ್ ಪ್ರತಿ ಭಾನುವಾರ ಬೆಳಿಗ್ಗೆ 8.30 ರಿಂದ 1೦:30 ಗಂಟೆಯವರೆಗೆ ನಡೆಯಲಿದೆ. ರಾಜ್ಯದ ನುರಿತ ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ಬೋಧನೆ ಕೊಡಿಸಲಾಗುತ್ತದೆ. ಕೋರ್ಸ್ ಅವಧಿ 6 ತಿಂಗಳು ಆಗಿರುತ್ತದೆ. ಇದೇ ಭಾನುವಾರ 2025 ಜೂನ್ 15 ರಂದು ಬೆಳಿಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ಹಾಸನ ಜಿಲ್ಲೆಯ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಐಎಎಸ್ ಮತ್ತು ಐಪಿಎಸ್ ಓರಿಯೆಂಟೇಶನ್ ಪ್ರೋಗ್ರಾಮ್ ಅನ್ನು ಅಕ್ಷರ ಬಳಗ ಆಯೋಜಿಸಿದ್ದು, ಪೋಷಕರು ತಮ್ಮ ಮಕ್ಕಳೊಂದಿಗೆ ಅಕ್ಷರ ಅಕಾಡೆಮಿಗೆ ಭೇಟಿ ನೀಡಬಹುದು ಎಂದು ಮಾಹಿತಿ ನೀಡಿದರು.
ಇನ್ನು ಪ್ರಾರಂಭದಲ್ಲಿ ನಮ್ಮ ಸಂಸ್ಥೆ ಅನೇಕ ವರ್ಷಗಳ ಕಾಲ ನಷ್ಟದಲ್ಲಿ ಇತ್ತು. ಈಗ ಚೇತರಿಕೆ ಕಂಡು ಸಲ್ಪವಾದರೂ ಸುಧಾರಿಸಿದೆ. ಮಕ್ಕಳಿಂದಲೇ ಜ್ಞಾನರ್ಜನೆ ನೀಡಿದರೇ ಮುಂದೆ ಬರುವ ಸ್ಪರ್ದಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅನುಕೂಲವಾಗಲಿ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಐಎಎಸ್ ಮತ್ತು ಐಪಿಎಸ್ ಫೌಂಡೇಶನ್ ಕೋರ್ಸ್ ಅನ್ನು ಪ್ರಾರಂಭಿಸಲಾಗಿದೆ. ಇನ್ನು ಈ ಕೋರ್ಸ್ನ ಪ್ರಮುಖ ಉದ್ದೇಶಗಳೆಂದರೇ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಏನಾದರೂ ಸಾಧನೆ ಮಾಡಿ ಜಿಲ್ಲೆಗೆ ಹೆಸರು ತರಬೇಕು ಎಂಬುದು ನಮ್ಮ ಗುರಿಯಾಗಿದೆ ಎಂದು ಹೇಳಿದರು. ಸ್ಥಳ ಅಕ್ಷರ ಅಕಾಡೆಮಿ ರಿಂಗ್ ರಸ್ತೆ, ಕರ್ನಾಟಕ ಬ್ಯಾಂಕ್ ಕಟ್ಟಡ ವಿದ್ಯಾ ನಗರ. ಮೊಬೈಲ್ ಸಂಖ್ಯೆ- 7019055269 ಹಾಗೂ 8073912370 ಕ್ಕೆ ಸಂಪರ್ಕಿಸಬಹುದಾಗಿದೆ
ಪತ್ರಿಕಾಗೋಷ್ಠಿಯಲ್ಲಿ ಅಕ್ಷರ ಅಕಾಡೆಮಿಯ ವ್ಯವಸ್ಥಾಪಕರು ಹಾಗೂ ಉಪನ್ಯಾಸಕ ಡಿ.ಪಿ. ಕಾರ್ತಿಕ್, ಅಕ್ಷರ ಬುಕ್ ಹೌಸ್ ವ್ಯವಸ್ಥಾಪಕ ಮಂಜು, ಅಕ್ಷರ ಅಕಾಡೆಮಿ ಉಪನ್ಯಾಸಕ ಸುಹಾಸ್, ಅಕ್ಷರ ಟ್ಯೂಷನ್ ಮೇಲ್ವಿಚಾರಕರಾದ ಸೌದರ್ಯ ಇತರರು ಉಪಸ್ಥಿತರಿದ್ದರು.
