ಬೆಂಗಳೂರು, ಜೂನ್ 12: ರಾಜ್ಯ ಸರ್ಕಾರ ಪೋಲಿಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದ್ದು, ಅನೇಕ ಉಪನಿರೀಕ್ಷಕರಿಗೆ (ಪಿಎಸ್ಐ) ಇನ್ಸ್ಪೆಕ್ಟರ್ ಹುದ್ದೆಗೆ ಪದೋನ್ನತಿ ನೀಡಲಾಗಿದೆ. ಜೊತೆಗೆ ಹಲವಾರು ಡಿವೈಎಸ್ಪಿ (ಸಿವಿಲ್) ಮತ್ತು ಇನ್ಸ್ಪೆಕ್ಟರ್ (ಸಿವಿಲ್) ಗಳ ವರ್ಗಾವಣೆ ಮಾಡಲಾಗಿದೆ.
ಸರ್ಕಾರದಿಂದ ಜಾರಿಯಾದ ಆದೇಶದಲ್ಲಿ ಅಧಿಕಾರಿಗಳ ಭದ್ರತಾ ಸೇವಾ ಚಟುವಟಿಕೆಗಳು, ಕಾರ್ಯಕ್ಷಮತೆ ಹಾಗೂ ಇಲಾಖೆಯ ಅಗತ್ಯಗಳನ್ನು ಆಧರಿಸಿ ಈ ಬದಲಾವಣೆಗಳು ಜಾರಿಗೆ ತರಲಾಗಿವೆ. ಹೊಸ ಹುದ್ದೆಗೆ ನಿಯೋಜಿತ ಅಧಿಕಾರಿಗಳು ತಕ್ಷಣಕ್ಕೆ ಕಾರ್ಯಭಾರ ವಹಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ.
ಈ ಬದಲಾವಣೆಗಳಿಂದ ಇಲಾಖೆಯ ಕಾರ್ಯನಿರ್ವಹಣೆ ಇನ್ನಷ್ಟು ಪರಿಣಾಮಕಾರಿ ಆಗಲಿದೆ ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಪರಿಗಣನೆಗೆ ಒಳಪಟ್ಟ ಅಧಿಕಾರಿಗಳ ಪಟ್ಟಿ ಪೊಲೀಸ್ ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
PI (Civil) Transfer – 11.06.2025
PSI to PI Civil Promotion Order – 11.06.2025
DySP (Civil) Transfer Order- 11.06.2025
