ಹಾಸನ- ಕಳೆದ 11 ವರ್ಷಗಳಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ಹತ್ತು ಹಲವು ಜನಪರ ಯೋಜನೆ, ದಿಟ್ಟ ನಿರ್ಧಾರಗಳ ಮೂಲಕ ವಿಕಸಿತ ಭಾರತಕ್ಕೆ ಭದ್ರ ಬುನಾದಿ ಹಾಕಿದ್ದು, 2014 ರಿಂದ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮೂಲಮಂತ್ರದಡಿ, ಎಲ್ಲರನ್ನೂ ಒಳಗೊಳ್ಳುವ ವಿಶಿಷ್ಟ ಅಭಿವೃದ್ಧಿ ಮಾದರಿ ಪರಿಚಯಿಸಿ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಮುಖ್ಯ ವಕ್ತಾರ ಅಶ್ವಥ್ ನಾರಾಯಣ್ ತಿಳಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರಿಕನನ್ನೂ ಸಮಾನವಾಗಿ ಕಂಡು, ಘನತೆಯ ಜೀವನ ಖಾತರಿಪಡಿಸುತ್ತದೆ. ಆದರೂ, ಸ್ವಾತಂತ್ರ್ಯ ನಂತರವೂ ಮೂಲಭೂತ ಸೌಲಭ್ಯಗಳಿಲ್ಲದೆ ತೀವ್ರ ಬಡತನದಲ್ಲಿ ಬದುಕುತ್ತಿದ್ದರು. ಆದರೆ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ, ಪ್ರತಿಯೊಂದು ಹೆಜ್ಜೆಯೂ ಭಾರತ ಮೊದಲು ಎಂಬ ಬದ್ಧತೆಯೊಂದಿಗೆ ಮುನ್ನಡೆಯುತ್ತಿರುವ ನಿರ್ಣಾಯಕ ನಾಯಕತ್ವವನ್ನು ಜಗತ್ತಿಗೆ ಸಾರಿ ಹೇಳಿದೆ ಎಂದರು.
ಕಳೆದ 11 ವರ್ಷಗಳಲ್ಲಿ ಜಡತ್ವ ಮುರಿದು, ದಿಟ್ಟ ನಿರ್ಧಾರಗಳ ಮೂಲಕ ವಿಕಸಿತ ಭಾರತಕ್ಕೆ ಭದ್ರ 3 ಬುನಾದಿ ಹಾಕಿದೆ.
ಆರಂಭದಲ್ಲಿ ಹೇಳಿದಂತೆ ಈವರೆಗೂ ನುಡಿದಂತೆ ಮೋದಿ ನಡೆದಿದ್ದಾರೆ. ಪಕ್ಷದ ಕಾರ್ಯಕರ್ತರಿಗೆ ಮುಜುಗರ ಆಗೋ ರೀತಿ ನಡೆದುಕೊಂಡಿಲ್ಲ. 11 ವರ್ಷಗಳ ಸಾಧನೆ ಜಗತ್ತು ಮೆಚ್ಚುವ ರೀತಿ ಇದೆ ಎಂದರು.
ಸಮಾಜದ ಕಟ್ಟ ಕಡೆಯ ಮನುಷ್ಯನಿಗೆ ತಲುಪಿವೆ. ಪ್ರತಿ ಹಂತದಲ್ಲೂ ಸವಲತ್ತು ಸಮಾಜಕ್ಕೆ ಸಿಕ್ಕಿ ಭಾರತ ವಿಕಸಿತ ಆಗಬೇಕು ಎಂಬುದು ಕೇಂದ್ರದ ಸಂಕಲ್ಪ ಆಗಿದೆ. ನೋಟು ಅಮಾನೀಕರಣವನ್ನು ಕಾಂಗ್ರೆಸ್ ಟೀಕೆ ಮಾಡಿದ್ದರು. ಆದರೀಗ ಕಪ್ಪು ಹಣದ ವಹಿವಾಟು ಕಡಿಮೆ ಆಗಿದೆ, ಆರ್ಥಿಕ ಅಭಿವೃದ್ಧಿಗೆ ಪೂರಕ ಆಗಿದೆ. ಜಿಎಸ್ಟಿ ಬಂದ ನಂತರ ಆರ್ಥಿಕ ಸಮತೋಲನ ಸಾಧಿಸಿದ್ದಾರೆ. ಆರ್ಟಿಕಲ್ 370 ರದ್ದು ಮಹತ್ತರ ಬೆಳವಣಿಗೆ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಅಭಿವೃದ್ಧಿ ಮಾಡಿದ್ದಾರೆ ಎಂದರು.

53 ಕೋಟಿಗಿಂತಲೂ ಹೆಚ್ಚು ಜನಧನ್ ಖಾತೆಗಳನ್ನು ತೆರೆಯಲಾಗಿದ್ದು ನಾಲ್ಕು ಕೋಟಿ ಮನೆಗಳನ್ನು ನಿರ್ಮಿಸಿ 12 ಕೋಟಿ ಶೌಚಾಲಯಗಳನ್ನು ಕಟ್ಟಲಾಗಿದೆ 10 ಕೋಟಿ ಕುಟುಂಬಗಳು ಸೌದೆ ಒಲೆಯ ಬದಲು ಎಲ್ಪಿಜಿಯನ್ನು ಬಳಸುತ್ತಿದ್ದೆ 11 ಕೋಟಿ ರೈತರಿಗೆ ಪಿಎಂ ಕಿಸಾನ್ ಮೂಲಕ ಸಹಾಯವನ್ನು ಒದಗಿಸಲಾಗುತ್ತಿದೆ ಎಂದರು.
ಬಲಿಷ್ಠ ಭಾರತ ನಿರ್ಮಾಣಕ್ಕೆ ರಸ್ತೆ, ರೈಲ್ವೆ, ನಗರ ಅಭಿವೃದ್ಧಿ ಮತ್ತು ಇಂಧನ ಕ್ಷೇತ್ರಗಳಲ್ಲಿ 5 ಲಕ್ಷ ಕೋಟಿ ಹೆಚ್ಚು ಹೂಡಿಕೆ ಮಾಡಲಾಗಿದೆ. ಕರ್ನಾಟಕದಲ್ಲಿ 1,860 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗಿದ್ದು, ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ಗೆ 8,408 ಕೋಟಿ, ಬೆಂಗಳೂರಿನ ಸ್ಯಾಟಲೈಟ್ ಟೌನ್ ರಿಂಗ್ರಸ್ತೆಗೆ 27 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದ್ದು, 56 ರೈಲು ನಿಲ್ದಾಣಗಳನ್ನು ಅಮೃತ ಭಾರತ್ ಯೋಜನೆ ಅಡಿ ಆಧುನಿಕರಣ ಮಾಡಲಾಗಿದ್ದು, 10 ಒಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ಕರ್ನಾಟಕ ರಾಜ್ಯಕ್ಕೆ ರೈಲ್ವೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನಿರಂತರವಾಗಿ ಆದ್ಯತೆ ನೀಡುತ್ತಿದ್ದು 2024-25ನೇ ಆರ್ಥಿಕ ವರ್ಷದಲ್ಲಿ ರೂ.7559 ಕೋಟಿ ರೂಗಳನ್ನು ಬಿಡುಗಡೆ ಮಾಡಿದೆ 2025-26 ಸಾಲಿಗೆ 7564 ಕೋಟಿಗೆ ಹೆಚ್ಚಿಸಲಾಗಿದೆ .
ಉಡಾನ್ ಯೋಜನೆ ಅಡಿ ಆರು ಹೊಸ ವಿಮಾನ ನಿಲ್ದಾಣಗಳನ್ನು ರಾಜ್ಯಕ್ಕೆ ನೀಡಲಾಗಿದೆ. 5000 ಕೋಟಿ ವೆಚ್ಚದಲ್ಲಿ ಎರಡು ಟರ್ಮಿನಲ್ ಆರಂಭಿಸಲಾಗಿದ್ದು ಆಪ್ಟಿಕಲ್ ಫೈಬರ್ ಮೂಲಕ 5807 ಗ್ರಾಮ ಪಂಚಾಯಿತಿಗಳಿಗೆ ಹೈ ಸ್ಪೀಡ್ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸೌಲಭ್ಯವನ್ನು ಒದಗಿಸಲಾಗಿದೆ .
ಅಭಿವೃದ್ಧಿ ಜೊತೆಗೆ ಸಾಫ್ಟ್ವೇರ್, ಸೆಮಿಕಂಡಕ್ಟರ್, ತಂತ್ರಜ್ಞಾನ, ಐಫೋನ್ ತಯಾರಿಕೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ, ವಿದೇಶಿ ಕಂಪನಿಗಳು ನೇರ ಬಂಡವಾಳ ಹೂಡಿಕೆ ಮಾಡುತ್ತಿವೆ .
ಆಪರೇಷನ್ ಸಿಂಧೂರ ಒಂದು ಮೈಲುಗಲ್ಲು, ಹಿಂದಿಗಿಂತ ಇಂದು ರಕ್ಷಣಾ ಇಲಾಖೆಗೆ ಐದಾರು ಪಟ್ಟು ಅನುದಾನ ಹೆಚ್ಚಳ ಮಾಡಲಾಗಿದೆ. ನಮ್ಮ ಯುದ್ಧಸಾಮಾಗ್ರಿಗೆ ವಿದೇಶಗಳಿಂದಲೂ ಬೇಡಿಕೆ ಬಂದಿದೆ ಎಂದರು.
ಆಲೂರು-ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ಬೇಲೂರು ಶಾಸಕ ಹೆಚ್.ಕೆ.ಸುರೇಶ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಅಮಿತ್ ಶೆಟ್ಟಿ, ಗಿರೀಶ್, ವಿಕಸಿತ ಭಾರತ ಜಿಲ್ಲಾ ಸಂಚಾಲಕ ಡಿ.ರಾಜ್ಕುಮಾರ್, ಸಹ ಸಂಚಾಲಕ ಗುರುಪ್ರಸಾದ್, ಮುಖಂಡ ಶೋಭನ್ ಬಾಬು ಮೊದಲಾದವರಿದ್ದರು.
