ಕೆ.ಆರ್.ಪೇಟೆ: ನಮ್ಮ ದೇಶದ ನೆಲ ಸಂಸ್ಕೃತಿ ಜೀವಂತ ಚಲನಚಿತ್ರ ಹಳ್ಳಿಗಳ ಸಂಸ್ಕೃತಿ, ಕೃಷಿಯಲ್ಲೂ, ಸಂಗೀತದಲ್ಲೂ, ದೇವರ ಭಕ್ತಿಯಲ್ಲೂ ಉಸಿರಾಡುತ್ತಿದೆ ಈ ಪರಂಪರೆ ಉಳಿವಿಗೆ ಪ್ರತಿಯೊಬ್ಬರ ಸಹಕಾರ ಅವಶ್ಯಕ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ತಾಲ್ಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಕೊರಟಿಕೆರೆ ಗ್ರಾಮದ ಶ್ರೀ ರಾಮಲಿಂಗಶ್ವರ ಹಾಗೂ ಚೌಡೇಶ್ವರಿ ಅಮ್ಮನವರ ದೊಡ್ಡ ಹಬ್ಬ ಹಾಗೂ ದೇವರುಗಳ ಜಾತ್ರಾ ಮಹೋತ್ಸವಕ್ಕೆ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮುಖಾಂತರ ಉದ್ಘಾಟಿಸಿ ಮಾತನಾಡಿದರು.ಸಂಸಾರದ ಸಾಮರಸ್ಯ ಹಾಗೂ ಹೊಂದಾಣಿಕೆ ನಮ್ಮ ಜೀವನದ ಒಂದು ಅತ್ಯಗತ್ಯ ಅಂಶವಾಗಿದೆ.ಮಾನವ ಸಂಬಂಧಗಳು,ಕುಟುಂಬ, ಸ್ನೇಹಿತರು ಮತ್ತು ಸಮಾಜದೊಂದಿಗೆ ಹೊಂದಾಣಿಕೆ ಸಾಧಿಸಲು ನಾವು ಪರಸ್ಪರಗೌರವ,ಸಹಾನುಭೂತಿ, ಹಾಗೂ ತಾಳ್ಮೆ ಬೆಳೆಸಬೇಕು. ಸ್ಪಷ್ಟ, ವಿನಯಪೂರ್ಣ ಮತ್ತು ಸೌಹಾರ್ದಯುಕ್ತ ಸಂವಹನ ಉತ್ತಮ ಹೊಂದಾಣಿಕೆಗೆ ಸಹಾಯ ಮಾಡುತ್ತದೆ ಅದು ನಮ್ಮ ದೇಶದಲ್ಲಿ ಹೆಚ್ಚಾಗಿರುವುದರಿಂದ ಮಹಾಮಾರಿ ಕೊರೊನಾ ಸಮಯದಲ್ಲಿ ಬೇರೆ ಬೇರೆ ದೇಶದಲ್ಲಿ ಮೃತರ ಶವವನ್ನು ಮುಟ್ಟದೆ ಸಂಸ್ಕಾರ ಮಾಡುತ್ತಿದ್ದು ನಮ್ಮ ದೇಶದಲ್ಲಿ ಶವಕ್ಕೆ ಗೌರವ ನೀಡಿ ಸವಸಂಸ್ಕಾರ ಮಾಡುತ್ತಿದ್ದೆವು ಇದಕ್ಕೆ ಪ್ರಮುಖ ಕಾರಣವೇ ನಮ್ಮ ದೇಶದ ದೈವಬಲ ಸಂಸ್ಕೃತಿ ಸಂಸ್ಕಾರಕ್ಕೆ ಸಾಕ್ಷಿಯಾಗಿದೆ ಊರಿನ ಹಬ್ಬ ಹರಿದಿನಕ್ಕೆ ನಾವೆಲ್ಲರೂ ಒಗ್ಗಟ್ಟಿನಿಂದ ಊರಿನ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ.

ನಾವು ಆಹಾರ ಧಾನ್ಯಗಳನ್ನು ಬೆಳೆದು ನಮಗೆ ಸಾಕಷ್ಟು ಇಟ್ಟುಕೊಂಡು ಹೊರದೇಶಕ್ಕೂ ಸಹ ರಪ್ತುಮಾಡುತ್ತಿದ್ದೇವೆ. ಮಳೆ ಯುಗಾದಿ ನಂತರ ಬರುತ್ತಿತ್ತು ಈಗ ಉತ್ತಮ ಮಳೆಯಾಗುತ್ತಿದೆ ಮಳೆಗಾಲ-ಚಳಿಗಾಲ ಎಲ್ಲಾ ಒಂದೇ ಆಗಿವೆ ಮುಂದೆ ಎಲ್ಲಾ ಮಳೆಗಳು ಬಿದ್ದು ಆಹಾರ ಉತ್ಪಾದನೆ ಹೆಚ್ಚಾಗಲಿದೆ. ನಮ್ಮ ದೇಶದ ಬಹುತೇಕ ಜನರು ಕೃಷಿ ಅವಲಂಬಿತರಾಗಿದ್ದು ದೇವರಲ್ಲಿ ಪ್ರಾರ್ಥನೆ ಮಾಡೋಣ ಉತ್ತಮ ಮಳೆ ಬೆಳೆಯಾಗಿ ಫಸಲು ಬಂದು ರಾಜ್ಯದ ರೈತಾಪಿ ವರ್ಗ ಸದೃಢವಾಗಲಿ ಎಂದು ಪ್ರಾರ್ಥಿಸೋಣ ಎಂದ ಅವರು. ರಾಜ್ಯದ ಜನ ನೆಮ್ಮದಿಯಿಂದ ಜೀವಿಸಿ ಅಭಿವೃದ್ಧಿಯಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರ ನೇತೃತ್ವದಲ್ಲಿ ರೂ.2000 ರೂ,10 ಕೆಜಿ ಅಕ್ಕಿ, ಉಚಿತ ಬಸ್ ಪ್ರಯಾಣ, ಉಚಿತ ವಿದ್ಯುತ್ ನೀಡಿ ಜನರು ನೆಮ್ಮದಿಯಿಂದ ಜೀವನ ನಡೆಸುವಂತೆ ಕಾಂಗ್ರೇಸ್ ಸರ್ಕಾರ ಮಾಡಿದೆ, ಜಿಲ್ಲೆಯ ಜನರ ಸಹಕಾರದಿಂದ ನಮ್ಮ ಸರ್ಕಾರ ಕೃಷಿ ಸಚಿವರಾಗಿ ಒಂದೇ ಒಂದು ಜಿಲ್ಲೆಯಲ್ಲಿ ರೈತರಿಗೆ ಬಿತ್ತನೆ ಬೀಜ ರಸಗೊಬ್ಬರ ಸೇರದಂತೆ ಕೃಷಿ ಪರಿಕರಗಳು ಕೊರತೆಯಾಗದಂತೆ ಸಕಾಲಕ್ಕೆ ನಿಭಾಯಿಸುತ್ತಿದ್ದೇನೆ ಎಂದರು.
ಬೆಡದಹಳ್ಳಿಯ ಶ್ರೀ ಪಂಚಭೂತೇಶ್ವರ ಸುಕ್ಷೇತ್ರದ ಶ್ರೀ.ರುದ್ರಮುನಿ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್,ಬಿ ಪ್ರಕಾಶ್,ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಿ.ಎಲ್ ದೇವರಾಜು,ಕೆ ಪಿ ಸಿ ಸದಸ್ಯ ಕಿಕ್ಕೇರಿ ಸುರೇಶ, ತಹಸಿಲ್ದಾರ್ ಡಾ ಎಸ್. ಯು ಅಶೋಕ್, ಈ.ಓ ಶುಷ್ಮಾ,ಮನ್ಮುಲ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಎಂ.ಬಿ ಹರೀಶ್,ಪ್ರಥಮ ದರ್ಜೆ ಗುತ್ತಿಗೆದಾರರಾದ ರಾಜೇಶ್, ಉದ್ಯಮಿ ರಾಜಶೇಖರ್, ಗ್ಯಾರಂಟಿ ಯೋಜನಾ ಸಮಿತಿ ತಾಲೂಕು ಅಧ್ಯಕ್ಷ ಎ.ಬಿ ಕುಮಾರ್,ಭಾರತೀಪುರ ಕ್ರಾಸ್ ಗ್ರಾಮ ಪಂಚಾಯತಿ ಅಧ್ಯಕ್ಷ ಕುಮಾರ್, ತಾಲೂಕು ಬಿಜೆಪಿ ಹಿರಿಯ ಉಪಾಧ್ಯಕ್ಷ ಡಾ. ಪುಟ್ಟಣ್ಣ, ರವಿ, ಕೃಷ್ಣೆಗೌಡ, ಮುಕುಂದರಾಜು,ಮಂಜುನಾಥ್ ಸೇರಿದಂತೆ ಗಣ್ಯರು ಏಳೂರಿನ ಸಾವಿರಾರು ಜನರು ಊರಹಬ್ಬದಲ್ಲಿ ಭಾಗವಹಿಸಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
