ಹಾಸನ, ಜುಲೈ 2: ವೈದ್ಯರ ದಿನಾಚರಣೆಯ ಪ್ರಯುಕ್ತ ನಗರದ ಮಂಗಳಾ ಆಸ್ಪತ್ರೆಯ ಮುಖ್ಯಸ್ಥರಾದ ಡಾ|| ಅಶೋಕ್ ಗೌಡ ಹಾಗೂ ಜನಪ್ರಿಯ ವೈದ್ಯರಾಗಿರುವ ಡಾ|| ಅಬ್ದುಲ್ ಬಷೀರ್ ರವರಿಗೆ ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ವತಿಯಿಂದ ಗೌರವ ಸಲ್ಲಿಸಲಾಯಿತು.
ಈ ವಿಶೇಷ ಕಾರ್ಯಕ್ರಮದಲ್ಲಿ ರೋಟರಿ 3182 ವಲಯ 9 ರ ಸಹಾಯಕ ರಾಜ್ಯಪಾಲ ರೋ|| ಮಂಜುನಾಥ್ ಜೆ.ಎನ್ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಧ್ಯಕ್ಷರಾದ ಹೆಚ್.ಡಿ. ವಜ್ರಕುಮಾರ್ ರವರ ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ಕಾರ್ಯದರ್ಶಿ ಕೆ.ಎಸ್. ಯೋಗೇಶ್, ಖಜಾಂಚಿ ಗವಿಗೌಡ, ಹಿರಿಯ ಸದಸ್ಯರಾದ ರೋ|| ಎಂ.ಸಿ. ರಾಜಣ್ಣ, ರೋ|| ಅಮೃತ್ ಕುಮಾರ್ ಮತ್ತು ರೋ|| ಸಿದ್ದನಂಜಪ್ಪರವರು ಉಪಸ್ಥಿತರಿದ್ದರು.
ಅಭಿನಂದನೆ ಸ್ವೀಕರಿಸಿದ ಡಾ|| ಅಶೋಕ್ ಗೌಡ ಮತ್ತು ಡಾ|| ಅಬ್ದುಲ್ ಬಷೀರ್ ರವರು, ತಮ್ಮ ಅನುಭವ ಹಂಚಿಕೊಂಡು, ವೈದ್ಯ ವೃತ್ತಿಗೆ ದೊರಕುವ ಸನ್ಮಾನ ಮತ್ತು ಜನತೆ ನೀಡುವ ವಿಶ್ವಾಸವೇ ತಮ್ಮ ಸ್ಪೂರ್ತಿ ಶಕ್ತಿ ಎಂದು ಹೇಳಿದರು.
