ಅಕ್ರಾ (ಘಾನಾ) : ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಬುಧವಾರ ಘಾನಾ ದೇಶದ ರಾಷ್ಟ್ರೀಯ ಗೌರವವಾದ ‘ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ’ ಪದಕವನ್ನು ಪ್ರಧಾನ ಮಾಡಲಾಗಿದೆ. ಘಾನಾದ ಅಧ್ಯಕ್ಷ ಜಾನ್ ಡ್ರಾಮನಿ ಮಹಾಮಾ ಅವರಿಂದ ಈ ಪ್ರಶಸ್ತಿ ನೀಡಲಾಯಿತು.
ಈ ಪ್ರಶಸ್ತಿಯ ಮೂಲಕ ಮೋದಿ ಅವರ “ಪ್ರತಿಷ್ಠಿತ ರಾಜಕೀಯ ನಾಯಕತ್ವ ಮತ್ತು ಪ್ರಭಾವಶಾಲಿ ಜಾಗತಿಕ ಹಾದಿ”ಗೆ ಗೌರವ ಸಲ್ಲಿಸಲಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ.
“ಇದು ಗೌರವವಷ್ಟೆ ಅಲ್ಲ, ಹೊಣೆಗಾರಿಕೆಯೂ ಹೌದು”
ಈ ಸಾಧನೆ ಬಗ್ಗೆ ಮೋದಿ ಎಕ್ಸ್ನಲ್ಲಿ (ಹಳೆಯ ಟ್ವಿಟರ್) ಈ ವಿಷವಾಗಿ ಟ್ವಿಟ್ ಮಾಡಿದ್ದು, “ಈ ಗೌರವವು 140 ಕೋಟಿ ಭಾರತೀಯರ ಪರವಾಗಿ ಸ್ವೀಕರಿಸುತ್ತೇನೆ. ಇದು ನಮ್ಮ ಯುವಜನರ ಭವಿಷ್ಯ, ಸಂಸ್ಕೃತಿಯ ವೈವಿಧ್ಯತೆ ಮತ್ತು ಭಾರತ-ಘಾನಾ ನಡುವಿನ ಇತಿಹಾಸದ ಪ್ರತೀಕವಾಗಿದೆ” ಎಂದು ಹೇಳಿದರು.
“ಈ ಗೌರವವು ಭಾರತ ಮತ್ತು ಘಾನಾ ನಡುವಿನ ಸ್ನೇಹವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಭಾರತ ಸದಾ ಘಾನಾದ ಜನರೊಂದಿಗೆ ನಿಂತು, ವಿಶ್ವಾಸಾರ್ಹ ಅಭಿವೃದ್ಧಿ ಸಹಭಾಜಿಯಾಗಿ ಕೆಲಸ ಮಾಡುತ್ತದೆ” ಎಂದು ಮೋದಿ ಭರವಸೆ ನೀಡಿದ್ದಾರೆ.
ಇನ್ನಷ್ಟು ಓದಿ: ಕರ್ನಾಟಕ ಬ್ಯಾಂಕ್ ಸುರಕ್ಷಿತವಾಗಿದೆ; ಭಯ ಹುಟ್ಟಿಸುವ ಸುದ್ದಿ ಅಸತ್ಯ: ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿ.ಹೆಚ್. ವೆಂಕಟಚಲಂ ಸ್ಪಷ್ಟನೆ
ಮೂರು ದಶಕಗಳ ಬಳಿಕ ಪ್ರಧಾನಿ ಘಟಿಕೆಯಲ್ಲಿ ಘಾನಾ ಭೇಟಿ
ಈ ಭೇಟಿಯು ಭಾರತದಿಂದ ಮೂರು ದಶಕಗಳ ನಂತರದ ಪ್ರಧಾನಮಂತ್ರಿ ಮಟ್ಟದ ಪ್ರವಾಸವಾಗಿದ್ದು, ಮೋದಿ ಮತ್ತು ಮಹಾಮಾ ನಡುವೆ ನಡೆದ ಚರ್ಚೆಗಳ ನಂತರ ಭಾರತ-ಘಾನಾ ಸಂಬಂಧವನ್ನು “ಸಂಪೂರ್ಣ ಸಹಭಾಗಿತ್ವ”ದ ಮಟ್ಟಕ್ಕೆ ಏರಿಸಲಾಗಿದೆ.
ವಿದೇಶಾಂಗ ಸಚಿವಾಲಯದ ಪ್ರಕಾರ, “ಇದು ಭಾರತ-ಘಾನಾ ನಡುವಿನ ದೀರ್ಘಕಾಲೀನ ಸಂಬಂಧಕ್ಕೆ ಸಾಕ್ಷಿಯಾಗಿದೆ,” ಎಂದು ಎಮ್ಇಎ ಚೊಚ್ಚಲ ಪ್ರತಿಕ್ರಿಯೆ ನೀಡಿದೆ.

[…] ಇದನ್ನು ಓದಿ: ಘಾನಾದಿಂದ ಮೋದಿ ಅವರಿಗೆ ರಾಷ್ಟ್ರದ ಅತ್ಯುನ… […]