ಪೊಲೀಸರು ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ನೋಟಿಸ್ ನೀಡಬಾರದು: ಸುಪ್ರೀಂ ಕೋರ್ಟ್
ನವದೆಹಲಿ: ವೈಯಕ್ತಿಕ ನಿರ್ಲಕ್ಷ್ಯ ಹಾಗೂ ಅತಿವೇಗದ ವಾಹನ ಚಾಲನೆಯಿಂದ ಸಂಭವಿಸಿದ ಸಾವಿಗೆ ಸಂಬಂಧಿಸಿ ವಿಮಾ ಕಂಪನಿಯು ಪರಿಹಾರ ನೀಡಬೇಕಾಗಿಲ್ಲ ಎಂದು ಭಾರತದ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಆರ್. ಮಹಾದೇವನ್ ಅವರನ್ನೊಳಗೊಂಡ ಪೀಠವು, 2014ರಲ್ಲಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟ ಎಸ್. ರವೀಶ ಅವರ ಕುಟುಂಬದಿಂದ ಕೇಳಲಾದ ₹80 ಲಕ್ಷ ಪರಿಹಾರ ದಾವಿಯನ್ನು ತಿರಸ್ಕರಿಸಿದೆ.
ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಖಾತ್ರಿ:
2023 ನವೆಂಬರ್ 23ರಂದು ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪಿನಲ್ಲಿ, ಮೃತ ರವೀಶ ಅವರ ಹೆಂಡತಿ, ಮಗ ಹಾಗೂ ತಂದೆ-ತಾಯಂದಿರಿಂದ ಸಲ್ಲಿಸಲಾದ ವಿಮಾ ದಾವಿಯನ್ನು ಹೈಕೋರ್ಟ್ ತಳ್ಳಿ ಹಾಕಿತ್ತು. ಇದೀಗ ಸುಪ್ರೀಂ ಕೋರ್ಟ್ ಕೂಡ ಅದೇ ತೀರ್ಪನ್ನು ಮಾನ್ಯ ಮಾಡಿದೆ.
ಅಪಘಾತದ ಹಿನ್ನೆಲೆ:
2014 ಜೂನ್ 18ರಂದು, ಮಲ್ಲಸಂದ್ರದಿಂದ ಅರಸೀಕೆರೆಯ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದ ರವೀಶ, ವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿಸಿ ಅಪಘಾತಕ್ಕೊಳಗಾಗಿದ್ದರು. ಕಾರಿನಲ್ಲಿ ಅವರ ತಂದೆ, ತಂಗಿ ಹಾಗೂ ತಂಗಿಯ ಮಕ್ಕಳು ಕೂಡ ಪ್ರಯಾಣಿಸುತ್ತಿದ್ದರು.
ಪೊಲೀಸ್ ತನಿಖೆ ಹಾಗೂ ನ್ಯಾಯಾಲಯದ ತನಿಖೆಯಲ್ಲಿ, ರವೀಶ ಅವರು ಸ್ವತಃ ನಿರ್ಲಕ್ಷ್ಯದಿಂದ ಕಾರು ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ ಎಂಬುದು ದೃಢಪಟ್ಟಿತ್ತು.
ಮೃತನ ತಪ್ಪಿಗೆ ಪರಿಹಾರವಿಲ್ಲ: ಸುಪ್ರೀಂ ಸ್ಪಷ್ಟನೆ
“ಮೃತ ವ್ಯಕ್ತಿಯೇ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತ ಸಂಭವಿಸಿರುವುದರಿಂದ ಮತ್ತು ಅವರು ಸ್ವಯಂ ದೌರ್ಜನ್ಯ ಎಸಗಿರುವುದರಿಂದ, ಕಾನೂನುಬದ್ಧ ವಾರಸುದಾರರು ಅವರ ಸಾವಿಗೆ ಯಾವುದೇ ಪರಿಹಾರವನ್ನು ಪಡೆಯಲು ಸಾಧ್ಯವಿಲ್ಲ, ಇಲ್ಲದಿದ್ದರೆ ಅದು ಉಲ್ಲಂಘನೆ ಮಾಡಿದ ವ್ಯಕ್ತಿಯು ತನ್ನದೇ ಆದ ತಪ್ಪುಗಳಿಗೆ ಪರಿಹಾರವನ್ನು ಪಡೆದಂತೆ ಆಗುತ್ತದೆ” ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಅದೇ ತೀರ್ಪನ್ನು ಎತ್ತಿ ಹಿಡಿದಿರುವ ಸುಪ್ರಿಂ ಕೋರ್ಟ್ , “ಹೈಕೋರ್ಟ್ ನೀಡಿದ ಆಕ್ಷೇಪಾರ್ಹ ತೀರ್ಪಿನಲ್ಲಿ ನಾವು ಹಸ್ತಕ್ಷೇಪ ಮಾಡಲು ಇಚ್ಛಿಸುವುದಿಲ್ಲ. ಆದ್ದರಿಂದ, ವಿಶೇಷ ಅನುಮತಿ ಅರ್ಜಿಯನ್ನು ತಿರಸ್ಕರಿಸಲಾಗಿದೆ” ಎಂದು ಬುಧವಾರ ನೀಡಿದ ಆದೇಶದಲ್ಲಿ ತಿಳಿಸಿದೆ.

[…] […]