ಟಿ.ನರಸೀಪುರ : ಮುಂಬೈ ದಾಳಿ ಬಗ್ಗೆ ಎನ್ಐಎ ಬಳಿ ದಾಳಿ ಸಂಚುಕೋರ ಉಗ್ರ ತಹವೂರ್ ರಾಣ ಮಾಹಿತಿ ಬಹಿರಂಗಪಡಿಸಿರುವುದು ಪಾಕಿಸ್ತಾನ ಉಗ್ರರ ಪೋಷಕ ಎಂಬುದು ಸಾಬೀತಾಗಿರುತ್ತದೆ ಆದ್ದರಿಂದ ಪಾಕಿಸ್ತಾನವನ್ನು ವಿಶ್ವಸಂಸ್ಥೆ ಬಹಿಷ್ಕಾರ ಮಾಡಬೇಕೆಂದು ವರುಣ ವಿಧಾನ ಸಭಾ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ತೋಟದಪ್ಪ ಬಸವರಾಜು ಆಗ್ರಹಿಸಿದ್ದಾರೆ.
ಪಟ್ಟಣದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಪಾಕಿಸ್ತಾನಕ್ಕೆ ಸಹಾಯ ಹಸ್ತ ನೀಡುವ ಚೀನಾ ಹಾಗೂ ಟರ್ಕಿ ದೇಶಗಳ ಮೇಲೂ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ, ಕೇಂದ್ರ ಸರ್ಕಾರ ಪುಕ್ಕಟೆಯಾಗಿ ಬಡವರಿಗೆ ಹಂಚಲು ಅಕ್ಕಿಯನ್ನು ನೀಡುತ್ತಿದೆ ಆದರೆ ಇದನ್ನು ಹಂಚಲು ಯೋಗ್ಯತೆ ಇಲ್ಲದ ಸರ್ಕಾರ ಸಾಗಣೆ ಮಾಡಿದ 4000 ಲಾರಿ ಮಾಲೀಕರುಗಳಿಗೆ 260 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿರುವುದು ರಾಜ್ಯ ಸರ್ಕಾರದ ದೈನೀಸಿ ಸ್ಥಿತಿಯನ್ನು ಸೂಚಿಸುತ್ತದೆ. ಇಂತಹ ಸರ್ಕಾರಕ್ಕೆ ಧಿಕ್ಕಾರವಿರಲಿ ಅಭಿವೃದ್ಧಿ ಶೂನ್ಯ ಭ್ರಷ್ಟ ಸರ್ಕಾರ ತೊಲಗಿದರೆ ಸಾಕೆಂದು ರಾಜ್ಯದ ಜನ ಪರಿತಪಿಸುವಂತ್ತಾಗಿದೆ. ಇಂತಹ ಕೆಟ್ಟ ಹೀನ ಸರ್ಕಾರವನ್ನು ನಡೆಸುವ ಬದಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ನೀಡಿ ಹೋಗುವುದು ಒಳಿತು ರಾಜ್ಯದ ಶಾಸಕರುಗಳು ಪಕ್ಷಭೇದ ಮರೆತು ಇಂತಹ ಜನವಿರೋಧಿ ಸರ್ಕಾರವನ್ನು ಕಿತ್ತೊಗೆಯ ಬೇಕೆಂದು ಮನವಿ ಮಾಡಿದರು.
– ಎಂ.ನಾಗೇಂದ್ರ ಕುಮಾರ್
