ಹಾಸನ ಜುಲೈ 13: ಪ್ರಾಧಿಕಾರದ ನಿಗದಿಪಡಿಸಿದ 10 ಗುಂಟೆ ಸರ್ಕಾರಿ ಜಾಗವನ್ನು ಭೂಗಳ್ಳರಿಂದ ರಕ್ಷಿಸಬೇಕೆಂಬ ಭಾವನೆಯಿಂದ ಪ್ರೇರಿತವಾಗಿ, ದಾವಣಗೆರೆ ನಂದಿನಿ ಬಡಾವಣೆಯ ಹಾಗೂ ಶಿಕ್ಷಕರ ಕಾಲೋನಿಯ ಎರಡನೇ ಹಂತದ ನಿವಾಸಿಗಳು ಯಾವುದೇ ಅಧಿಕೃತ ಮದ್ದತೆಯಿಲ್ಲದೆ ಸ್ವತಃ ಮುಂದಾಗಿದ್ದು, ಪರಿಸರ ಸಂರಕ್ಷಣೆಯ ಜೊತೆಗೆ ಜಾಗದ ಸ್ವಾಭಿಮಾನ ಕಾಪಾಡುವ ದೃಷ್ಟಿಯಿಂದ ಗಿಡ ನೆಡುವ ಕಾರ್ಯಕ್ರಮ ನಡೆಸಿದರು.

ಈ ಕಾರ್ಯಕ್ರಮದ ವಿಶೇಷವೆಂದರೆ — ಯಾವುದೇ ಜನಪ್ರತಿನಿಧಿಗಳ ಹಸ್ತಕ್ಷೇಪವಿಲ್ಲದೆ, ಯಾವುದೇ ರಾಜಕೀಯ ಸ್ಪರ್ಶವಿಲ್ಲದೆ ಸ್ಥಳೀಯರ ಸಾಂಘಿಕ ಬದ್ಧತೆ ಹಾಗೂ ಪರಿಸರದ ಬಗ್ಗೆ ಜವಾಬ್ದಾರಿಯಿಂದ ಈ ಅಭಿಯಾನ ಜರುಗಿದದ್ದು. “ನಮ್ಮ ಬಡಾವಣೆಗೆ ರಸ್ತೆವಿಲ್ಲ, ಬೆಳಕು ಇಲ್ಲ, ನೀರಿನ ವ್ಯವಸ್ಥೆಯೂ ಸವಾಲು. ಜನಪ್ರತಿನಿಧಿಗಳು ಸಹಾಯ ಮಾಡಿಲ್ಲ. ಆದ್ದರಿಂದ ನಾವೇ ಮುಂದಾಗಿ ಈ ಜಾಗವನ್ನು ಗಿಡಗಳ ಮೂಲಕ ಉಳಿಸಿಕೊಳ್ಳುತ್ತಿದ್ದೇವೆ,” ಎನ್ನುತ್ತಾರೆ ಸ್ಥಳೀಯರು.

ಸ್ಥಳೀಯರು ಈ ಕಾರ್ಯದ ಮೂಲಕ ಮಾದರಿಯಾಗಿದೆ. ಇಂತಹ ಸ್ವಯಂ ಪ್ರೇರಿತ ಹಸಿರು ಅಭಿಯಾನಗಳು ನಗರ ಯೋಜನಾ ಪ್ರಾಧಿಕಾರ ಮತ್ತು ಮಹಾನಗರ ಪಾಲಿಕೆಗಳು ಗಮನ ಸೆಳೆಯಬೇಕಾದ ವಿಷಯವಾಗಿದೆ.
