ವಿಷೇಶ ವರದಿ: ಎಂ.ನಾಗೇಂದ್ರ ಕುಮಾರ್
ಟಿ.ನರಸೀಪುರ: ಟಿ.ನರಸೀಪುರ ತಾಲ್ಲೂಕಿನ ಹೊಳೆಸಾಲು ಗ್ರಾಮ ವ್ಯಾಪ್ತಿಗೆ ಬರುವ ಸರ್ವೇ ನಂಬರ್ 93 , 746 ರ ಸರಿ ಸುಮಾರು 200 ಎಕರೆ ಜಮೀನನ್ನು ನಮ್ಮ ಗ್ರಾಮಕ್ಕೆ ಸಂಬಂಧ ಪಡದ SPR ಗ್ರೂಪ್ ಮಾಲೀಕರು ಮತ್ತು ಅವರ ಸಂಬಂಧಿಕರು 192 ಎಕರೆ ಸರ್ಕಾರಿ ಭೂಮಿಯನ್ನು ವಶಪಡಿಸಿಕೊಂಡು ಗ್ರಾಮದ ಜನತೆಗೆ ಅನ್ಯಾಯವೆಸಗಿದ್ದಾರೆಂದು ಗ್ರಾಮ ಪಂಚಾಯತಿ ಸದಸ್ಯರು ಹಾಗೂ ದರ್ಖಾಸ್ ಕಮಿಟಿ ಸದಸ್ಯರೂ ಆದ ಮೇದನಿ ಎಂ.ಎನ್.ಕುಮಾರ್ ಸೇರಿದಂತೆ ಗ್ರಾಮಸ್ಥರು ಆರೋಪಿಸಿದ್ದಾರೆ.
SPR ಗ್ರೂಪ್ ನ ಮಾಲೀಕರಾದ ಇವರು ಈಗಾಗಲೇ ಮೂರು ಸಾವಿರ ಎಕರೆ ಭೂಮಿಯನ್ನು ಹೊಂದಿದ್ದರು ಸರ್ಕಾರದ ಜಮೀನನ್ನೂ ಸಹ ತಮ್ಮ ಹಣ ಹಾಗೂ ರಾಜಕೀಯನ್ನು ಬಳಸಿ ವಶಪಡಿಸಿಕೊಂಡಿದ್ದು ಜೊತೆಗೆ ಸ್ಥಳೀಯ ರೈತರು ಓಡಾಡುವಂತೇತಹ ರಸ್ತೆಗಳು,ಓಣಿಗಳು,ಕೆರೆ ಕಟ್ಚೆಗಳನೆಲ್ಲಾ ವಶಪಡಿಸಿಕೊಂಡಿದ್ದು ಇದರಿಂದ ಗ್ರಾಮದ ದನತೆ ಕಂಗಾಲಾಗಿದ್ದಾರೆಂದು ದೂರಿದರು.
ಕೂಡಲೇ ಸರ್ಕಾರ ಕೂಲಂಕುಷವಾಗಿ ಪರಿಶೀಲಿಸಿ ಸರ್ಕಾರಿ ಜಮೀನನ್ನು ತಮ್ಮ ವಶಕ್ಕೆ ಪಡೆದು ಗ್ರಾಮದ ರೈತರು, ಜನತೆ ಹಾಗೂ ಜಾನುವಾರುಗಳಿಗೆ ಅನುಕೂಲ ಕಲ್ಪಿಸಬೇಕೆಂದು ಮನವಿ ಮಾಡಿದರು.

[…] ಇದನ್ನು ಓದಿ: Watch Video:- ಟಿ.ನರಸೀಪುರ: ಎಸ್ಪಿಆರ್ ಗ್ರೂಪ್ ವಿ… […]