ರಾಮನಾಥಪುರ: ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡರ ಧರ್ಮಪತ್ನಿ, ಸರಳ ವ್ಯಕ್ತಿತ್ವದ ಗೃಹಿಣಿಯಾಗಿದ್ದ ಶರಣೆ ಚನ್ನಮ್ಮದೇವೇಗೌಡರ ನಿಧನಕ್ಕೆ ಮಾಜಿ ಸಚಿವರು ಹಾಗೂ ಶಾಸಕ ಎ. ಮಂಜು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಂತಾಪ ಸಂದೇಶದಲ್ಲಿ ಮಾತನಾಡಿರುವ ಅವರು, “ದೇಶದ ರೈತರ ಪುತ್ರರಾದ ಎಚ್.ಡಿ. ದೇವೇಗೌಡರ ರಾಜಕೀಯ ಜೀವನಕ್ಕೆ ಬೆನ್ನೆಲುಬಾಗಿ ನಿಂತಿದ್ದ ಶರಣೆ ಚನ್ನಮ್ಮದೇವೇಗೌಡರ ಅಗಲಿಕೆಯ ಸುದ್ದಿ ನಮ್ಮೆಲ್ಲರ ಮನಸ್ಸಿಗೆ ಅಪಾರ ದುಃಖವನ್ನುಂಟು ಮಾಡಿದೆ. ಅವರ ಸರಳ ಜೀವನ, ಪ್ರೀತಿ, ಮಮತೆ ಹಾಗೂ ಸೌಹಾರ್ದತೆ ಸದಾ ನಮ್ಮೆಲ್ಲರ ನೆನಪಿನಲ್ಲಿ ಚಿರಸ್ಥಾಯಿಯಾಗಿರುತ್ತದೆ” ಎಂದು ತಿಳಿಸಿದ್ದಾರೆ.
“ಭಗವಂತನು ಶರಣೆ ಚನ್ನಮ್ಮದೇವೇಗೌಡರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವೇಗೌಡರ ಕುಟುಂಬದವರಿಗೆ, ಬಂಧು-ಬಳಗದವರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ನಿಮ್ಮ ದೇಹ ನಮ್ಮಿಂದ ದೂರವಾದರೂ, ನಿಮ್ಮ ನೆನಪುಗಳು ಸದಾ ನಮ್ಮೊಂದಿಗೇ ಇರುತ್ತವೆ” ಎಂದು ಎ. ಮಂಜು ತಮ್ಮ ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ.
– ಕುಮಾರಸ್ವಾಮಿ ಎಂ.ಎನ್.
