ಹಾಸನ, ಜುಲೈ 13:ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ನ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಭಾನುವಾರ ಹಾಸನದ “ನಂದಗೋಕುಲ ಕನ್ವೆನ್ಷನ್ ಹಾಲ್”ನಲ್ಲಿ ಭವ್ಯವಾಗಿ ಜರಗಿತು.
ಈ ಸಂದರ್ಭದಲ್ಲಿ ರೊಟೇರಿಯನ್ ಹೆಚ್.ಡಿ. ವಜ್ರಕುಮಾರ್ ರವರು ಕ್ಲಬ್ನ ಅಧ್ಯಕ್ಷರಾಗಿ,
ರೊಟೀರಿಯನ್ ಕೆ.ಎಸ್. ಯೋಗೇಶ್ ರವರು ಕಾರ್ಯದರ್ಶಿಯಾಗಿ,
ರೊಟೇರಿಯನ್ ಮಂಜುನಾಥ್ ರವರು ಉಪಾಧ್ಯಕ್ಷರಾಗಿ,
ರೊಟೀರಿಯನ್ ವಿ. ಎಂಗವಿಗೌಡ ರವರು ಖಜಾಂಚಿಯಾಗಿ,
ಹಾಗೂ ರೊಟೀರಿಯನ್ ಶಶೀಂದ್ರನಾಥನ್ ರವರು ಜಂಟಿ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಕ್ಲಬ್ನ ಹಿರಿಯ ಹಾಗೂ ಕಿರಿಯ ಸದಸ್ಯರು, ಅವರ ಕುಟುಂಬದವರು ಮತ್ತು ವಿವಿಧ ಕ್ಷೇತ್ರದ ಬಂಧು–ಸ್ನೇಹಿತರು ಉಪಸ್ಥಿತರಿದ್ದು, ನೂತನ ತಂಡಕ್ಕೆ ಶುಭಾಶಯ ತಿಳಿಸಿದರು.
ಕ್ಲಬ್ನ ಸೇವಾ ಚಟುವಟಿಕೆಗಳು ಹಾಗೂ ಹಾಸನ ಜಿಲ್ಲೆಯಲ್ಲಿ ನಿರ್ವಹಿಸಲಿರುವ ಮುಂದಿನ ಯೋಜನೆಗಳ ಬಗ್ಗೆ ಹೊಸ ಕಾರ್ಯಕಾರಿಣಿಯು ದೃಢಬದ್ಧತೆ ವ್ಯಕ್ತಪಡಿಸಿತು.
