ಬೇಲೂರು: ಆನೆ ಕಾರ್ಯಪಡೆ ಕಚೇರಿಯ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಆಗಿದೆ ಅದನ್ನು ಕೂಡಲೆ ನಿಲ್ಲಿಸಿ ಗುಣಮಟ್ಟದ ಕಾಮಗಾರಿ ಪ್ರಾರಂಭಿಸುವವರೆಗೂ ಇಲ್ಲಿ ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದು ಕಾಫಿ ಬೆಳೆಗಾರರ ಒಕ್ಕೂಟದ ವತಿಯಿಂದ ಪ್ರತಿಭಟನೆ ಮಾಡಿದರು.
ತಾಲೂಕಿನ ಬಿಕ್ಕೋಡು ಗ್ರಾಮದ ಬಳಿ ಬೆಳೆಗಾರರು ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಮಾನವ ಹಾಗು ಆನೆ ಸಂಘದಿಂದ ಪ್ರತಿನಿತ್ಯ ಪ್ರಾಣಹಾನಿ ಜೊತೆಗೆ ಬೆಳೆ ನಷ್ಠದಿಂದ ಕಂಗಾಲಾಗಿದ್ದು ಹಲವಾರು ಬಾರಿ ಪ್ರತಿಭಟಿಸಿದ ಹಿನ್ನಲೆಯಲ್ಲಿ ಸರ್ಕಾರ ಇಲ್ಲಿ 24 ಗಂಟೆಗಳ ಕಾಲ ಕಾಡಾನೆಗಳ ಚಲನವಲನಗಳ ಬಗ್ಗೆ ಮಾಹಿತಿ ನೀಡಲು ಆನೆ ಕಾರ್ಯಾಪಡೆ ಕಚೇರಿಯನ್ನು ನಿರ್ಮಾಣಮಾಡಲು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಭೂಮಿ ಪೂಜೆ ಮಾಡಿ 47 ಲಕ್ಷ ರೂ ಅಂದಾಜು ವೆಚ್ಚದಲ್ಲಿ ಅನುದಾನ ನೀಡಿದ್ದರು.

ಆದರೆ ಈ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದ್ದು ಬೆಳೆಗಾರರು ಕೆಲಸ ಮಾಡಲು ಬಿಡದೆ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಕಾಫಿ ಬೆಳೆಗಾರರ ಸಂಘದ ಅದ್ಯಕ್ಷ ಅದ್ದೂರಿ ಚೇತನ್ ಕುಮಾರ್ ಸುಮಾರು ೫ ವರ್ಷಗಳ ಅವಧಿಯಲ್ಲಿ ಬೆಳೆಗಾರರ ಸಮಸ್ಯೆ ಒಂದಲ್ಲಾ ಒಂದು ಸ್ಥಿತಿಯಲ್ಲಿದ್ದು ಆನೆಗಳ ಹಾವಳಿಯಿಂದಾಗಿ ನಮ್ಮ ಮಲೆನಾಡು ಭಾಗದ ರೈತರು ಬೆಳೆಗಾರರು ತತ್ತರಿಸಿ ಹೋಗಿದ್ದಾರೆ.ನಮಗೆ ಶಾಶ್ಬತವಾಗಿ ಆನೆ ಗಳನ್ನು ತೆರವು ಗೊಳಿಸಿ ಅವು ಎಲ್ಲಿ ಸಂಚರಿಸುತ್ತದೆ ಎಂದು ರೈತರಿಗೆ ಮಾಹಿತಿ ನೀಡುವಂತೆ ಅರಣ್ಯ ಸಚಿವರಲ್ಲಿ ಕೇಳಿಕೊಂಡ ಹಿನ್ನಲೆಯಲ್ಲಿ ಖುದ್ದಾಗಿ ಸ್ಥಳಕ್ಕೆ ಆಗಮಿಸಿ 47 ಲಕ್ಷ ವೆಚ್ಚದಲ್ಲಿ ಜಿಲ್ಲಾ ಆನೆಕಾರ್ಯಪಡೆ ಕೇಂದ್ರಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು.

ತುರ್ತಾಗಿ ಕೆಲಸ ಆರಂಭವಾದರು ಗುತ್ತಿಗೆದಾರನ ಬೇಜವಬ್ದಾರಿತನ ಹಾಗು ಅವನ ಕಾಮಗಾರಿಗೆ ಕನ್ನಡಿ ಎಂಬಂತೆ ಅತ್ಯಂತ ಕಳಪೆಯಾಗಿ ಕೂಡಿದ್ದರ ಬಗ್ಗೆ ಶಾಸಕರಿಗೆ ಜಿಲ್ಲಾ ಹಾಗು ತಾಲೂಕು ಅರಣ್ಯಾಧಿಕಾತಿಗಳಿಗೆ ತಿಳಿಸಿದ್ದರು ಅದರ ಬಗ್ಗೆ ಗಮನ ಹರಿಸದಿದ್ದಾಗ ಸ್ಥಳಕ್ಕೆ ಶಾಸಕರೆ ಬಂದು ಗುಣಮಟ್ಟದ ಕಾಮಗಾರಿ ಮಾಡುವಂತೆ ಎಚ್ಚರಿಕೆ ನೀಡಿದ್ದರು ಸಹ ಇದ್ಯಾವುದಕ್ಕು ಗುತ್ತಿಗೆದಾರ ಕಿವಿ ಗೊಡದೆ ರಾತ್ರೊರಾತ್ರಿ ಜಂಟ್ ಶೀಟ್ ಹಾಗು ಕಬ್ಬಿಣದ ತಗಡುಗಳಿಂದ ಕೆಲಸ ಮಾಡುತ್ತಿದ್ದು ಇದರ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸಿದ್ದರು ಯಾವುದೆ ಪ್ರಯೋಜನವಾಗುತ್ತಿಲ್ಲ.ಕೂಡಲೆ ಕೆಲಸ ಕಾಮಗಾರಿ ನಿಲ್ಲಿಸುವರೆಗು ನಾವು ಯಾವುದೇ ಕಾರಣಕ್ಕು ಕೆಲಸ ಮಾಡಲು ಬಿಡುವುದಿಲ್ಲ .ನಮಗೆ ಶಾಶ್ವತವಾಗಿ ಗುಣಮಟ್ಟದ ಕಾಮಗಾರಿ ಆಗಬೇಕು .ಈ ರೀತಿ ಸಚಿವರ ಮತ್ತು ಅವರ ಹಿಂಬಾಲಕರ ಹೆಸರೇಳಿಕೊಂಡು ಇಂತಹ ಗುತ್ತಿಗೆದಾರರನ್ನು ಕೂಡಲೆ ಅಮಾನತು ಮಾಡಬೇಕು ಇಲ್ಲದಿದ್ದರೆ ಈ ಭಾಗದ ಎಲ್ಲಾಬೆಳೆಗಾರರು ಉತ್ತಮ ಗುಣಮಟ್ಟದ ಕಾಮಾಗರಿ ಆಗುವವರೆಗೂ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅದ್ಯಕ್ಷ ತೇಜ್ ಕುಮಾರ್,ಮೋಹನ್ ಕುಮಾರ್,ಸತೀಶ್,ರೇಣುಕುಮಾರ್,ಚಂದ್ರಶೇಖರ್, ನಟರಾಜ್, ಸೇರಿದಂತೆ ಇತರರು ಹಾಜರಿದ್ದರು.
