ಕೆ.ಆರ್.ಪೇಟೆ: ಕಾಯಕ ಸಮುದಾಯಗಳು ಸಂಘಟಿತರಾಗಬೇಕು. ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ತಮ್ಮ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ಮಾಡಬೇಕು ಎಂದು ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ರಘು.ಆರ್.ಕೌಟಿಲ್ಯ ಹೇಳಿದರು.
ಪಟ್ಟಣದ ಸುಲೋಚನಮ್ಮ ರಾಮದಾಸ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ತಾಲ್ಲೂಕು ವೀರ ಮಡಿವಾಳ ಮಾಚಿದೇವ ಸೌಹಾರ್ದ ಸಹಕಾರ ಬ್ಯಾಂಕ್ ಶಾಖೆಯ ಉದ್ಘಾಟನಾ ಸಮಾರಂಭ ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರಿಕ್ಷೆಯಲ್ಲಿ ಸಾಧನೆ ಮಾಡಿದ ಮಡಿವಾಳ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ತಾಲ್ಲೂಕು ಮಡಿವಾಳ ಸಮಾಜವು ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ನಾನು ಮಡಿವಾಳ ಎಂಬ ಬಗ್ಗೆ ನನಗೆ ಅಭಿಮಾನಿದೆ. ಶೋಷಿತ ಸಮಾಜದಲ್ಲಿ ಹುಟ್ಟಿ ಸಮಾಜವು ಗುರಿತಿಸಿಕೊಳ್ಳುವಂತೆ ಮಾಡಿಕೊಳ್ಳುವ ಪ್ರಯತ್ನವನ್ನು ನಾವೇ ಮಾಡಿಕೊಳ್ಳಬೇಕಿದೆ. ಮಡಿವಾಳ ಸಮಾಜದ ಪ್ರತಿಯೊಬ್ಬರೂ ತಮ್ಮಲ್ಲಿರುವ ಭಿನ್ನಮತ ಮರೆತು ಆರ್ಥಿಕವಾಗಿ ಮತ್ತು ಶೈಕ್ಷಣೀಕವಾಗಿ ,ರಾಜಕೀಯವಾಗಿ ಭದ್ರವಾದ ಮಡಿವಾಳ ಸಮಾಜವನ್ನು ಕಟ್ಟಲು ಪ್ರಯತ್ನ ಮಾಡಬೇಕು.

ಅಧಿಕಾರಸ್ಥರು ಮತ್ತು ರಾಜಕಾರಣೀಗಳಲ್ಲಿ ಸಣ್ಣಪುಟ್ಟ ಬೇಡಿಕೆಗಳನ್ನು ಇಡದೆ ಪ್ರತಿ ಕುಟುಂಬಕ್ಕೆ ಭವಿಷ್ಯವನ್ನು ರೂಪಿಸುವ ಉದ್ಯೋಗ ಅಥವಾ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತಹ ಸೌಲಭ್ಯ ಪಡೆಯಲು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.

ತಾಲ್ಲೂಕಿನ ಮಡಿವಾಳ ಸಮಾಜದ ಅಭಿವೃದ್ಧಿ ತಮ್ಮ ಶಾಸಕರ ನಿಧಿಯಲ್ಲಿ ಅಗತ್ಯ ಅನುಧಾನ ನೀಡುವ ಭರವಸೆ ನೀಡಿದರು. ನಮ್ಮ ಮಡಿವಾಳ ಇತರೆ ಸಮಾಜದೊಂದಿಗೆ ಸೌಹಾರ್ಧಯುತ ಬಾಂದವ್ಯ ಹೊಂದುವ ಮೂಲಕ ಅಭಿವೃದ್ದಿಯತ್ತ ಹೆಜ್ಜೆ ಇಡಬೇಕು. ನೂತನವಾಗಿ ಆರಂಭಿಸಿರುವ ಪತ್ತಿನ ಸಹಕಾರ ಬ್ಯಾಂಕ್ ವ್ಯವಹಾರದಲ್ಲಿ ಎಲ್ಲರೂ ಷೇರುದಾರ ಸದಸ್ಯರಾಗುವ ಮೂಲಕ ಬ್ಯಾಂಕಿನಿಂದ ಸೌಲಭ್ಯ ಪಡೆದುಕೊಳ್ಳಬೇಕು. ಈ ಮೂಲಕ ಬ್ಯಾಂಕಿನ ಅಭಿವೃದ್ಧಿಗೆ ಸಹಕಾರ ನೀಡಿ ಉಳಿಸಿ ಬೆಳೆಸಬೇಕೆಂದು ರಘು ಕೌಟಿಲ್ಯ ಕರೆ ನೀಡಿದರು.

ಚಿತ್ರದುರ್ಗದ ಮಡಿವಾಳ ಮಾಚಿದೇವ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಬಳಿಕ ಮಾತನಾಡಿ ಮಡಿವಾಳ ಸಮಾಜವು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ಮೂಲಕ ಸಮಾಜದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಳ್ಳಬೇಕೆಂದು ಹೇಳಿದರು. ಮಡಿವಾಳ ಸಮಾಜವು ಪ್ರಾಚೀನ ಕಾಲದಿಂದಲೂ ಭಾರತೀಯ ಸಮಾಜ ನಡೆಸುವ ಪೂಜೆ, ಧಾರ್ಮಿಕ ಸಂಪ್ರಧಾಯಗಳಲಿ ನೆರವಾಗುತ್ತಾ ಬಂದಿದ್ದು ಭಕ್ತಿ ಮತ್ತು ಮಡಿಯಿಂದ ಸೇವೆ ಸಲ್ಲಿಸಿದ ಸಮಾಜವಾಗಿದೆ. ಆದರೆ ಕುಲಕಸುಬನ್ನೇ ನಂಬಿಕೊಂಡು ಬಂದಿದ್ದರಿಂದ ನಮ್ಮ ಸಮಾಜ ಆರ್ಥಿಕವಾಗಿ, ಶೈಕ್ಷಣೀಕವಾಗಿ ಮತ್ತು ರಾಜಕೀಯವಾಗಿ ಬಹಳ ಹಿಂದುಳಿಯುವAತಾಗಿದೆ. ಆದ್ದರಿಂದ ಸಮಾಜದ ಯುವಕರು. ಕುಲಕಸುಬಿನೊಂದಿಗೆ ಇತರೇ ಆರ್ಥಿಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಆಶೀರ್ವಚನ ನೀಡಿ ಕಿವಿ ಮಾತು ಹೇಳಿದರು.
ಶಾಸಕರಾದ ಹೆಚ್.ಟಿ.ಮಂಜು ಮಾತನಾಡಿ ಕಾಯಕ ಹಾಗೂ ಶೋಷಿತ ಸಮಾಜಗಳಲ್ಲಿ ಒಂದಾದ ಮಡಿವಾಳ ಸಮಾಜದ ಆರ್ಥಿಕ ಪ್ರಗತಿಗೆ ಸ್ಥಾಪಿತವಾಗಿರುವ ಮಡಿವಾಳ ಸೌಹಾರ್ದ ಪತ್ತಿನ ಸಹಕಾರ ಬ್ಯಾಂಕಿಗೆ ಅಗತ್ಯ ನೆರವು ನೀಡುವುದಾಗಿ ತಿಳಿಸಿದರು.
ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ ಮಡಿವಾಳ ಸಮಾಜದ ಅಭಿವೃದ್ದಿಗೆ ಹಿಂದೆಯೂ ನೆರವಾಗಿದ್ದು ಮುಂದೆಯೋ ನೆರವಾಗುತ್ತೇನೆ ಬ್ಯಾಂಕಿನ ಷೇರುದಾರನಾಗುವ ಮೂಲಕ 1 ಲಕ್ಷ ಠೇವಣಿ ಇಟ್ಟು ಪ್ರಗತಿಗೆ ನೆರವಾಗುವದಾಗಿ ಭರವಸೆ ನೀಡಿದರು.
ರಾಜ್ಯ ಅಭಿವೃದ್ಧಿ ನಿಗಮದ ಕೈಮಗ್ಗ ನಿಗಮದ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಮತ್ತು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಪ್ರತಿಭಾ ಪುರಸ್ಕಾರ ನೆರವೇರಿಸಿ ಮಡಿವಾಳ ಸಮಾಜದ ಜನರ ಸಂಕಷ್ಟಗಳಿಗೆ ಎಲ್ಲಾ ರೀತಿಯಲ್ಲೂ ನೆರವಾಗುವ ಭರವಸೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಂಡ್ಯ ಜಿಲ್ಲಾ ವೀರ ಮಡಿವಾಳ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಬಿ. ಟಿ. ಗುರುರಾಜ್ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸಾರಂಗಿ ನಾಗಣ್ಣ, ವೀರ ಕೆ.ಆರ್.ಪೇಟೆ ತಾಲ್ಲೂಕು ಮಡಿವಾಳ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಶಂಕರ್(ಕೆಂಪಣ್ಣ), ಶಾಖಾ ವ್ಯವಸ್ಥಾಪಕಿ ನಿಧಿ, ನಿರ್ದೇಶಕರಾದ ಕೊಟಗಹಳ್ಳಿ ರವಿ, ಬಲ್ಲೇನಹಳ್ಳಿ ಕುಮಾರ್, ಚಟ್ಟೇನಹಳ್ಳಿ ಮಂಜುನಾಥ ಶೆಟ್ಟಿ, ಅಗ್ರಹಾರ ಸ್ವಾಮಿ, ಮೊಸಳೇಕೊಪ್ಪಲು ಉಮೇಶ್ ಶೆಟ್ಟಿ, ಜಾಗಿನಕೆರೆ ಚಂದ್ರು , ಜಾಗಿನಕೆರೆ ನಾಗೇಶ್ , ಕಿಕ್ಕೇರಿ ಶ್ರೀನಿವಾಸ್, ಹೊಸಹೊಳಲು ಎಚ್.ಎಸ್.ನಾಗರಾಜು , ರಾಯಸಮುದ್ರ ರವಿ, ಅಕ್ಕಿಹೆಬ್ಬಾಳು ಮಣಿಯಮ್ಮ , ಮಾರ್ಗೋನಹಳ್ಳಿ ಶಂಕರ್ , ಮರಳಗಾಲ ಮಂಜುನಾಥ್ , ನರಸಿಂಹಯ್ಯ, ಬೋರಶೆಟ್ಟಿ, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಗಾಯಿತ್ರಿ ಸಿದ್ದೇಶ್, ಬಿ.ಬಾಚಹಳ್ಳಿ ಕುಮಾರ್, ಮೊಸಳೇಕೊಪ್ಪಲು ರವಿ, ಸೇರಿದಂತೆ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಚಿತ್ರದುರ್ಗದ ಮಡಿವಾಳ ಮಾಚಿದೇವ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಪಟ್ಟಣದ ಜಯನಗರ ಬಡಾವಣೆಯಲ್ಲಿರುವ ಆರ್.ಟಿ.ಓ.ಮಲ್ಲಿಕಾರ್ಜುನ್ ಚಾರಿಟೇಬಲ್ ಟ್ರಸ್ಟ್ ಕಚೇರಿಯಲ್ಲಿ ಆರ್.ಟಿ.ಓ. ಮಲ್ಲಿಕಾರ್ಜುನ್ ಕುಟುಂಬದವರು ನೀಡಿದ ಗುರುವಂದನೆ ಮತ್ತು ಪಾದಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.
-ಶ್ರೀನಿವಾಸ್ ಆರ್.
