ಟಿ.ನರಸೀಪುರ : ಕೌಶಲ್ಯ ಎಂಬುದು ಪ್ರಸ್ತುತ ಜಾಗತಿಕ ಜಗತ್ತಿಗೆ ಅನಿವಾರ್ಯವಾಗಿದೆ.ಜಗತ್ತು ಇಷ್ಟೊಂದು ವೈಜ್ಞಾನಿಕವಾಗಿ ಮುಂದುವರೆಯುತ್ತಿರುವುದಕ್ಕೆ ಕೌಶಲ್ಯ ತರಭೇತಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ತಾಲ್ಲೂಕು ಪಂಚಾಯತಿ ಸಂಜೀವಿನಿ ವ್ಯವಸ್ಥಾಪಕರಾದ ರೂಪಶ್ರೀ ತಿಳಿಸಿದರು.
ತಾಲ್ಲೂಕಿನ ಬನ್ನೂರು ಪಟ್ಟಣದ ಜಿ.ವಿ.ಗೌಡ ಪದವಿ ಪೂರ್ವ ಕಾಲೇಜಿನಲ್ಲಿ ನಯನ ನಾಟ್ಯ ಟ್ರಸ್ಟ್ ಮತ್ತು ಮೇರಾ ಯುವ ಭಾರತ್ ಮೈಸೂರು ಹಾಗೂ ಜಿ ವಿ ಗೌಡ ಪದವಿ ಪೂರ್ವ ಕಾಲೇಜು ಇವುಗಳ ಸಹಯೋಗದಲ್ಲಿ ವಿಶ್ವ ಯುವ ಕೌಶಲ್ಯ ದಿನ 2025 ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ ಯುವ ಶಕ್ತಿ ನಮ್ಮ ದೇಶದ ಆಸ್ತಿ. ಎಲ್ಲಾ ಕ್ಷೇತ್ರದಲ್ಲೂ ಜಗತ್ತಿನಲ್ಲಿ ಹೊಸ ಹೊಸ ಆವಿಸ್ಕಾರಗಳು, ಹೊಸತನಗಳು ಉದ್ಭವ ಆಗುತ್ತಿವೆ ಅದಕ್ಕೆ ಮಾದರಿಯಂತೆ ಚೀನಾ, ಜಪಾನ್, ಅಮೇರಿಕಾ ಮುಂದುವರಿದ ದೇಶಗಳು ಜಗತ್ತಿನಲ್ಲೇ ಶ್ರೇಷ್ಠ ಮಾದರಿ ದೇಶಗಳಾಗಿ ಮುನ್ನುಗ್ಗುತ್ತಿವೆ. ಹಾಗಾಗಿ ಭಾರತ ದೇಶವು ಇದಕ್ಕೆ ಮಿಗಿಲಾಗಿ ಕಮ್ಮಿ ಏನು ಇಲ್ಲ ಪ್ರಸ್ತುತದಲ್ಲಿ ಚೀನಾ ಪ್ರಪಂಚದಲ್ಲಿ ನಂಬರ್ ಒನ್ ಸ್ಥಾನದಲ್ಲಿತ್ತು ಅದನ್ನ ಹಿಂದಿಕ್ಕಿ ಭಾರತ ಮುಂದಿದೆ ಅದು ಜನಸಂಖ್ಯೆಯಲ್ಲಿ 146 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ 66 ಪರ್ಸೆಂಟ್ ಯುವಶಕ್ತಿ ಇದೆ ಅಂದರೆ 84 ಕೋಟಿ ಯುವ ಜನರ ಭಾರತ ಕೌಸಲ್ಯದಲ್ಲಿ ಮುಂದೆ ಬರಬೇಕಾದ ಅನಿವಾರ್ಯತೆ ಅಗತ್ಯವಾಗಿದೆ. ಈ ಕಾರಣಕ್ಕಾಗಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಗಳು ಹಲವಾರು ಯೋಜನೆಗಳನ್ನು ಯುವಜನರಿಗಾಗಿ ರೂಪಿಸಿ ಪ್ರತಿವರ್ಷ ಸಾವಿರಾರು ಕೋಟಿಗಳನ್ನು ವ್ಯಯ ಮಾಡುತ್ತಿದೆ ಎಂದರು.
ವಿದ್ಯಾಭ್ಯಾಸ ಮಾಡಿದ ಪ್ರತಿಯೊಬ್ಬ ವಿದ್ಯಾವಂತರಿಗೂ, ವಿದ್ಯಾರ್ಥಿಗಳಿಗೂ ಸರ್ಕಾರಿ, ಅರೆ ಸರ್ಕಾರಿ ಉದ್ಯೋಗಗಳು ಸಿಗುವುದು ದೂರದ ಮಾತು ಆದರೆ ತಮಗಿರುವ ಕೌಶಲ್ಯದಿಂದ ಹೊಸ ಉದ್ಯೋಗವನ್ನು ಪ್ರಾರಂಭಿಸಿ ಉದ್ಯೋಗಸ್ಥರಾಗಿ ರೂಪುಗೊಳ್ಳಬೇಕಾದಕ್ಕಾಗಿ ಸರ್ಕಾರ ಹಲವಾರು ಸಬ್ಸಿಡಿ ಸಹಿತ ಯೋಜನೆಗಳನ್ನು ತಂದಿದೆ.ಅದರಲ್ಲಿ ಸಾಕಷ್ಟು ಯುವ ಸಮೂಹ ಮುಂದೆ ಬರುತ್ತಿರುವುದು ನಮ್ಮ ಕಣ್ಣ ಮುಂದೆ ಕಾಣುತ್ತಿವೆ.ಉದಾಹರಣೆಗೆ ನಬಾರ್ಡ್, ಜವಳಿ, ಪ್ಯಾರಾ ಮೆಡಿಕಲ್, ಬಿಲ್ಡಿಂಗ್ , ಎಫ್.ಎಂ.ಸಿ.ಜಿ, ಫುಡ್,ಆರ್ಗಾನಿಕ್, ಹರ್ಬಲ್ ಇಂಡಸ್ಟ್ರಿ, ಇಕೋ ಪ್ರೆಂಡ್ಲಿ, ಪರಿಸರ ಸ್ನೇಹಿ ಇಂಡಸ್ಟ್ರಿ ಮೈಕ್ರೋ, ಸ್ಮಾಲ್, ಮೀಡಿಯಂ ಇಂಡಸ್ಟ್ರಿಗಳ ಮಹತ್ವ, ಕರ್ನಾಟಕ ಇಂಡಸ್ಟ್ರಿ ಪಾಲಿಸಿ 2025, ಎಂ.ಎಸ್.ಎಂ.ಇ, ಕೆ.ಐ.ಎ.ಡಿ.ಬಿ, ಕೆ.ಎಸ್.ಎಸ್.ಐ.ಡಿ.ಸಿ ಕೈಗಾರಿಕಾ ಭೂಮಿಗಳ ವಿಶೇಷತೆಗಳಾಗಿದ್ದು, 75% ಸಬ್ಸಿಡಿ ಲ್ಯಾಂಡ್ ಪಡೆಯುವ ವಿಧಾನಗಳಲ್ಲಿ, ಪ್ರವಾಸೋದ್ಯಮ,ಅಂಬೇಡ್ಕರ್ ನಿಗಮ ಮತ್ತು ಇತರೇ ನಿಗಮಗಳ ಯೋಜನೆಗಳು, ಎಸ್.ಎಚ್.ಜಿ, ರೈತ ಉತ್ಪಾದನೆ ಘಟಕಗಳು, ಬ್ರ್ಯಾಂಡಿಂಗ್, ಪ್ರಾಡಕ್ಟ್ ಡಿಸೈನಿಂಗ್ ಮತ್ತು ಸಿ.ಎಂ.ವೈ.ಕೆ.ಡಬ್ಲೂ.ಜಿ.ಎ ಪ್ರಿಂಟಿಂಗ್ ಪ್ರಾಡಕ್ಟ್ ಪ್ಯಾಕಿಂಗ್, ಮನುಫಾಕ್ಚರಿಂಗ್ ಸೆಕ್ಟರ್, ಸರ್ವಿಸ್ ಸೆಕ್ಟರ್ ಗಳಲ್ಲಿ ಸಬ್ಸಿಡಿ ದೊರೆಯುವಂತ್ತಾವುದಾಗಿವೆ.
ಸೌಲಭ್ಯಗಳು, ಸಬ್ಸಿಡಿಗಳು ಸಿ.ಜಿ.ಟಿ.ಎಂ.ಎಸ್. ಯೋಜನೆಯಲ್ಲಿ ಎಸ್ಸಿ,ಎಸ್ಟಿ ಸಮುದಾಯದವರಿಗೆ 4% ಬಡ್ಡಿ ಸಬ್ಸಿಡಿಗಳು ಪ್ರೋತ್ಸಾಹಧನ, ಸಿಡ್ ಫಂಡ್ಸ್, ಯೋಜನೆಗೆ ಕೇಂದ್ರ ರಾಜ್ಯ ಸರಕಾರಗಳ ಸವಲತ್ತುಗಳು,
1 ಅಥವಾ 2 ವರ್ಷ ಗಳಲ್ಲಿಯೇ ಕೋಟಿ ಕೋಟಿ ಟರ್ನ್ಓವರ್ ಲಾಭ ಗಳಿಸಿ ಕೋಟ್ಯಾಧಿಪತಿಗಳಾಗುವ ಅವಕಾಶವಿದೆ. ಹೀಗೆ ನೂರಾರು ಅವಕಾಶಗಳು ಯುವಜನರಿಗಾಗಿಯೇ ಕಾದಿವೆ. ಇದರ ಮಾಹಿತಿ ಮತ್ತು ಉಪಯೋಗವನ್ನು ಪಡೆದುಕೊಂಡು ನೀವೆಲ್ಲ ವಿದ್ಯಾಭ್ಯಾಸದ ನಂತರ ಉನ್ನತ ವಿದ್ಯಾಭ್ಯಾಸ ಮಾಡಲಾಗದವರು ಸ್ವಂತ ಉದ್ಯೋಗಸ್ಥರಾಗುವವರು ಬಿಜಿನೆಸ್ ಮ್ಯಾನ್ ಆಗಬಯಸುವವರು ಮುಂದಿನ ದಿನಗಳಲ್ಲಿ ಇದನ್ನ ಬಳಸಿಕೊಳ್ಳುವ ಸದುದ್ದೇಶದಿಂದ ಸರ್ಕಾರ ಯುವಜನರಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿ ಈ ಕಾರಣಕ್ಕಾಗಿ ಈ ದಿನವನ್ನು ವಿಶ್ವ ಯುವ ಕೌಶಲ್ಯ ದಿನ ಎಂದು ಆಚರಣೆ ಮಾಡುತ್ತಿರುವುದು ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಸ್ವಯಂ ಉದ್ಯೋಗಿ ರಂಗಸಮುದ್ರ ರೇಖಾ, ಮಹಾಲಕ್ಷ್ಮಿ, ಮಹದೇವಸ್ವಾಮಿ ಕನ್ನಡ ಉಪನ್ಯಾಸಕರಾದ ಮಂಜುನಾಥ್, ರಾಜ್ಯಶಾಸ್ತ್ರ ಉಪನ್ಯಾಸಕರಾದ ಜಿ.ಆರ್. ಮಮತಾ ಸೇರಿದಂತೆ ಕಾಲೇಜಿನ ಸಿಬ್ಬಂದಿಗಳು ಹಾಜರಿದ್ದರು.
- ಎಂ.ನಾಗೇಂದ್ರ ಕುಮಾರ್
