ಬೆಂಗಳೂರು, ಜುಲೈ 18: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಜುಲೈ 17 ರಂದು ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಒಟ್ಟು ಸಾವಿರಾರು ಕೋಟಿ ಮೌಲ್ಯದ ಯೋಜನೆಗಳು ಇಂದು ಒಪ್ಪಿಗೆಯಾದವು. ಪ್ರಮುಖ ನಿರ್ಣಯಗಳ ವಿವರ ಹೀಗಿದೆ:
ಪ್ರಮುಖ ತಾಂತ್ರಿಕ ಮತ್ತು ಕೈಗಾರಿಕಾ ಯೋಜನೆಗಳು:
-
ರಾಯಚೂರು ಜಿಲ್ಲೆ ತಾಲ್ಲೂಕಿನಲ್ಲಿ ಪಿಪಿಪಿ ಮಾದರಿಯಲ್ಲಿ ₹24.50 ಕೋಟಿ ವೆಚ್ಚದ ಜವಳಿ ಪಾರ್ಕ್ ಸ್ಥಾಪನೆಗೆ ಒಪ್ಪಿಗೆ.
-
ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ತಾತ್ವಿಕ ಅನುಮೋದನೆ ಮತ್ತು NTPCಗೆ ಪ್ರಾಥಮಿಕ ಅಧ್ಯಯನಕ್ಕೆ ಅನುಮತಿ.
-
ಕೊಪ್ಪಳ ಜಿಲ್ಲೆಯ ಸಿರಿವಾರ ಗ್ರಾಮದಲ್ಲಿ ₹83.79 ಕೋಟಿ ವೆಚ್ಚದ ತೋಟಗಾರಿಕೆ ತಂತ್ರಜ್ಞಾನ ಪಾರ್ಕ್.
-
ಹಾವೇರಿ ಜಿಲ್ಲೆಯ ಯಳವಟ್ಟಿ ಗ್ರಾಮದಲ್ಲಿ ₹35.07 ಕೋಟಿ ವೆಚ್ಚದ ಆಹಾರ ಉತ್ಪನ್ನ ಸಂಸ್ಕರಣಾ ಘಟಕ.
-
ಮೈಸೂರು ವಿಶ್ವವಿದ್ಯಾಲಯದಲ್ಲಿ ₹10 ಕೋಟಿ ವೆಚ್ಚದ ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನ ಪೀಠ.
ಸಾಮಾಜಿಕ ಮತ್ತು ಶಿಕ್ಷಣ ಆಧಾರಿತ ಯೋಜನೆಗಳು:
-
ಇಸ್ಕಾನ್ ಬೆಂಗಳೂರುಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ಭೂಮಿ ಮಂಜೂರು.
-
ಪುತ್ತೂರಿನ ಬಂಟರ ಸಂಘಕ್ಕೆ 3 ಎಕರೆ ಗೋಮಾಳ ಭೂಮಿ.
-
ಉಲ್ಲಾಳದಲ್ಲಿ ಅಲ್ಪಸಂಖ್ಯಾತರ ಮಹಿಳಾ ವಿದ್ಯಾರ್ಥಿನಿಯರಿಗಾಗಿ ₹17.09 ಕೋಟಿ ವೆಚ್ಚದ ವಸತಿ ಸಹಿತ ಪದವಿ ಪೂರ್ವ ಕಾಲೇಜು.
-
ಅಲ್ಪಸಂಖ್ಯಾತರ ವಸತಿ ಶಾಲಾ ಕಾಲೇಜುಗಳಿಗೆ ₹64 ಕೋಟಿ ಅನುದಾನ.
ತೋಟಗಾರಿಕೆ, ಪ್ರವಾಸೋದ್ಯಮ ಮತ್ತು ಪರಿಸರ:
-
ಹಂಪಿ-ಬಾದಾಮಿ-ಐಹೊಳೆ ಪ್ರವಾಸಿ ವೃತ್ತ ಅಭಿವೃದ್ಧಿಗೆ ₹166.22 ಕೋಟಿ ಅನುದಾನ.
-
ಕಿತ್ತೂರಿನಲ್ಲಿ ₹30 ಕೋಟಿ ವೆಚ್ಚದ ಥೀಮ್ ಪಾರ್ಕ್ ನಿರ್ಮಾಣ.
-
ಹಾರಂಗಿ ಜಲಾಶಯದಲ್ಲಿ ₹36.50 ಕೋಟಿ ವೆಚ್ಚದ ಕಮಾನು ಸೇತುವೆ ನಿರ್ಮಾಣ.
ಜಲ ಸಂಪತ್ತು ಮತ್ತು ನೀರಾವರಿ ಯೋಜನೆಗಳು:
-
ಬೆಂಗಳೂರು ನಗದ ತ್ಯಾಜ್ಯ ನೀರನ್ನಿಂದ ಕೋಲಾರ್-ಚಿಕ್ಕಬಳ್ಳಾಪುರದ 126 ಕೆರೆಗಳಿಗೆ ನೀರು ತುಂಬಿಸುವ ಯೋಜನೆ – ₹128 ಕೋಟಿ.
-
ಮುನವಳ್ಳಿ ಆರ್ಬಿಸಿ ಬಳಿ ಎಂಎಸ್ ಪೈಪ್ ಅಕ್ವಾಡಕ್ಟ್ ನಿರ್ಮಾಣ – ₹19.05 ಕೋಟಿ.
ಶಾಸನಾತ್ಮಕ ಮತ್ತು ಆಡಳಿತಾತ್ಮಕ ತೀರ್ಮಾನಗಳು:
-
ಭೂಸ್ವಾಧೀನದ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 29 ಪ್ರಕರಣಗಳ ಪರಿಶೀಲನೆ, ಶಿಸ್ತು ಕ್ರಮ.
-
“ಎ” ಮತ್ತು “ಬಿ” ಖಾತಾ ಆಸ್ತಿಗಳ ನಿಯಂತ್ರಣಕ್ಕೆ ನಿರ್ಧಾರ.


[…] […]