ಬೆಂಗಳೂರು, ಜುಲೈ 22: ಕರ್ನಾಟಕವು 2024–25ನೇ ಹಣಕಾಸು ವರ್ಷದಲ್ಲಿ ರಾಷ್ಟ್ರದ ಅಗ್ರ ತಲಾ ಆದಾಯ ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯದ ತಲಾ ನಿವ್ವಳ ಆಂತರಿಕ ಉತ್ಪಾದನೆ (NSDP) 2,04,605 ರೂಪಾಯಿಗೆ ತಲುಪಿದ್ದು, ಇದು ದೇಶದಲ್ಲಿ ಅಗ್ರ ಸ್ಥಾನವಾಗಿದೆ ಎಂದು ಲೋಕಸಭೆಯಲ್ಲಿ ಮಂಡನೆಯಾದ ಕೇಂದ್ರ ಹಣಕಾಸು ಸಚಿವಾಲಯದ ವರದಿ ತಿಳಿಸಿದೆ.
ದುಪ್ಪಟ್ಟಾದ ಆದಾಯ:
ಒಂದು ದಶಕದ ಹಿಂದೆ, 2014–15ರಲ್ಲಿ ಕರ್ನಾಟಕದ ತಲಾ ಆದಾಯ 1,05,697 ರೂಪಾಯಿಯಾಗಿದ್ದರೆ, 2024–25ರಲ್ಲಿ ಅದು ಶೇಕಡಾ 93.6ರಷ್ಟು ಏರಿಕೆಯೊಂದಿಗೆ 2 ಲಕ್ಷದ ಗಡಿ ದಾಟಿದೆ. ಈ ಮೂಲಕ ರಾಜ್ಯದ ಆರ್ಥಿಕ ಬೆಳವಣಿಗೆಯು ರಾಷ್ಟ್ರದ ಸರಾಸರಿ ಬೆಳವಣಿಗೆಯು (57.6%)ಗಿಂತ ಎತ್ತಿಗೇರುವ ಸಾಧನೆಯಾಗಿದೆ.
ಇತರ ರಾಜ್ಯಗಳ ನಡುವೆ ಕರ್ನಾಟಕ ಮೆರೆದಿದ್ದು ಹೀಗೆ:
ತಮಿಳುನಾಡು ತಲಾ ಆದಾಯ 1,96,309 ರೂಪಾಯಿಯಾಗಿ ಎರಡನೇ ಸ್ಥಾನದಲ್ಲಿದೆ. ಒಡಿಶಾ ಶೇ.96.7ರಷ್ಟು ಏರಿಕೆಯೊಂದಿಗೆ ದಶಕದ ಆಧಾರದ ಮೇಲೆ ಬೆಳವಣಿಗೆಯಲ್ಲಿ ಮೊದಲ ಸ್ಥಾನವನ್ನು ಪಡೆದರೆ, ಕರ್ನಾಟಕ ಶೇ.93.6ರೊಂದಿಗೆ ಎರಡನೇ ಸ್ಥಾನದಲ್ಲಿದೆ.
ಮತ್ತಷ್ಟು ಬೆಳಕು:
- 2023–24ರಲ್ಲಿ ಕರ್ನಾಟಕದ ತಲಾ ಆದಾಯ 1,91,970 ರೂ.ಗಳಿಂದ 2024–25ಕ್ಕೆ 2,04,605 ರೂ.ಗೆ ಏರಿಕೆಯಾಗಿದೆ (ಷೇ.6.6).
- ಮಿಜೋರಾಂ ಶೇ.125.4ರಷ್ಟು ಬೆಳವಣಿಗೆ ದಾಖಲಿಸಿ ಗಮನಸೆಳೆದಿದೆ.
- ಗುಜರಾತ್ (90.7%), ಗೋವಾ (89.9%), ತೆಲಂಗಾಣ (84.3%)ಗಳು ಮುಂದಿರುವ ಇತರ ರಾಜ್ಯಗಳು.
ಹಿಂದುಳಿದ ರಾಜ್ಯಗಳು:
ಪಂಜಾಬ್ (41.3%), ಉತ್ತರಾಖಂಡ (33.5%), ಪುದುಚೇರಿ (32.8%) ದಶಕದ ಬೆಳವಣಿಗೆಯಲ್ಲಿ ಹಿಂದುಳಿದಂತೆ ಕಂಡುಬಂದಿದೆ.
ಅಂಕಿಅಂಶ ಲಭ್ಯವಿಲ್ಲದ ಪ್ರದೇಶಗಳು:
2024–25ನೇ ಸಾಲಿನ ಮಾಹಿತಿಯು ಇನ್ನೂ ಅರುಣಾಚಲ ಪ್ರದೇಶ, ಕೇರಳ, ಜಾರ್ಖಂಡ್, ದೆಹಲಿ, ಲಡಾಖ್, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಗಿಂತ ಲಭ್ಯವಾಗಿಲ್ಲ.

[…] […]