ಬ್ಯಾಂಕಾಕ್/ಪ್ನಾಂಪೆನ್, ಜುಲೈ 25: ಏಷ್ಯಾದ ಹೃದಯಭಾಗದಲ್ಲಿ ಮತ್ತೆ ಯುದ್ಧದ ನೆರಳು ಕವಿದಿದೆ. ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವೆ ವರ್ಷಗಳ ಹಿಂದಿನಿಂದಲೂ ಉರಿ ಬಡಿದಿದ್ದ ಗಡಿ ವಿವಾದವು ಮತ್ತೆ ಉಗ್ರವಾಗಿ ಚುರುಕುಗೊಂಡಿದ್ದು, ಪ್ರಚೀನ ಹಿಂದೂ ದೇವಾಲಯ ‘ಪ್ರಿಯಾ ವಿಹಾರ್’ ಮತ್ತೆ ಎರಡೂ ರಾಷ್ಟ್ರಗಳ ನಡುವೆ ಸಂಘರ್ಷದ ಕಣವಾಗಿಯೇ ಪರಿಣಮಿಸಿದೆ.
ಗುರುವಾರ ಬೆಳಿಗ್ಗೆ ಕಾಂಬೋಡಿಯಾದ ಸೈನಿಕರು ಡ್ರೋನ್ ನಿಗಾಹಿನ್ನಿಂದ ತಾ ಮುಯೆನ್ ಥಾಮ್ ದೇವಾಲಯದ ಬಳಿ ತಲುಪಿದ ನಂತರ ಉದ್ವಿಗ್ನತೆ ಉಂಟಾಗಿ, ಈ ಘಟನೆಯ ಬಳಿಕ ಶಸ್ತ್ರಸಜ್ಜಿತ ಕಾಂಬೋಡಿಯನ್ ಸೈನಿಕರು ಥಾಯ್ ಮಿಲಿಟರಿ ನೆಲೆಗಳತ್ತ ಮುಂದಾದರು. ಕೆಲವೇ ಕ್ಷಣಗಳಲ್ಲಿ ಗುಂಡಿನ ಚಕಮಕಿಗೆ ದಾರಿತೋರಿದ್ದು, ಇಬ್ಬರ ನಡುವೆ ಗಂಭೀರ ಯುದ್ಧಾತ್ಮಕ ಪರಿಸ್ಥಿತಿ ನಿರ್ಮಾಣವಾಯಿತು.
ದೇವಾಲಯ, ಗಡಿ ಮತ್ತು ರಾಜಕೀಯ ಬಿಕ್ಕಟ್ಟು…
ಘರ್ಷಣೆಗೆ ಕೇಂದ್ರಬಿಂದುವಾಗಿರುವದು 11ನೇ ಶತಮಾನದ ಶಿವನಿಗೆ ಅರ್ಪಿತವಾದ ಖ್ಯಾತ ‘ಪ್ರಿಯಾ ವಿಹಾರ್’ ದೇವಾಲಯ. ಈ ದೇವಾಲಯ ಕಾಂಬೋಡಿಯಾ-ಥೈಲ್ಯಾಂಡ್ ಗಡಿಭಾಗದ ಡಾಂಗ್ರೆಕ್ ಪರ್ವತಶ್ರೇಣಿಯಲ್ಲಿ ಸ್ಥಿತವಾಗಿದ್ದು, ಇದನ್ನು ಯುನೆಸ್ಕೋ 2008ರಲ್ಲಿ ವಿಶ್ವ ಪರಂಪರೆ ತಾಣವೆಂದು ಘೋಷಿಸಿದ್ದು, ಅದೇ ವರ್ಷದಿಂದ ಆರಂಭವಾದ ಗಡಿವಿವಾದ ಇಂದು ಪೂರ್ಣ ಯುದ್ಧದ ರೂಪ ಪಡೆದುಕೊಂಡಿದೆ.
ಭೂಪಟ ವಿವಾದದಿಂದ ಯುದ್ಧದವರೆಗೆ…
1907 ರಲ್ಲಿ ಫ್ರಾನ್ಸುಸರು ತಯಾರಿಸಿದ ನಕ್ಷೆಯನ್ನು ಥೈಲ್ಯಾಂಡ್ ಸಂಪೂರ್ಣವಾಗಿ ಒಪ್ಪಿಲ್ಲ. ICJ (ಅಂತಾರಾಷ್ಟ್ರೀಯ ನ್ಯಾಯಾಲಯ) 1962ರಲ್ಲಿ ದೇವಾಲಯ ಕಾಂಬೋಡಿಯಾಕ್ಕೆ ಸೇರಿದಂತೆ ತೀರ್ಪು ನೀಡಿದರೂ, ಗಡಿ ಸ್ಪಷ್ಟವಲ್ಲದ ಕಾರಣದಿಂದಾಗಿ ಎರಡು ದೇಶಗಳ ನಡುವೆ ಬಿಕ್ಕಟ್ಟು ಮುಂದುವರೆದಿದೆ.
ಇದನ್ನು ಓದಿ: ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ಯಾಕೆ ತಪ್ಪಿಸಬೇಕು…???
ಚೀನಾದ ನಿರೀಕ್ಷಿತ ಭೂಮಿಕೆ
ಈ ಪ್ರದೇಶದ ಮೇಲ್ವಿಚಾರಣೆಯ ಹಿನ್ನೆಲೆ ಒಂದು ಮಹತ್ವದ ವಿಚಾರ – ಚೀನಾ. ಕಾಂಬೋಡಿಯಾ ವಿರುದ್ಧ ಥೈಲ್ಯಾಂಡ್ ಬಲಿಷ್ಠ ಸೇನೆಯು ಆಕ್ರಮಣ ಆರಂಭಿಸಿದಾಗ, ಕಾಂಬೋಡಿಯಾ ಪರವಾಗಿ ಚೀನಾ ತಕ್ಷಣವೇ ಹೊರಳಿ ಬರಲಿದೆಯೇ ಎಂಬುದು ನಿಶ್ಚಿತವಿಲ್ಲ. ಆದರೆ, ಜಿಯೋಪಾಲಿಟಿಕ್ಸ್ ತಜ್ಞರ ಪ್ರಕಾರ, ಚೀನಾ ಈ ಯುದ್ಧದಲ್ಲಿ ಮಧ್ಯಸ್ಥಿಕೆಯ ಭೂಮಿಕೆ ತೆಗೆದುಕೊಂಡರೆ, ಆಗ್ನೇಯ ಏಷ್ಯಾದ ರಾಜತಾಂತ್ರಿಕ ಸಮೀಕರಣವೇ ಬದಲಾಗಬಹುದು.
ಪ್ರಧಾನಿಗಳು ಪ್ರತಿಕ್ರಿಯಿಸಿದ ಸಂದರ್ಭ…
ಘರ್ಷಣೆಯ ನಂತರ ಕಾಂಬೋಡಿಯಾ ಪ್ರಧಾನಿ ಹುನ್ ಮಾನೆಟ್ ತುರ್ತು ಶಾಂತಿ ಸಭೆಗಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಮನವಿ ಮಾಡಿದ್ದಾರೆ. ಥೈಲ್ಯಾಂಡ್ ಸರ್ಕಾರ ಯಾವುದೇ ಪ್ರಚೋದನೆಯನ್ನು ಸಹಿಸುವುದಿಲ್ಲ ಎಂಬ ನಿಲುವು ತೆಗೆದುಕೊಂಡಿದೆ.
ವಿಮಾನ ದಾಳಿಗಳು, ರಾಕೆಟ್ ಹಾರಾಟ: ನಿಖರ ಮಾಹಿತಿ
ಕಾಂಬೋಡಿಯಾ ರಾಕೆಟ್ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಥಾಯ್ ವಾಯುಪಡೆಯು ಪ್ರತ್ಯುತ್ತರವಾಗಿ ಕಾಂಬೋಡಿಯನ್ ಮಿಲಿಟರಿ ನೆಲೆಗಳ ಮೇಲೆ ಗಂಭೀರ ಬಾಂಬ್ ದಾಳಿಗಳನ್ನು ನಡೆಸಿದೆ. ಡಾನ್ ತುವಾನ್ ಹಾಗೂ ಸುರಿನ್ ಪ್ರದೇಶಗಳ ದೇವಾಲಯಗಳು ಹಾಗೂ ವಸತಿ ಪ್ರದೇಶಗಳು ದಾಳಿಗೆ ಗುರಿಯಾಗಿವೆ ಎಂಬ ದೂರನ್ನು ಥೈಲ್ಯಾಂಡ್ ವ್ಯಕ್ತಪಡಿಸಿದೆ.
ಭದ್ರತಾ ದೃಷ್ಟಿಕೋನದಿಂದ ದೇವಾಲಯದ ಮಹತ್ವ
ಡಾಂಗ್ರೆಕ್ ಪರ್ವತಗಳ ಮಧ್ಯದಲ್ಲಿ ಇರುವ ಈ ದೇವಾಲಯವು ಗಡಿಯಾಚೆಗಿನ ಚಟುವಟಿಕೆಗಳ ಮೇಲ್ವಿಚಾರಣೆಗೆ ಸೂಕ್ತ ಸ್ಥಳವಾಗಿದ್ದು, ಕಾರ್ಯತಂತ್ರದ ದೃಷ್ಟಿಯಿಂದ ತುಂಬಾ ಸೂಕ್ಷ್ಮ ಪ್ರದೇಶ. ಈ ಕಾರಣದಿಂದಲೂ ಎರಡೂ ದೇಶಗಳು ಈ ಪ್ರದೇಶದ ನಿಯಂತ್ರಣಕ್ಕಾಗಿ ಪಟ್ಟು ಹಿಡಿದಿವೆ.
ಮತ್ತೆ ಏಷ್ಯಾದಲ್ಲಿ ತೀವ್ರತೆ…
ಭಾರತ-ಪಾಕಿಸ್ತಾನ, ಇಸ್ರೇಲ್-ಇರಾನ್ ನಂತರ ಇದೇ 2025ರಲ್ಲಿ ನಡೆದ ಮೂರನೇ ಯುದ್ಧವೆಂದು ಕರೆಯಬಹುದಾದ ಈ ಘರ್ಷಣೆಯು ಭೂ-ರಾಜಕೀಯ ಸ್ಥಿತಿಗತಿಗಳಿಗೆ ಹೊಸ ದಿಕ್ಕು ತೋರಿಸಬಹುದು. ದೇವಾಲಯಗಳಂತಹ ಧಾರ್ಮಿಕ ಸ್ಥಳಗಳು ಗಡಿ ವಿವಾದಕ್ಕೆ ಕಾರಣವಾಗಿರುವುದು ಇತ್ತೀಚಿನ ಇತಿಹಾಸದಲ್ಲಿ ವಿರಳ. ಆದರೆ ಈ ಯುದ್ಧದಿಂದ, ಥೈಲ್ಯಾಂಡ್-ಕಾಂಬೋಡಿಯಾ ನಡುವೆ ಪವಿತ್ರ ತಾಣವೂ ರಾಜಕೀಯದ ಹಲ್ಲುಬಿಲ್ಲಾಗಿ ಮಾರ್ಪಟ್ಟಿದೆ ಎಂಬುದರಲ್ಲಿ ಸಂಶಯವಿಲ್ಲ.
ಶ್ರದ್ಧಾ ಮತ್ತು ರಾಜಕೀಯ ಮಿಲನವಾಗುವ ಸ್ಥಳಗಳಲ್ಲಿ ಶಾಂತಿಯ ಅಗತ್ಯ ಹೆಚ್ಚಾಗುತ್ತದೆ. ದೇವಾಲಯಗಳು ಧ್ಯಾನದ ಸ್ಥಳವಾಗಬೇಕೇ ಹೊರತು ಯುದ್ಧದ ಮೈದಾನವಲ್ಲ. ಶಾಂತಿ ಪೂರ್ವಕ ಪರಿಹಾರಕ್ಕೆ ಜಾಗತಿಕ ನಾಯಕತ್ವ ಮುಂದಾಗಬೇಕು.

[…] ಪ್ರಿಯಾ ವಿಹಾರ್ ದೇವಾಲಯ ಹಿನ್ನೆಲೆಯಾದ ಯುದ… […]