ಬೆಂಗಳೂರು, ಜುಲೈ 25 – ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸುವದಕ್ಕಾಗಿ ₹1.25 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದ ಮಹಿಳಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ (PSI) ಸಾವಿತ್ರಿ ಬಾಯಿ ಅವರನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಬಂಧಿತ ಅಧಿಕಾರಿ: ಗೋವಿಂದರಾಜಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಾವಿತ್ರಿ ಬಾಯಿ ಎಂಬವರು ಬಂಧಿತ ಅಧಿಕಾರಿಯಾಗಿದ್ದಾರೆ. ದೂರುದಾರ ಎಚ್ಬಿಆರ್ ಲೇಔಟ್ ನಿವಾಸಿ ಮೊಹಮ್ಮದ್ ಯೂನಸ್ ಎಂಬವರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಘಟನೆ ಹಿನ್ನಲೆ: ಮೊಹಮ್ಮದ್ ಯೂನಸ್ ವಿರುದ್ಧ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಯುವತಿಯೊಬ್ಬರು ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ಯೂನಸ್ ಯುವತಿಯನ್ನು ಅವಾಚ್ಯವಾಗಿ ನಿಂದಿಸಿ, ದೂರು ವಾಪಸ್ ಪಡೆಯಲು ಒತ್ತಾಯಿಸಿದ್ದಾಗಿ ಹೇಳಲಾಗುತ್ತಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ‘ಬಿ ರಿಪೋರ್ಟ್’ ಸಲ್ಲಿಸಲು ಅಧಿಕಾರಿಯಾಗಿದ್ದ ಸಾವಿತ್ರಿ ಬಾಯಿ ₹1.25 ಲಕ್ಷ ಲಂಚವನ್ನು ಬೇಡಿದ್ರಂತೆ. ಯೂನಸ್ ಈ ಬಗ್ಗೆ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದ ಹಿನ್ನೆಲೆ, ದಾಳಿ ನಡೆಸಿದ ಅಧಿಕಾರಿಗಳು ಸಾವಿತ್ರಿಯನ್ನು ಲಂಚ ಸ್ವೀಕರಿಸುವ ವೇಳೆ ಸ್ಥಳದಲ್ಲೇ ಬಂಧಿಸಿದ್ದಾರೆ.
OTT ವೆಬ್ಸೈಟ್ ಹಾಗೂ ಅಪ್ಲಿಕೇಶನ್ಗಳ ವಿರುದ್ಧ ಎಮ್ಮೈಬಿಯಿ ಕ್ರಮ: 25 ಪ್ಲಾಟ್ಫಾರ್ಮ್ಗಳಿಗೆ ಪ್ರವೇಶ ನಿರ್ಬಂಧ
