ಬೆಂಗಳೂರು, ಆ.16 : ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀಶ್ರೀಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮೀಜಿಗಳು ತಡರಾತ್ರಿ 12:01ಕ್ಕೆ ಶ್ರೀಕ್ಷೇತ್ರದಲ್ಲಿ ಭೈರವೈಕ್ಯರಾದರು (ವಿಧಿವಶರಾದರು).
ಶಿಕ್ಷಣ ಹಾಗೂ ಆಧ್ಯಾತ್ಮಿಕ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ ಮಹಾಸ್ವಾಮೀಜಿಗಳು, ಮಠದ ಸ್ಥಾಪನೆ ಮಾಡಿ ಅನೇಕ ಸೇವಾ ಚಟುವಟಿಕೆಗಳನ್ನು ಕೈಗೊಂಡಿದ್ದರು.
ಮಹಾಸ್ವಾಮೀಜಿಗಳ ಅಂತಿಮ ದರ್ಶನವನ್ನು ಇಂದು (ಶನಿವಾರ, 16-08-2025) ಶ್ರೀಮಠದ ಆವರಣದಲ್ಲೇ ಭಕ್ತರಿಗಾಗಿ ಏರ್ಪಡಿಸಲಾಗಿದೆ.

ಮಧ್ಯಾಹ್ನ 3 ಗಂಟೆಗೆ ವಿವಿಧ ಧಾರ್ಮಿಕ ಮುಖಂಡರ ಸಾನ್ನಿಧ್ಯದಲ್ಲಿ ಪೀಠಾಧ್ಯಕ್ಷರ ನೇತೃತ್ವದಲ್ಲಿ ಅಂತಿಮ ವಿಧಿ ವಿಧಾನಗಳು ನೆರವೇರಲಿವೆ. ಮಹಾಸ್ವಾಮೀಜಿಗಳ ಅಂತ್ಯಕ್ರಿಯೆಯನ್ನು ಅವರ ಉತ್ತರಾಧಿಕಾರಿ ಪೀಠಾಧ್ಯಕ್ಷರಾದ ಶ್ರೀಶ್ರೀಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಗಳು ನೆರವೇರಿಸಲಿದ್ದಾರೆ.
