ನವದೆಹಲಿ: 2026ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ಗೆ ಭಾರತ ಆತಿಥ್ಯ ವಹಿಸಿಕೊಂಡಿದ್ದು, ಈ ಪ್ರತಿಷ್ಠಿತ ಕ್ರೀಡಾ ಕೂಟ ರಾಜಧಾನಿ ನವದೆಹಲಿಯಲ್ಲಿ ಜರುಗಲಿದೆ. ಇದು ವಿಶ್ವ ಚಾಂಪಿಯನ್ಷಿಪ್ನ 30ನೇ ಆವೃತ್ತಿ ಆಗಿದೆ.
2009ರಲ್ಲಿ ಹೈದರಾಬಾದ್ನಲ್ಲಿ ಆಯೋಜನೆಯಾದ ಬಳಿಕ 17 ವರ್ಷಗಳ ನಂತರ ಭಾರತಕ್ಕೆ ಮತ್ತೆ ವಿಶ್ವ ಚಾಂಪಿಯನ್ಷಿಪ್ ಮರಳುತ್ತಿರುವುದು ಭಾರತೀಯ ಕ್ರೀಡಾಭಿಮಾನಿಗಳಿಗೆ ಹರ್ಷದ ಸಂಗತಿಯಾಗಿದೆ.
ಭಾನುವಾರ ಪ್ಯಾರಿಸ್ನಲ್ಲಿ ನಡೆದ 29ನೇ ವಿಶ್ವ ಚಾಂಪಿಯನ್ಷಿಪ್ ಸಮಾರೋಪ ಸಮಾರಂಭದಲ್ಲಿ 2026ರ ಆತಿಥ್ಯದ ಘೋಷಣೆ ಮಾಡಲಾಯಿತು.
ಈ ಮೂಲಕ, ಭಾರತದ ಬ್ಯಾಡ್ಮಿಂಟನ್ ಪ್ರಗತಿ ಮತ್ತು ವಿಶ್ವ ವೇದಿಕೆಯಲ್ಲಿ ಅದರ ಬೆಳೆಯುತ್ತಿರುವ ಪ್ರಭಾವ ಮತ್ತೊಮ್ಮೆ ತೋರಿಕೊಡಲಿದೆ.
