ಬ್ಯಾಂಕಾಕ್: ಹಿಂದೂಗಳ ಆರಾಧ್ಯದೈವಗಳಲ್ಲಿ ಒಂದಾದ ಶಿವನ ದೇವಸ್ಥಾನದ ಮಾಲೀಕತ್ವದ ವಿವಾದದಿಂದಾಗಿ ಥಾಯ್ಲೆಂಡ್ ಮತ್ತು ಕಾಂಬೋಡಿಯಾ ದೇಶಗಳ ನಡುವೆ ತೀವ್ರ ಉದ್ವಿಗ್ನತೆ ಉಂಟಾಗಿ, ಗಡಿಯಲ್ಲಿ ಯುದ್ಧ ಪ್ರಾರಂಭವಾಗಿದೆ.
ಹಲವಾರು ದಶಕಗಳಿಂದ ಗಡಿವಿವಾದ ಎದುರಿಸುತ್ತಿರುವ ಈ ದೇಶಗಳ ನಡುವೆ, 11ನೇ ಶತಮಾನದ ಪ್ರೀ ವಿಯರ್ (Preah Vihear) ದೇವಾಲಯದ ಸುತ್ತಲಿನ ಪ್ರದೇಶದ ಹಕ್ಕು ಕುರಿತ ಸಮಸ್ಯೆಯೇ ಮುಖ್ಯ ಕಾರಣವಾಗಿದೆ.
ಈ ದೇವಾಲಯವು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದ್ದು, ಎರಡೂ ದೇಶಗಳಿಗೆ ಸಾಂಸ್ಕೃತಿಕ ಹಾಗೂ ಐತಿಹಾಸಿಕವಾಗಿ ಅಪಾರ ಮಹತ್ವ ಹೊಂದಿದೆ. ದೇವಾಲಯದ ಹಕ್ಕಿಗಾಗಿ ಎರಡೂ ದೇಶಗಳು ಹಲವು ಬಾರಿ ಮಾತುಕತೆ ನಡೆಸಿದರೂ ಯಾವುದೇ ಸ್ಪಷ್ಟ ಪರಿಹಾರ ಕಂಡುಕೊಳ್ಳಲಾಗಿಲ್ಲ.
ಇತ್ತೀಚಿನ ದಿನಗಳಲ್ಲಿ ಗಡಿಯ ಸೈನಿಕ ಚಟುವಟಿಕೆ ಹೆಚ್ಚಾಗಿದ್ದು, ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಭೀತಿ ವ್ಯಕ್ತವಾಗಿದೆ. ಅಂತಾರಾಷ್ಟ್ರೀಯ ಸಮುದಾಯವು ಶಾಂತಿಯುತ ಮಾತುಕತೆಯ ಮೂಲಕ ವಿವಾದ ಬಗೆಹರಿಸಲು ಕರೆ ನೀಡಿದೆ.
