ಟಿ.ನರಸೀಪುರ : ಇನ್ಸ್ ಪಕ್ಟರ್ ಧನಂಜಯ ಮತ್ತು ಸಬ್ ಇನ್ಸ್ ಪೆಕ್ಟರ್ ಜಗದೀಶ್ ದೂಳ್ ಶೆಟ್ಟಿ ಜನರ ರಕ್ಷಕರ ಬದಲಾಗಿ ಬಕ್ಷಕರಂತೆ ಕೆಲಸ ನಿರ್ವಹಿಸುತ್ತಿದ್ದಾರೆ.ರಕ್ಷಣೆ ಬಯಸಿ ಠಾಣೆಗೆ ಬರುವ ಸಾಮಾನ್ಯ ಜನರಿಗೆ ತಾವೇ ಸ್ವತಃ ಶಿಕ್ಷೆ ನೀಡುತ್ತಿದ್ದಾರೆ.ಠಾಣೆಯು ಸರ್ವಾಧಿಕಾರಿಗಳ ಕೇಂದ್ರವಾಗಿದೆ ಎಂದು ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಗಂಭೀರವಾಗಿ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ವರುಣ ಮತ್ತು ಟಿ.ನರಸೀಪುರ ವಿಧಾನಸಭಾ ಕ್ಷೇತ್ರಗಳು ಅವಳಿ ಜವಳಿ ಕ್ಷೇತ್ರದಂತಿದ್ದು, ಒಂದೇ ತಾಲ್ಲೂಕಿನಲ್ಲಿ ಮಿಳಿತಗೊಂಡು ಜನಪರ ನಿಲುವುಗಳುಳ್ಳ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಕ್ಷೇತ್ರಕ್ಕೆ ಒಳಪಟ್ಟಿದೆ.ಎಂದೂ ಕಂಡರಿಯದಂತಹ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುವ, ಜನರ ಆಶೋತ್ತರಗಳಿಗೆ ಸ್ಪಂದಿಸುವ, ಅಭದ್ರತೆಯಲ್ಲಿರುವ ಜನರಿಗೆ ಭದ್ರತೆ ಒದಗಿಸುವ, ಜನಸ್ನೇಹಿ ಅಧಿಕಾರಿಗಳು ಕಂದಾಯ ಇಲಾಖೆ, ಪೌರಾಡಳಿತ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಒಳಗೊಂಡಂತೆ ಯಾವುದೇ ಇಲಾಖೆಯಲ್ಲಿ ಇಲ್ಲದಿರುವುದು ನನ್ನನ್ನು ಸೇರಿದಂತೆ ಸಾರ್ವಜನಿಕ ರಲ್ಲಿ ಬೇಸರ ತರಿಸಿದೆ.
ಅದರಲ್ಲಿಯೂ ವಿಶೇಷವಾಗಿ ಎರಡೂ ಕ್ಷೇತ್ರಗಳನ್ನು ಪ್ರತಿನಿಧಿಸುವ ಟಿ.ನರಸೀಪುರ ಪೊಲೀಸ್ ಠಾಣೆಗೆ ದಕ್ಷ ಮತ್ತು ಪ್ರಾಮಾಣಿಕ ಹೆಸರಿನಲ್ಲಿ ಬಂದಿರುವ ಇನ್ಸ್ ಪಕ್ಟರ್ ಧನಂಜಯ ಮತ್ತು ಸಬ್ ಇನ್ಸ್ ಪೆಕ್ಟರ್ ಜಗದೀಶ್ ದೂಳ್ ಶೆಟ್ಟಿ ಜನರ ರಕ್ಷಕರ ಬದಲಾಗಿ ಬಕ್ಷಕರಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಇವರುಗಳು ಬಂದ ನಂತರ ತಾಲೂಕಿನಲ್ಲಿ ಅಕ್ರಮ ಇಸ್ಪೀಟ್ ದಂತೆ, ಅಕ್ರಮ ಮರಳು ಗಣಿಗಾರಿಕೆ, ಅಕ್ರಮ ಮಧ್ಯ ಮಾರಾಟ, ಬೖಕ್ ಮತ್ತು ಸರಗಳ್ಕತನ ಪ್ರಕರಣಗಳು, ಈ ಹಿಂದಿಗಿಂತಲೂ ದ್ವಿಗುಣಗೊಂಡಿವೆ. ಎರಡು ವರ್ಷಗಳಿಗಿಂತಲೂ ಹೆಚ್ಛು ಕಾಲದಿಂದ ಒಂದೇ ಸ್ಥಳದಲ್ಲಿರುವ ಇವರು ಹಣ ದಂದೆ ಮಾಡುವ ಕೇಂದ್ರವನ್ನಾಗಿಸಿಕೊಂಡಿದ್ದಾರೆ. ರಕ್ಷಣೆ ಬಯಸಿ ಠಾಣೆಗೆ ಬರುವ ಸಾಮಾನ್ಯ ಜನರಿಗೆ ತಾವೇ ಸ್ವತಃ ಶಿಕ್ಷೆ ನೀಡುತ್ತಿದ್ದಾರೆ. ಠಾಣೆಯು ಸರ್ವಾಧಿಕಾರಿ ಗಳ ಕೇಂದ್ರವಾಗಿದೆ. ಸಾರ್ವಜನಿಕರಿಗೆ, ಮುಖಂಡರುಗಳಿಗೆ ಮೂರು ಕಾಸಿನ ಬೆಲೆಯು ಸಹ ಇರುವುದಿಲ್ಲ ಎಂದು ದೂರಿದರು.
ಇತ್ತೀಚೆಗೆ ತಮದೇ ಕ್ಷೇತ್ರಗಳ ತುಂಬಲ, ಬೆನಕನಹಳ್ಳಿ, ಕನ್ನಹಳ್ಳಿ, ಬನ್ನಹಳ್ಳಿ, ಗೆಜ್ಜಗನಹಳ್ಳಿ ಇನ್ನಿತರ ಗ್ರಾಮಗಳ ಸಣ್ಣ ಪುಟ್ಟ ತಪ್ಪು ಮಾಡಿರುವ ದಲಿತ ಯುವಕರಿಗೆ, ಕೆಲವು ಕಡೆ ಯಾವುದೆ ತಪ್ಪು ಮಾಡದ ಯುವಕರಿಗೆ, ಯಾವುದೇ ದೂರು ಇರದಿದ್ದರೂ, ಕಾನೂನೂ ಬಾಹಿರವಾಗಿ ಠಾಣೆಗೆ ಕರೆತಂದು ಮನಸೋಹಿಚ್ಚೆ ಮಾರಣಾಂತಕವಾಗಿ ಹೊಡೆದಿರುತ್ತಾರೆ. ಅದರಲ್ಲಿಯೂ ವಿಶೇಷವಾಗಿ ಇದೇ ತಿಂಗಳು ಕಳೆದ ಐದನೇ ತಾರೀಕು ತುಂಬಲ ಗ್ರಾಮದ ಐವರು ಯುವಕರು, ಮಳವಳ್ಳಿ ತಾಲ್ಲೂಕು,ಕಲ್ಕುಣಿ ಗ್ರಾಮದ ಐವರು ಯುವಕರನ್ನು ಠಾಣೆಗೆ ಕರೆತಂದು ಯಾವುದೇ ದೂರು ಇರದಿದ್ದರೂ, ಹಣ ಪಡೆಯುವುದಲ್ಲದೆ, ಮಾರಣಾಂತಿಕವಾಗಿ ಹಲ್ಲೆ ಮಾಡಿರುವುದು, ಜೊತೆಗೆ ಅದೇ ದಿನ ಸುಳ್ಳು ದೂರು ದಾಖಲಿಸಿರುವುದು, ಮತ್ತು ನೊಂದ ಯುವಕರು ಹಿರಿಯ ಅಧಿಕಾರಿಗಳಿಗೆ ಚಿಕಿತ್ಸೆ ಪಡೆದು ದೂರು ನೀಡಿದರೂ ಪ್ರಕರಣವನ್ನು ದಾಖಲಿಸದೆ, ಹಲ್ಲೆಗೊಳಗಾಗಿರುವ ಯುವಕರನ್ನೆ ಬೆದರಿಸಿ,ಭಯಬೀತಿ ಗೊಳಿಸಿ, ಆಸೆ ಆಮಿಷಗಳನ್ನೊಡ್ಡಿ ಮೂರ್ನಾಲ್ಕು ದಿನಗಳಿಂದ ಪ್ರಕರಣವನ್ನು ಮುಚ್ಚಿಹಾಕಲೂ ಯತ್ನಿಸುತ್ತಿದ್ದಾರೆ. ಈ ವಿಷಯ ಮಾಧ್ಯಮಗಳಲ್ಲಿ ರಾಜ್ಯ ಮಟ್ಟದ ಸುದ್ದಿ ಯಾಗಿರುತ್ತದೆ.
ಹಾಗಾಗಿ ತಪ್ಪಿತಸ್ಥ ಪೊಲೀಸ್ ಇನ್ಸ್ ಪೆಕ್ಟರ್ ಧನಂಜಯ, ಸಬ್ ಇನ್ಸ್ ಪೆಕ್ಟರ್ ಜಗದೀಶ್ ದೂಳ್ ಶೆಟ್ಟಿ ರವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ಅಮಾನತ್ತಿನಲ್ಲಿಟ್ಟು ಇವರ ಅವಧಿಯ ಎಲ್ಲಾ ಪ್ರಕರಣಗಳನ್ನು ಸಮಗ್ರ ತನಿಖೆ ನಡೆಸಬೇಕು. ಅಮಾಯಕರ ಮೇಲೆ ದಾಖಲಿಸಿರುವ ಸುಳ್ಳು ದೂರುಗಳನ್ನು ವಜಾಗೊಳಿಸಬೇಕು, ಗಾಯಾಳು ಯುವಕರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡುತ್ತೇನೆಂದರು
ಎಂ.ನಾಗೇಂದ್ರಕುಮಾರ್
