ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಸೈಬರ್ ಕಮಾಂಡ್ ಸೆಂಟರ್ ಸ್ಥಾಪನೆಯಾಗಿದೆ.
ಸೆಪ್ಟೆಂಬರ್ 8ರಂದು ಬೆಂಗಳೂರಿನಲ್ಲಿ ಸೈಬರ್ ಅಪರಾಧಗಳನ್ನು ತಡೆಯುವ ಉದ್ದೇಶದಿಂದ ಈ ಕೇಂದ್ರವನ್ನು ರಾಜ್ಯ ಸರ್ಕಾರ ಉದ್ಘಾಟಿಸಿದೆ.
ಸೈಬರ್ ಕಮಾಂಡ್ ಸೆಂಟರ್ ಮೂಲಕ ದೇಶ-ವಿದೇಶಗಳಿಂದ ನಡೆಯುವ ಸೈಬರ್ ಅಪರಾಧಗಳನ್ನು ನಿಗಾವಹಿಸಿ ತಕ್ಷಣ ಕ್ರಮ ಕೈಗೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಸೈಬರ್ ದಾಳಿಗಳನ್ನು ತಡೆಯಲು, ವಂಚನೆ ಪ್ರಕರಣಗಳನ್ನು ಪತ್ತೆಹಚ್ಚಲು ಹಾಗೂ ಡಿಜಿಟಲ್ ಭದ್ರತೆಯನ್ನು ಬಲಪಡಿಸಲು ಸಾಧ್ಯವಾಗಲಿದೆ.
ಈ ಕೇಂದ್ರವು ಅತೀ ಆಧುನಿಕ ತಂತ್ರಜ್ಞಾನದಿಂದ ಸಜ್ಜುಗೊಂಡಿದ್ದು, ಸೈಬರ್ ಅಪರಾಧ ತನಿಖೆ, ತ್ವರಿತ ಪ್ರತಿಕ್ರಿಯೆ ಹಾಗೂ ದತ್ತಾಂಶ ರಕ್ಷಣೆಗೆ ವಿಶೇಷ ತಂತ್ರಜ್ಞರ ತಂಡವನ್ನು ಹೊಂದಿದೆ. ರಾಜ್ಯದ ಸೈಬರ್ ಸುರಕ್ಷತೆಯನ್ನು ಬಲಪಡಿಸಲು ಇದು ಪ್ರಮುಖ ಹೆಜ್ಜೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
