ಕೆ.ಆರ್.ಪೇಟೆ: ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಎಲ್ಲರೂ ಕೈಜೋಡಿಸುವುದರ ಜೊತೆಯಲ್ಲಿ ಗುಣಮಟ್ಟದ ಕಾಮಗಾರಿಗಳು ನಡೆಯುವಂತೆ ನೋಡಿಕೊಳ್ಳಬೇಕು ಎಂದು ಶಾಸಕ ಹೆಚ್.ಟಿ ಮಂಜು ಹೇಳಿದರು.
ತಾಲೂಕಿನ ಕಸಬಾ ಹೋಬಳಿಯ ಕರೋಟಿ ಕೋಮನಹಳ್ಳಿ ಗ್ರಾಮಗಳಲ್ಲಿ ತಮ್ಮ ಶಾಸಕರ ಅನುದಾನದಲ್ಲಿ ಹತ್ತು ಲಕ್ಷರೂ ವೆಚ್ಚದಲ್ಲಿ ಸಿಮೆಂಟ್ ಹಾಗೂ ಹರಿಹರಪುರದಿಂದ ಕೃಷ್ಣಪುರ ಸಂಪರ್ಕಿಸುವ ರಸ್ತೆ ಮುಖ್ಯ ರಸ್ತೆಗೆ ಪಿಡಬ್ಲ್ಯೂಡಿ ಇಲಾಖೆಯಿಂದ ಸುಮಾರು 1. 20 ಕೋಟಿ ವೆಚ್ಚದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.ನಾನು ಕ್ಷೇತ್ರಾಧ್ಯಂತ ವಿವಿಧ ಕಾಮಗಾರಿಗಳನ್ನು ಪ್ರಾರಂಭಿಸಿದ್ದೇನೆ ಸಾರ್ವಜನಿಕರು ಅಭಿವೃದ್ಧಿ ಕೆಲಸಗಳಿಗೆ ಮುಕ್ತ ಮನಸ್ಸಿನಿಂದ ಸಹಕಾರ ನೀಡಿದರೆ ಮಾತ್ರ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯಲು ಸಾಧ್ಯ.ಗ್ರಾಮೀಣ ಭಾಗದ ಪ್ರಮುಖ ರಸ್ತೆಗಳು ಹದಗಿಟ್ಟಿರುವ ರಸ್ತೆಗಳ ಅಭಿವೃದ್ಧಿಗಾಗಿ ಗುದ್ದಲಿ ಪೂಜೆ ನೆರವೇರಿಸುತಿದ್ದೇವೆ ಗ್ರಾಮಸ್ಥರ ಸಹಕಾರ ಬಹಳ ಮುಖ್ಯ.ಕಾಮಗಾರಿ ಗುಣಮಟ್ಟದ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಪ್ರತಿಯೊಂದು ಕಾಮಗಾರಿ ಪ್ರಗತಿಯನ್ನು ಖುದ್ದಾಗಿ ಪರೀಕ್ಷಿಸಿ ಬಿಲ್ಲುಗಳ ಮಂಜೂರಾತಿಗೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು.
ಗ್ರಾ.ಪಂ ಮಾಜಿ ಅಧ್ಯಕ್ಷ ಮಾಕವಳ್ಳಿ ಮಂಜೇಗೌಡ ಮಾತನಾಡಿ ಇಂದು ತಾಲೂಕಿನಲ್ಲಿ ಹಂತ-ಹಂತವಾಗಿ ಕ್ಷೇತ್ರದ ಎಲ್ಲ ಗ್ರಾಮಗಳು ಅಭಿವೃದ್ಧಿ ಹೊಂದುತ್ತಿವೆ. ಇವರ ಸಹಕಾರದಿಂದ ನಮ್ಮ ಗ್ರಾಪಂ ವ್ಯಾಪ್ತಿಗೆ ಒಳಪಡುವ ಎಲ್ಲ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರುಗಳಾದ ಎಂ.ಆರ್ ಮಂಜೇಗೌಡ, ಎಂ.ಟಿ ಮಂಜೇಗೌಡ,ಕರೋಟಿ ಅನಿಲ್, ಕೋಮನಹಳ್ಳಿ ಜಗದೀಶ್,ಮುಖಂಡರಾದ ಪಟೇಲ್ ತಮ್ಮೆಗೌಡ,ಕರೋಟಿ ಶಿವರಾಮೇಗೌಡ, ಅಣ್ಣೆಗೌಡ,ರಾಮಚಂದ್ರೆಗೌಡ, ದೇವರಾಜೇಗೌಡ, ವಾಸುದೇವ್, ತಿಂಮೇಗೌಡ, ರಾಮೇಗೌಡ,ಯೋಗೇಶ್,ಕೃಷ್ಣಪುರ ಹರೀಶ್,ನಾಗೇಶ್, ಸುಕಂದರಾಜು,ಕರೋಟಿ ವಿಜಿ ಕುಮಾರ್, ಹೆಗ್ಗಡಹಳ್ಳಿ ಅಲೋಕ್ ಕುಮಾರ್,ಕೋಮನಹಳ್ಳಿ ರೋಬೊ ಮಂಜೇಗೌಡ ಮಾಕವಳ್ಳಿ ಗ್ರಾ.ಪಂ ಪಿಡಿಓ ಶೈಲಜಾ, ಯುವ ಮುಖಂಡ ಅನಿಲ್, ಚಲುವರಾಜು,ಮಧು,ರಾಹುಲ್, ಸೇರಿದಂತೆ ಗ್ರಾಮಸ್ಥರು ಇದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
