ಹಾಸನ : ರೆಡ್ ಕ್ರಾಸ್ ಸಂಸ್ಥೆ ಚನ್ನರಾಯಪಟ್ಟಣ ತಾಲ್ಲೂಕು ಘಟಕದ ಸೇವೆಯನ್ನು ಗುರುತಿಸಿ ಜಿಲ್ಲಾ ಮಟ್ಟದ ಅತ್ಯುತ್ತಮ ಸೇವಾ ಶ್ರೇಷ್ಠತೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತ್ತು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ ಹಾಸನ ವತಿಯಿಂದ ಜಿಲ್ಲಾಧಿಕಾರಿಗಳಾದ ಶ್ರೀಮತಿ ಲತಾ ಕುಮಾರಿ ರವರ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಮಹಾಸಭೆಯನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮವನ್ನುಹಾಸನ ಜಿಲ್ಲಾಧಿಕಾರಿಗಳಾದ ಶ್ರೀಮತಿ ಲತಾ ಕುಮಾರಿ ಹಾಗೂ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳಾದ ಶ್ರೀಮತಿ ಪೂರ್ಣಿಮಾ ಮತ್ತು ರೆಡ್ ಕ್ರಾಸ್ ಸಂಸ್ಥೆಯ ಮುಖ್ಯಸ್ಥರಾದ ಎಚ್ ಪಿ ಮೋಹನ್ ಉದ್ಘಾಟಿಸಿದರು,
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಮತಿ ಲತಾ ಕುಮಾರಿ ಮಾತನಾಡಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ದೇಶಾದ್ಯಂತ ಅತ್ಯುತ್ತಮ ಸೇವೆ ಸಲ್ಲಿಸುತ್ತಿದೆ ನಮ್ಮ ದೇಶದಲ್ಲಿ ಎರಡು ಬಾರಿ ನೋಬೆಲ್ ಪ್ರಶಸ್ತಿ ಪಡೆದ ಏಕೈಕ ಸಂಸ್ಥೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಈ ಸಂಸ್ಥೆಯು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಸ್ಥಾಪಿತಗೊಂಡಿರುತ್ತದೆ ಹಾಗೂ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಈ ಸಂಸ್ಥೆಗೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ ಅದೇ ನಿಟ್ಟಿನಲ್ಲಿ ಇಂದು ನಾನು ಹಾಸನ ಜಿಲ್ಲೆಯ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವುದು ನನಗೆ ತುಂಬಾ ಸಂತೋಷವನ್ನು ನೀಡಿದೆ, ನನ್ನ ವೃತ್ತಿ ಜೀವನದಲ್ಲಿ ಹಲವಾರು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿರುತ್ತೇನೆ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಹಾಸನ ಜಿಲ್ಲೆಯಲ್ಲಿ ರೆಡ್ ಕ್ರಾಸ್ ಸಂಸ್ಥೆಯು ಅತ್ಯುತ್ತಮ ಸೇವೆ ಸಲ್ಲಿಸುತ್ತಿದೆ. ಸಮಾಜಪರ, ಸಾಮಾಜಿಕ ಕಳಕಳಿಯನ್ನು ಅಳವಡಿಸಿಕೊಂಡು ಸಾರ್ವಜನಿಕರಿಗೆ ಹಾಗೂ ಸಮಾಜಕ್ಕೆ ಉತ್ತಮ ಸೇವೆಯನ್ನು ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದರು. ನಮ್ಮ ಹಾಸನ ಜಿಲ್ಲೆಯಲ್ಲಿ ಒಟ್ಟು 07 ತಾಲ್ಲೂಕಿನಲ್ಲಿ ತನ್ನ ಸೇವೆಯನ್ನು ಪ್ರಾರಂಭಿಸಿ ಜಿಲ್ಲೆಯಾದ್ಯಂತ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ ಎಂದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಹಾಸನ ಜಿಲ್ಲಾ ಉಪಾಧ್ಯಕ್ಷರಾದ ಬಿ ಆರ್ ಪೂರ್ಣಿಮಾ ಮಾತನಾಡಿ ಹಾಸನ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ತಾಲ್ಲೂಕು ರೆಡ್ ಕ್ರಾಸ್ ಘಟಕಗಳ ಸೇವೆಯನ್ನು ಪರಿಗಣಿಸಿ ಉತ್ತಮ ಸೇವೆ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿರುವ ತಾಲ್ಲೂಕನ್ನು ಗುರುತಿಸಿ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ 2024- 2025ನೇ ಸಾಲಿನ ಪ್ರಥಮ ಸ್ಥಾನ ಪಡೆದ ಸಮಿತಿಗೆ ಉತ್ತಮ ಕಾರ್ಯ ಚಟುವಟಿಕೆ ಶ್ರೇಷ್ಠತೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಅದೇ ನಿಟ್ಟಿನಲ್ಲಿ ಇಂದು ನಮ್ಮ ಜಿಲ್ಲೆಯಲ್ಲಿ ಚನ್ನರಾಯಪಟ್ಟಣ ತಾಲ್ಲೂಕಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಅತ್ಯುತ್ತಮ ಕಾರ್ಯಕ್ರಮಗಳನ್ನು ಮತ್ತು ಹಲವಾರು ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ರಸ್ತೆ ಸುರಕ್ಷತೆ ಕಾರ್ಯಕ್ರಮ, ಹದಿ ಹರೆಯದ ಹೆಣ್ಣು ಮಕ್ಕಳಿಗೆ ಆರೋಗ್ಯ ಅರಿವು ಕಾರ್ಯಕ್ರಮ, ಕಣ್ಣಿನ ತಪಾಸಣೆ, ಕ್ಯಾನ್ಸರ್ ತಪಾಸಣೆ ಹಾಗೂ ಇತರೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿರುವುದರಿಂದ ಈ ವರ್ಷ ನಮ್ಮ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ನೀಡಿ ತಾಲ್ಲೂಕು ಮಟ್ಟದ ಅತ್ಯುತ್ತಮ ಸೇವೆ ನೀಡಿರುವ ತಾಲ್ಲೂಕು ಇಂದು ಘೋಷಿಸಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಗಳಾದ ಎಚ್ ಜಿ ಭರತ್ ಕುಮಾರ್ ರವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೋಹನ್ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಎಲ್ಲರ ಮೆಚ್ಚುಗೆ ಹಾಗೂ ಸಹಕಾರದಿಂದ ಜಿಲ್ಲೆಯಾದ್ಯಂತ ಉತ್ತಮ ಸೇವೆ ಸಲ್ಲಿಸುತ್ತಿದೆ, ನಮ್ಮ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ತಾಲ್ಲೂಕಿನಲ್ಲಿ ತಾಲ್ಲೂಕು ರೆಡ್ ಕ್ರಾಸ್ ಘಟಕವನ್ನು ಸ್ಥಾಪಿಸಿರುತ್ತೇವೆ ಈ ನಿಟ್ಟಿನಲ್ಲಿ ಎಲ್ಲಾ ತಾಲ್ಲೂಕಿನಲ್ಲೂ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿದೆ,ಈ ವರ್ಷ ವಿಶೇಷವಾಗಿ ಚನ್ನರಾಯಪಟ್ಟಣದ ತಾಲ್ಲೂಕು ರೆಡ್ ಕ್ರಾಸ್ ಘಟಕವು ಅತ್ಯುತ್ತಮ ಸೇವೆ ಹಾಗೂ ಶ್ರೇಷ್ಠ ಪ್ರಶಸ್ತಿಯನ್ನು ಸ್ವೀಕರಿಸಿರುವುದು ಹೆಮ್ಮೆಯ ವಿಷಯ ಚನ್ನರಾಯಪಟ್ಟಣದ ತಾಲ್ಲೂಕು ರೆಡ್ ಕ್ರಾಸ್ ಘಟಕವು ಸುಮಾರು ಏಳು ಸಾವಿರಕ್ಕಿಂತ ಹೆಚ್ಚು ಸಾರ್ವಜನಿಕರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಿರುವುದು ಕಂಡುಬಂದಿದ್ದು, ಇವರ ಸೇವೆಗೆ ಇಂದು ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ಹಾಗೂ ರಾಜ್ಯಮಟ್ಟದಿಂದ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ ಮತ್ತು ಚನ್ನರಾಯಪಟ್ಟಣ ತಾಲ್ಲೂಕು ರೆಡ್ ಕ್ರಾಸ್ ಘಟಕವು ಪ್ರಥಮ ಸ್ಥಾನ ಸ್ವೀಕರಿಸಿರುವುದು ಎಲ್ಲಾ ತಾಲ್ಲೂಕಿಗೂ ಮಾದರಿಯಾಗಿದೆ ಎಂದು ತಿಳಿಸಿದರು. ರೆಡ್ ಕ್ರಾಸ್ ಸಂಸ್ಥೆ ಚನ್ನರಾಯಪಟ್ಟಣ ತಾಲ್ಲೂಕು ಘಟಕದ ಸಭಾಪತಿಗಳಾದ ಭರತ್ ಕುಮಾರ್, ಕಾರ್ಯದರ್ಶಿಗಳಾದ ಜಬಿವುಲ್ಲಾ ಬೇಗ್, ಖಜಾಂಚಿಗಳಾದ ಕಿಶೋರ್ ಕುಮಾರ್, ಚನ್ನರಾಯಪಟ್ಟಣ ತಾಲ್ಲೂಕು ರೆಡ್ ಕ್ರಾಸ್ ಘಟಕದ ನಿರ್ದೇಶಕರು ಹಾಗೂ ಸದಸ್ಯರುಗಳಿಗೆ ಧನ್ಯವಾದಗಳು ತಿಳಿಸುವುದರ ಜೊತೆಗೆ ಇನ್ನೂ ತಾಲ್ಲೂಕಿನಲ್ಲಿ ಹೆಚ್ಚು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲು ಸಹಕರಿಸಿ ಹಾಗೂ ಸಮಾಜಕ್ಕೆ ಉತ್ತಮ ಸೇವೆಯನ್ನು ಕೊಡುಗೆಯಾಗಿ ನೀಡಿ ಎಂದು ತಿಳಿಸಿದರು,
ಈ ಕಾರ್ಯಕ್ರಮದಲ್ಲಿ
ಶ್ರೀ ಹೆಚ್ .ಪಿ ಮೋಹನ್, ಡಾವೈ .ಎಸ್ ವೀರಭದ್ರಪ್ಪ, ಶ್ರೀ ಶಬೀರ್ ಅಹಮದ್, ಶ್ರೀ ಹೆಚ್. ಡಿ ಜಯೇಂದ್ರ ಕುಮಾರ್,ನಿರ್ದೇಶಕರುಗಳಾದ ಹೆಚ್.ಎಂ ಶಿವಣ್ಣ , ಹೆಚ್. ಡಿ ಕುಮಾರ್, ಶ್ರೀ ಅಮ್ಜದ್ ಖಾನ್, ಡಾ. ಪ್ರಸನ್ನ ರಾವ್, ಡಾ. ಎ ಸಾವಿತ್ರಿ,
ಶ್ರೀಮತಿ ಕೆ.ಟಿ ಜಯಶ್ರೀ, ಶ್ರೀ ಸುಬ್ಬಸ್ವಾಮಿ, ಶ್ರೀ ಅನುಗನಾಳು ಕೃಷ್ಣಮೂರ್ತಿ, ಶ್ರೀ ಹೆಚ್.ಆರ್ ಮಂಜಪ್ಪ ಗೌಡ, ಶ್ರೀ ಎಸ್. ಎಸ್ ಪಾಷಾ, ಡಾ. ಭಾರತಿ ರಾಜಶೇಖರ್, ಶ್ರೀಮತಿ ನಿರ್ಮಲ,ಶ್ರೀ ಮಹಾವೀರ್ ಬನ್ಸಾಲಿ, ಶ್ರೀ ಬಿ. ಆರ್ ಉದಯ್ ಕುಮಾರ್, ಶ್ರೀ ಜಯಪ್ರಕಾಶ್,
ಡಾ. ಅಬ್ದುಲ್ ಬಶೀರ್ ವಿ.ಕೆ ಡಾ. ತೇಜಸ್ವಿ, ಶ್ರೀ ಗಿರೀಶ್ ಎಂ. ವಿ, ಶ್ರೀ ಭೀಮರಾಜು ಶ್ರೀ ಗಿರಿ ಗೌಡ , ಶ್ರೀ ಸುರೇಶ್ ಪಾಳ್ಯ, ಡಾ. ಕಾವ್ಯಶ್ರೀ ಜೆ ಡಾ. ಹೇಮಲತಾ ಪಟ್ಟಾಭಿಡಾ. ರಂಗಲಕ್ಷ್ಮಿ ಆರ್ .ಎನ್ ಶ್ರೀಮತಿ ಮಮತಾ ಪಾಟೀಲ್ಶ್ರೀಮತಿ ನಿಶ್ಚಿತ ಕುಮಾರಿ, ಶ್ರೀ ಸುರೇಶ್,ಶ್ರೀ ವಿ. ಎ ನಂಜುಂಡಸ್ವಾಮಿ,ಶ್ರೀ ಆರ್. ಬಿ ಪುಟ್ಟೇಗೌಡ, ಶ್ರೀಮತಿ ಶಾರದ ಗುರುಮೂರ್ತಿ,ಶ್ರೀ ಭರತ್ ಕುಮಾರ್,ಶ್ರೀ ವೈ .ಎಸ್ ಸಿದ್ದೇಗೌಡ, ಶ್ರೀ ಕಾಂತರಾಜು,
ಜಿಲ್ಲೆಯ ಎಲ್ಲಾ ನಿರ್ದೇಶಕರು ಸದಸ್ಯರು ಹಾಗೂ ಹಲವಾರು ಸಂಘ ಸಂಸ್ಥೆಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಪತ್ರಿಕಾ ಮಿತ್ರರು ಹಾಗೂ ಸಾರ್ವಜನಿಕರು ಸೇರಿದಂತೆ ಇತರ ಹಾಜರಿದ್ದರು.
ವರದಿ : ಮಂಜುನಾಥ್ ಐ ಕೆ
