ಚನ್ನರಾಯಪಟ್ಟಣ: ಕನ್ನಡ ಸಾಹಿತ್ಯ ಪರಿಷತ್ ಮತ್ತು ಮಕ್ಕಳ ಸಾಹಿತ್ಯ ಪರಿಷತ್ ಹಾಗೂ ಪ್ರತಿಮಾ ಟ್ರಸ್ಟ್ ವತಿಯಿಂದ ಹಿರಿಯ ಸಾಹಿತಿ ಡಾಕ್ಟರ್ ಎಸ್ ಎಲ್ ಭೈರಪ್ಪರವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು .
ಪಟ್ಟಣದ ಕೆ ಆರ್ ಸರ್ಕಲ್ ನಲ್ಲಿ ನಡೆದ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಸಿ ಎಸ್ ಪುಟ್ಟೇಗೌಡ ಕನ್ನಡ ಸಾಹಿತ್ಯ ಲೋಕದ ಮೇರು ಪರ್ವತವನ್ನು ಕಳೆದುಕೊಂಡಂತಾಗಿದೆ. ಇಂಥ ಸರಸ್ವತಿ ಪುತ್ರರು ನಮ್ಮ ತಾಲೂಕಿನವರು ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ ಇವರ ಹಲವಾರು ಕೃತಿಗಳು ಓದುಗರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿವೆ ಇವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಿ ಕೆ ಕುಸುಮಾ ಮಾತನಾಡಿ ನಮ್ಮ ತಾಲೂಕಿನ ಸಾಹಿತ್ಯ ಲೋಕದ ದಿಗ್ಗಜರಾದ ಭೈರಪ್ಪ ರವರನ್ನು ಕಳೆದುಕೊಂಡಿರುವುದು ತುಂಬ ದುಃಖಕರ ವಿಚಾರವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಇಂಥ ಕ್ಷೇತ್ರವನ್ನು ಕಳೆದುಕೊಂಡು ಸಾಹಿತ್ಯ ಲೋಕವು ಬಡವಾಗಿದೆ ಎಂದರು. ಈ ವೇಳೆ ತಹಶೀಲ್ದಾರ್ ಶಂಕರಪ್ಪ, ಮಾಜಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ಅಣತಿ ಆನಂದ್,ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಚ್ಎನ್ ಲೋಕೇಶ್, ಸಂಘಟನಾ ಕಾರ್ಯದರ್ಶಿ ಜಬಿವುಲ್ಲಾ, ಯಶೋಧಾ ಜೈನ್, ಮಕ್ಕಳ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಸಿಎನ್ ಅಶೋಕ್, ಪದಾಧಿಕಾರಿಗಳಾದ ಸಿದ್ದೇಶ್, ಮಹಾದೇವ್, ಬೆಳಗುಲಿ ಕೆಂಪಯ್ಯ, ಅಬ್ದುಲ್ ಕಲಾಂ ಸಂಘಟನೆಯ ಅಧ್ಯಕ್ಷರಾದ ಮುನ್ನಾವರ್ ಪಾಷಾ ಹಾಗೂ ಕನ್ನಡ ಸಂಘಟನೆಯ ಮುಖಂಡರಾದ ಸಿ ಜಿ ಸೋಮಶೇಖರ್,ಗಾಯಕ ಮಂಜು, ಗಾಯಕ ಪ್ರೇಮ್, ಭರತ್ ಗೌಡ, ಕನ್ನಡ ವಾಸು,ಜನಪ್ರತಿನಿಧಿಗಳು, ಸಾಹಿತಿ ಭೈರಪ್ಪ ಅಭಿಮಾನಿಗಳು ಹಾಜರಿದ್ದರು.
