ನವದೆಹಲಿ: ಕೈಗಾರಿಕಾ ರೊಬೊಗಳ ಮಾರಾಟದಲ್ಲಿ ಭಾರತ ಹೊಸ ಇತಿಹಾಸ ನಿರ್ಮಿಸಿದೆ. ಇತ್ತೀಚಿನ ವರದಿ ಪ್ರಕಾರ, ಭಾರತದಲ್ಲಿ ಒಟ್ಟು 9,120 ಕೈಗಾರಿಕಾ ರೊಬೊಗಳನ್ನು ಕಾರ್ಖಾನೆಗಳಲ್ಲಿ ಅಳವಡಿಸಲಾಗಿದೆ. ಇದು ಕಳೆದ ಸಾಲಿಗಿಂತ 7% ಹೆಚ್ಚಳವಾಗಿದೆ ಎಂದು ತಿಳಿದುಬಂದಿದೆ.
ಅಂತರರಾಷ್ಟ್ರೀಯ ರೊಬೊಟಿಕ್ಸ್ ಒಕ್ಕೂಟ ಪ್ರಕಟಿಸಿದ ವಿಶ್ವ ರೊಬೊಟಿಕ್ಸ್ 2025 ವರದಿ ಪ್ರಕಾರ, ಕೈಗಾರಿಕಾ ರೊಬೊಗಳ ಅಳವಡಿಕೆಯಲ್ಲಿ ಭಾರತವು ಈಗ ಜಗತ್ತಿನಲ್ಲೇ 6ನೇ ಸ್ಥಾನವನ್ನು ಪಡೆದಿದೆ.
ಇದನ್ನು ನೋಡಿ: ಭಾರತದ ‘ಅಗ್ನಿ-ಪ್ರೈಮ್’ ಕ್ಷಿಪಣಿ ರೈಲು ಲಾಂಚರ್ನಿಂದ ಯಶಸ್ವಿ ಉಡಾವಣೆ ಮಿನಿ
ಕಾರ್ಖಾನೆಗಳಲ್ಲಿ ರೊಬೊಗಳ ಅಳವಡಿಕೆಯಲ್ಲಿ ಜರ್ಮನಿ, ದಕ್ಷಿಣ ಕೊರಿಯಾ, ಅಮೆರಿಕ, ಜಪಾನ್ ಮತ್ತು ಚೀನಾ ದೇಶಗಳು ಮುಂಚೂಣಿಯಲ್ಲಿದ್ದು, ಭಾರತವು ಇವರ ನಂತರದ ಸ್ಥಾನದಲ್ಲಿದೆ.
ಅದೇ ಸಮಯದಲ್ಲಿ, ಯಂತ್ರಗಳ ಒಟ್ಟು ಬಳಕೆಯಲ್ಲಿ ಭಾರತವು ಜಗತ್ತಿನಲ್ಲಿ 10ನೇ ಸ್ಥಾನದಲ್ಲಿದೆ ಎಂದು ವರದಿ ಸ್ಪಷ್ಟಪಡಿಸಿದೆ. ಕೈಗಾರಿಕಾ ಕ್ಷೇತ್ರದಲ್ಲಿ ತಂತ್ರಜ್ಞಾನ ವಿಸ್ತರಣೆಯ ಈ ಪ್ರಗತಿ ದೇಶದ ಉತ್ಪಾದನಾ ಸಾಮರ್ಥ್ಯ ಹೆಚ್ಚಳಕ್ಕೆ ನೆರವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
