ಕೊರಟಗೆರೆ: ತಾಲ್ಲೂಕಿನ ಕೋಳಾಲ ಹೋಬಳಿಯ,ಸರ್ಕಾರಿ ಪದವಿ ಪೂರ್ವ ಕಾಲೇಜು ಇರಕಸಂದ್ರ ಕಾಲೋನಿ. ರಾಷ್ಟ್ರೀಯ ಸೇವಾ ಯೋಜನೆ ಘಟಕ ವಾರ್ಷಿಕ ವಿಶೇಷ ಶಿಬಿರ 2025ನೇ ಸಾಲಿನ ಕಾರ್ಯಕ್ರಮವನ್ನು. ಶ್ರೀ ಕುಂಚಿಟಿಗರ ಮಹಾಸಂಸ್ಥಾನ ಮಠ ಶ್ರೀ ನರಸಿಂಹ ಗಿರಿ ಸುಕ್ಷೇತ್ರ ಎಲರಾಂಪುರ ಮಠದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

ಡಾ: ಶ್ರೀ ಹನುಮಂತನಾಥ ಸ್ವಾಮೀಜಿ ಮಾತನಾಡಿ, ಎನ್ಎಸ್ಎಸ್ ಕ್ಯಾಂಪ್ ಎಂದರೆ. ಎಲ್ಲರಿಗೂ ಒಂದು ಉತ್ಸಾಹ. ಧೈರ್ಯ. ಸಂತೋಷವಾಗಿರುತ್ತದೆ. ಈ ದಿನವನ್ನು ಬಲವಂತವಾಗಿ ಕೂರಿಸುವಂತಹ. ಕ್ಯಾಂಪ್ ಮಾಡುವಂತಹ ಪರಿಸ್ಥಿತಿ ಸಮಾಜದಲ್ಲಿ ಬಂದಿದೆ. ಕಾಲೇಜಿಗೂ ಬಂದಿದೆ. ಈ ದಿನಗಳಲ್ಲಿ ಇಂದಿನ ಕಾಲಕ್ಕೆ ಹೋಲಿಸಿದರೆ. ಈಗ ಪುಸ್ತಕ. ಸೈಕಲ್. ಯೂನಿಫಾರಂ. ಬಿಸಿಊಟ. ಸ್ಕಾಲರ್ಶಿಪ್. ಕೊಡುತ್ತಿದ್ದಾರೆ. ಇಂದೆಲ್ಲ ಎನ್ಎಸ್ಎಸ್ ಕ್ಯಾಂಪ್ ಇರುವುದು ಬೇರೆ ಬೇರೆ ಯೋಜನೆಗಳಿಗೆ ತಲುಪುವಂತಹ ಕೆಲಸ ಆಗುತ್ತಿತ್ತು. ಇಂದು ಎನ್ಎಸ್ ಎಸ್ ಕ್ಯಾಂಪ್ ನ ಮುಂಚೆ ನಷೆ ಮುಕ್ತ ಭಾರತ ವಾಗಬೇಕು. ನಶೆ ಎಂದರೆ ಧೂಮಪಾನ ಮದ್ಯಪಾನ ಮಾಡುವುದು. ಒಂದು ಕಡೆಯಾದರೆ. ಪಂಚರ್ ಸಲ್ಯೂಷನ್. ಪೈಂಟ್ ಟಿನ್ನರ್. ಸೇವಿಸುವುದು ಕೂಡ ನಶೆ ಎಂದರ್ಥ. ನಶೆಯ ಮುಖ್ಯ ಅಭಿಯಾನ ತಂದೆ ತಾಯಿ ಕುಡಿಯುವುದು ಬಿಡಿಸಬೇಕು. ತಂಬಾಕು ಬಿಡಿ-ಸಿಗರೇಟು ಕುಡಿಯುವುದನ್ನು ಬಿಡಿಸಬೇಕು. ವಿಶೇಷವಾಗಿ ಆರೋಗ್ಯ ಅರಿವು ಮೂಡಿಸಬೇಕು. ಇವೆಲ್ಲ ನಶೆ ಒಂದೆಡೆಯಾದರೆ. ಕೆಟ್ಟದಾಗಿ ಚಿಂತನೆ ಮಾಡುವುದು. ಕೂಡ ನಶೆ ಎಂದರ್ಥ. ಇನ್ನೊಂದು ಹೆಜ್ಜೆ ಮುಂದೆ ಹೋಗಿ ನನಗೆ ನಾನೇ ಬುದ್ಧಿವಂತ. ನನ್ನ ಬಿಟ್ಟರೆ ಯಾರು ಇಲ್ಲ. ತಲೆಗೆ ತುಂಬಿಕೊಂಡರೆ ನಶೆ, ದೊಡ್ಡವರಿಗೆ ಬೆಲೆ ಅಪ್ಪ-ಅಮ್ಮನಿಗೆ ಗೌರವ. ಗುರುಹಿರಿಯರಿಗೆ ಗೌರವ. ಈಗಿನ ಕಾಲದಲ್ಲಿ ಗೌರವ ಕೊಡದೆ ಇರುವವರು ಈ ಪದ ಅವರಿಗೆ ಸೀಮಿತವಾಗುತ್ತದೆ. ಇಂದೆಲ್ಲ ಮಹಾತ್ಮ ಗಾಂಧೀಜಿ. ಬಸವಣ್ಣ. ಬುದ್ಧ. ಡಾ: ಬಿ ಆರ್ ಅಂಬೇಡ್ಕರ್ ಎಂದರೆ ನಮಗೆಲ್ಲ ಗೌರವ ಇರುತ್ತಿತ್ತು. ಕಾಲೇಜು ಶಾಲೆಗಳಿಗೆ ಹೋಗಿ ಭಾವನೆಯಿಂದ ಆಚರಣೆ ಮಾಡಿ ಕೈಮುಗಿದು ಬರುತ್ತಿದ್ದೆವು. ಇವುಗಳನ್ನು ವಿದ್ಯಾರ್ಥಿ ವಿದ್ಯಾರ್ಥಿನಿಯರು ಮೈಗುಾಡಿಸಿಕೊಳ್ಳಬೇಕು. ಎನ್ಎಸ್ಎಸ್ ಕ್ಯಾಂಪ್ ಎಂದರೆ ಮಹಾತ್ಮ ಗಾಂಧೀಜಿಯವರು ಒಂದು ಕನಸು ಕಂಡಿದ್ದಾರೆ. ಹಳ್ಳಿ-ಹಳ್ಳಿ ಗ್ರಾಮಗಳಿಗೆ ಹೋಗಿ. ಗಿಡಗಳನ್ನು. ಪರಿಸರವನ್ನು. ನೈರ್ಮಲ್ಯವನ್ನು. ಸ್ವಚ್ಛತೆ ಮಾಡುವುದನ್ನು ಕನಸು ಕಂಡಿದ್ದಾರೆ. ಹಾಗಾಗಿ ತಾವುಗಳೆಲ್ಲರೂ ಕ್ಯಾಂಪ್ ಭಾಗವಹಿಸುವವರು ಎಲೆರಾಪುರ ಗ್ರಾಮದ ಸರ್ಕಾರಿ ಆಸ್ಪತ್ರೆ. ಸಾರ್ವಜನಿಕರ ಶಾಲೆ. ಬಸ್ ನಿಲ್ದಾಣ. ಸರ್ಕಾರಿ ಶಾಲೆ. ಮುಂತಾದು ಕಡಗಳಲ್ಲಿ ಸ್ವಚ್ಛತೆ ಮಾಡಿ. ತಾವು ಬಂದಿರುವ ಏಳು ದಿನಗಳ ಕಾಲ ಯಾವುದೇ ತೊಂದರೆಯಾಗದಂತೆ ಕೆಲಸ ನಿರ್ವಹಿಸಬೇಕು ಎಂದು ಹೇಳುತ್ತಾ. ನಮ್ಮ ಮಠಕ್ಕೆ ಒಂದು ವಾರಗಳ ಕಾಲ ನೀವೆಲ್ಲ ಬಂದಿದ್ದು ಅವರಿಗೆ ನಮ್ಮ ಮಠದಿಂದ ಉಚಿತವಾಗಿ ಬಟ್ಟೆ. ಊಟ. ಕುಡಿಯುವ ನೀರು. ಮಲಗುವ ವ್ಯವಸ್ಥೆ ಮಾಡುತ್ತೇವೆ. ನೀವುಗಳು ಸಂಸ್ಕಾರವಂತರಾಗಬೇಕು. ಬೇರೆ ಬೇರೆ ದುಶ್ಚಟಗಳಿಗೆ ದಾಸನಾಗಿ ಬಲಿಯಾದರೆ. ನಿಮ್ಮನ್ನು ಹೊರಗಡೆ ತರುವುದು ಬಹಳ ಕಷ್ಟ ಅದಕ್ಕೆ ತಾವುಗಳು ಸಂಸ್ಕೃತಿ ಒಳ್ಳೆಯ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಈಸಂದರ್ಭದಲ್ಲಿ ಮಾಜಿ ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಆರ್.ಎಸ್. ರಾಜಣ್ಣ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ನರಸಿಂಹರಾಜು. ಪಿಡಿಓ ರಮೇಶ್. ಎಸ್. ಡಿ.ಎಂ.ಸಿ. ಉಪಾಧ್ಯಕ್ಷ ಈಶ್ವರ್. ಪ್ರಾಂಶುಪಾಲರಾದ ಪರಮೇಶ್. ಪ್ರಾಧ್ಯಾಪಕರಾದ ನಾಗೇಂದ್ರ ಕೆ.ಆರ್.. ರೋಹಿಣಿ ಯು.ಎಲ್. ದುಶ್ಯಂತ್ ಟಿ.ಎನ್. ಕಾಲೇಜಿನ ಶಿುಕ್ಷಕರು ಹಾಜರಿದ್ದರು.
ವರದಿ ನರಸಿಂಹಯ್ಯ ಹೊಸಕೋಟೆ
