ಕೊರಟಗೆರೆ:- ತಾಲೂಕಿನ ಜಟ್ಟಿ ಅಗ್ರಹಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮಕ್ಕಳಿಗೆ ರೋಟರಿ ಕ್ಲಬ್ ವತಿಯಿಂದ ವಿದ್ಯಾ ಸ್ಪೂರ್ತಿ ವಿನೂತನ ಕಾರ್ಯಕ್ರಮದ ಅಡಿಯಲ್ಲಿ ರೋಟರಿ ಬೆಂಗಳೂರು ಗೋಕುಲ್ ವಿದ್ಯಾ ಸಂಸ್ಥೆಯು ಪ್ರತಿ ವರ್ಷದಂತೆ ಈ ವರ್ಷವೂ ಸಹ ವಿದ್ಯಾರ್ಥಿಗಳ ಅನುಕೂಲಕ್ಕೆ ಲೇಖನಿ ಕಲಿಕಾ ಸಾಮಗ್ರಿಗಳನ್ನ ವಿತರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳು ಅತಿ ಹೆಚ್ಚು ವಿಡಿಯೋ ಮೊಬೈಲ್ ಹಾಗೂ ಟಿವಿ ಕಡೆ ಗಮನ ಕೊಡುತ್ತಿದ್ದಾರೆ ಅದೆಲ್ಲವನ್ನು ಮರೆತು ವಿದ್ಯಾಭ್ಯಾಸದ ಕಡೆ ಗಮನ ಕೊಡಬೇಕು ಈಗ ನೀವು ವಿದ್ಯಾಭ್ಯಾಸಕ್ಕೆ ಗಮನಕೊಟ್ಟರೆ ಮುಂದೆ ನಿಮ್ಮ ಭವಿಷ್ಯ ಸುಂದರವಾಗಿರುತ್ತದೆ ನೀವು ಕೂಡ ನಿಮ್ಮ ಶಾಲೆಯ ಮಕ್ಕಳಿಗೆ ಸಹಾಯ ಹಸ್ತ ನೀಡಬಹುದು ನಾವು ಕೂಡ ಪ್ರತಿಯೊಬ್ಬರೂ ನಿಮಗೆ ಸಹಾಯ ಮಾಡುತ್ತಿರುವುದು ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ನಮ್ಮ ದುಡಿಮೆಯಲ್ಲಿ ಸ್ವಲ್ಪ ಹಣವನ್ನು ನಿಮಗಾಗಿ ನೀಡುತ್ತಿದ್ದೇವೆ ಇದರ ಸದುಪಯೋಗ ಪಡೆದುಕೊಂಡು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ ಹಾಗೆಯೇ ಬಡವರಲ್ಲಿ ಹೃದಯದ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ನಮ್ಮ ಗಮನಕ್ಕೆ ತನ್ನಿ ನಮ್ಮ ರೋಟರಿ ಸಂಸ್ಥೆಯ ವತಿಯಿಂದ ಉಚಿತವಾಗಿ ಚಿಕಿತ್ಸೆಯನ್ನು ಕೊಡಿಸಲಾಗುವುದು ಎಂದು ತಿಳಿಸಿದರು.
ರೋಟರಿ ಕ್ಲಬ್ ಸಿದ್ದರಬೆಟ್ಟ ಅಧ್ಯಕ್ಷ ಬಾಲಾಜಿ ದರ್ಶನ್ ಮಾತನಾಡಿ ನಾಲ್ಕು ಜನರಿಂದ ಪ್ರಾರಂಭವಾದ ಈ ರೋಟರಿ ಸಂಸ್ಥೆ ಇಂದು 200 ದೇಶಗಳಲ್ಲಿ ಲಕ್ಷಾಂತರ ಸ್ವಯಂಸೇವಕರು ಈ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ನಮ್ಮ ರಾಜ್ಯದ ಅನೇಕ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ ಸ್ಕೂಲ್ ಬ್ಯಾಗ್, ಯೂನಿಫಾರ್ಮ್, ಕಲಿಕಾ ಸಾಮಗ್ರಿಗಳು ಸೇರಿದಂತೆ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಕೂಡ ಉಚಿತವಾಗಿ ನಮ್ಮ ರೋಟರಿ ಕ್ಲಬ್ ಸಮಸ್ಯೆ ಮಾಡಿಕೊಡುತ್ತದೆ ಇದೆಲ್ಲವೂ ಸರ್ಕಾರಿ ಶಾಲಾ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರೋಟರಿ ಗೋಕುಲ್ ವಿದ್ಯಾ ಸಂಸ್ಥೆ ಬೆಂಗಳೂರು ಸುಂದರ್ ಮೂರ್ತಿ, ಐಪಿಪಿ ಪ್ರಸಾದ್, ರೋಟರಿ ಸಂಸ್ಥಾಪಕ ಕೊರಟಗೆರೆ ಶ್ರೀನಿವಾಸ್ ಮೂರ್ತಿ, ಟೋಲ್ ಕೇಬಲ್ ಸಿದ್ದಗಂಗಯ್ಯ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸರಸ್ವತಮ್ಮ ಮಂಜುನಾಥ್, ಎಸ್ ಡಿ ಎಮ್ ಸಿ ಅಧ್ಯಕ್ಷರು ರಂಗಯ್ಯ,ರಾಮಯ್ಯ, ಅಂಜಿನಪ್ಪ, ಸೇರಿದಂತೆ ಇತರರು ಇದ್ದರು.
